ಅನಾರೋಗ್ಯದಿಂದ ಚೇತರಿಸಿಕೊಂಡು ಶೂಟಿಂಗ್ ಗೆ ಹಾಜರಾದ ಇರ್ಫಾನ್ ಖಾನ್
ಹಲವು ತಿಂಗಳುಗಳ ಕಾಲ ಅನಾರೋಗ್ಯದಿಂದ ಬಳಲುತಿದ್ದ ನಟ ಇರ್ಫಾನ್ ಖಾನ್ ಈಗ ಶೂಟಿಂಗ್ ಗೆ ಹಾಜರಾಗಿದ್ದಾರೆ. ಲಂಡನ್ ನಲ್ಲಿ ಅವರು ತಮ್ಮ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು.ಈಗ ಅಲ್ಲಿಂದ ವಾಪಾಸ್ ಆದ ನಂತರ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದಾರೆ.
ನವದೆಹಲಿ: ಹಲವು ತಿಂಗಳುಗಳ ಕಾಲ ಅನಾರೋಗ್ಯದಿಂದ ಬಳಲುತಿದ್ದ ನಟ ಇರ್ಫಾನ್ ಖಾನ್ ಈಗ ಶೂಟಿಂಗ್ ಗೆ ಹಾಜರಾಗಿದ್ದಾರೆ. ಲಂಡನ್ ನಲ್ಲಿ ಅವರು ತಮ್ಮ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು.ಈಗ ಅಲ್ಲಿಂದ ವಾಪಾಸ್ ಆದ ನಂತರ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದಾರೆ.
ಈ ವಿಷಯವನ್ನು ಈಗ ಸಿನಿಮಾ ಮಾರುಕಟ್ಟೆ ವಿಮರ್ಶಕ ತರಣ್ ಆದರ್ಶ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
"ಇರ್ಫಾನ್ ಖಾನ್ ಕೆಲಸಕ್ಕೆ ಹಾಜರಾಗಿದ್ದಾರೆ. ಇಂದಿನಿಂದ ಉದಯಪುರ್ ದಲ್ಲಿ ಶೂಟಿಂಗ್ ಪ್ರಾರಂಭವಾಗಿದೆ.ಇದನ್ನು ಹೋಮಿ ಅದಾಜನಿಯಾ ನಿರ್ದೇಶಿಸಿದ್ದರೆ, ದಿನೇಶ್ ವಿಜನ್ ನಿರ್ಮಿಸಿದ್ದಾರೆ.ಇದು ಲಂಡನ್ ಹಾಗೂ ಉದಯಪುರ್ ನಲ್ಲಿ ಚಿತ್ರಿಕರಣಗೊಳ್ಳಲಿದೆ.ಇದು ಹಿಂದಿ ಮೀಡಿಯಂ ಚಿತ್ರಣದ ನೂತನ ಅವತರಿಣಿಕೆ "ತರಣ್ ಆದರ್ಶ್ ಬರೆದುಕೊಂಡಿದ್ದಾರೆ.
ಈ ಚಿತ್ರದಲ್ಲಿ ಇರ್ಫಾನ್ ಖಾನ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಆದರೆ ಹಿರೋಯಿನ್ ಯಾರು ಎನ್ನುವುದು ಇನ್ನು ತಿಳಿದುಬಂದಿಲ್ಲ. 2017 ರಲ್ಲಿ ಇರ್ಫಾನ್ ಖಾನ್ ಮತ್ತು ಸಭಾ ಕಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.ಈಗ ಅದೇ ಕಥಾ ಹಂದರವನ್ನು ಈ ಚಿತ್ರವು ಒಳಗೊಳ್ಳಲಿದೆ ಎನ್ನಲಾಗಿದೆ.
2018 ಮಾರ್ಚ್ ನಲ್ಲಿ ಇರ್ಫಾನ್ ಖಾನ್ ನೀರೊಂಡ್ರೋನ್ ಟ್ಯೂಮರ್ ನಿಂದ ಬಳಲುತ್ತಿದ್ದರು.ಆಗ ಅವರು ಹೆಚ್ಚಿನ ಚಿಕಿತ್ಸೆಗಾಗಿ ತೆರಳಿದ್ದರು.