SSMB 29 Movie : RRR ಚಿತ್ರದ ನಂತರ ರಾಜಮೌಳಿ ಮಹೇಶ್ ಬಾಬು ಜೊತೆ ಸಿನಿಮಾ ಮಾಡಲಿದ್ದಾರೆ ಎಂಬುದು ಗೊತ್ತೇ ಇದೆ. ರಾಜಮೌಳಿ-ಮಹೇಶ್ ಸಿನಿಮಾ ಅನೌನ್ಸ್ ಆದ ದಿನದಿಂದಲೂ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿತ್ತು. ಈ ಸಿನಿಮಾ ಟ್ರೆಷರ್ ಹಂಟ್ ಮತ್ತು ಸಾಹಸಮಯ ಸಾಹಸ ಸಿನಿಮಾದಂತೆ ಇರಲಿದೆ ಎಂದು ರಾಜಮೌಳಿ ಈಗಾಗಲೇ ಹೇಳಿದ್ದಾರೆ. ಮ್ಯೂಸಿಕ್ ಸೆಟ್ಟಿಂಗ್ಸ್ ಈಗಾಗಲೇ ಶುರುವಾಗಿದ್ದು, ಕಥೆ ಕೂಡ ಕಂಪ್ಲೀಟ್ ಆಗಿದೆ ಎಂದು ವಿಜಯೇಂದ್ರ ಪ್ರಸಾದ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: South Actress: ಪ್ರಭುದೇವ ಜೊತೆ ಪ್ರೀತಿ.. ಕಿರಿಯ ನಿರ್ದೇಶಕನ ಜೊತೆ ಮದುವೆ, ಸೌತ್‌ʼನ ಅತಿ ಹೆಚ್ಚು ಸಂಭಾವನೆ ಪಡೆವ ನಟಿ ಈಕೆ! 


ಈ ಸಿನಿಮಾದಲ್ಲಿ ಬೇರೆ ದೇಶದ ನಟರೂ ಇರಲಿದ್ದಾರೆ ಎಂದು ವಿಜಯೇಂದ್ರ ಪ್ರಸಾದ್ ಈ ಹಿಂದೆ ಹೇಳಿದ್ದರು. ರಾಜಮೌಳಿ ಈಗಾಗಲೇ RRR ಸಿನಿಮಾದಲ್ಲಿ ಕಥೆಗೆ ತಕ್ಕಂತೆ ಬೇರೆ ದೇಶಗಳಿಂದ ನಟ, ನಾಯಕಿಯರನ್ನು ಕರೆತಂದಂತೆ SSMB29 ಸಿನಿಮಾದಲ್ಲೂ ಇಂಡೋನೇಷ್ಯಾದ ನಟಿಯೊಬ್ಬರನ್ನು ಕರೆತರಲಿದ್ದಾರೆ ಎಂಬ ಸುದ್ದಿ ಬಂದಿದೆ. ರಾಜಮೌಳಿ-ಮಹೇಶ್ ಚಿತ್ರದಲ್ಲಿ ಇಂಡೋನೇಷ್ಯಾದ ಬ್ಯೂಟಿ ಚೆಲ್ಸಿಯಾ ಎಲಿಜಬೆತ್ ಇಸ್ಲಾನ್ ನಟಿಸಲಿದ್ದಾರೆ ಎಂಬ ವರದಿಗಳಿವೆ.


ಇದನ್ನೂ ಓದಿ: ತೆರೆದ ಬೆನ್ನು ತೋರಿಸಿದ Bigg Boss ಬ್ಯೂಟಿ.. ಫೋಟೋ ಸಖತ್‌ ವೈರಲ್! 


ಆದರೆ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆಯಾಗದಿದ್ದರೂ, ಸುದ್ದಿ ರಾಷ್ಟ್ರವ್ಯಾಪಿ ವೈರಲ್ ಆಗಿದೆ. ಚೆಲ್ಸಿಯಾ ಎಲಿಜಬೆತ್ ಇಸ್ಲಾನ್ ಅನೇಕ ಹಾಲಿವುಡ್, ಕೊರಿಯನ್ ಮತ್ತು ಇಂಡೋನೇಷಿಯನ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಆಕೆ ತನ್ನ ಇನ್ಸ್ಟಾಗ್ರಾಮ್ ನಲ್ಲಿ ರಾಜಮೌಳಿ ಅವರನ್ನು ಫಾಲೋ ಮಾಡುತ್ತಿರುವುದು ಗಮನಾರ್ಹವಾಗಿದ್ದು.. ರಾಜಮೌಳಿ ಅವರನ್ನು ಸಂಪರ್ಕಿಸಿರಬೇಕು.. ಅವರು ಓಕೆ ಎಂದಿರಬೇಕು.. ಅದಕ್ಕಾಗಿಯೇ ಅವರು ಸೋಷಿಯಲ್‌ ಮಿಡಿಯಾದಲ್ಲಿ ರಾಜಮೌಳಿಯನ್ನು ಫಾಲೋಮಾಡುತ್ತಿದ್ದಾರೆ ಎಂದು ನೆಟಿಜನ್‌ಗಳು ಕಾಮೆಂಟ್‌ ಮಾಡುತ್ತಿದ್ದಾರೆ.. ಕೆಲವರು ಇದನ್ನು ಕೇವಲ ವದಂತಿ ಎಂದು ತಳ್ಳಿ ಹಾಕುತ್ತಿದ್ದಾರೆ... ಸದ್ಯ SSMB29 ಚಿತ್ರದ ಬಗ್ಗೆ ರಾಜಮೌಳಿ ಏನಾದರೂ ಅಪ್‌ಡೇಟ್ ನೀಡುತ್ತಾರೆಯೇ ಎಂದು ಅಭಿಮಾನಿಗಳು ಮತ್ತು ಪ್ರೇಕ್ಷಕರು ಕಾಯುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ