ಬೆಂಗಳೂರು: ಉಪೇಂದ್ರ ಎಂದರೆ ಸಾಕು, ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ರೀತಿಯ ಸಿನಿಮಾ ಮೇಕಿಂಗ್ ಗೆ ಹೆಸರು ವಾಸಿ ಎನ್ನುವುದು ಪ್ರತಿಯೊಬ್ಬರ ಮನದಲ್ಲಿಯೂ ಅಚ್ಚೊತ್ತಿ ಬಿಟ್ಟಿದೆ.ಅದರಲ್ಲೂ ಅವರ ಸಿನಿಮಾಗಳ ಕಥೆಗಳೆಂದರೆ ನಾನಾರ್ಥಗಳನ್ನು ಒಳಗೊಂಡಿರುತ್ತವೆ ಎನ್ನುವ ಮಾತಿದೆ.ಇಂತಹ ಸಂದರ್ಭದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಅವರು ಕೌಟುಂಬಿಕ ಮನರಂಜನಾತ್ಮಕ ಚಿತ್ರ ಹೋಮ್ ಮಿನಿಸ್ಟರ್ ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಓ ಗಂಡಸರೇ, ನಿಮ್ಮ ಹೋಂ ಮಿನಿಸ್ಟರ್ ಜೊತೆ ಈ ಸವಾಲನ್ನು ಒಪ್ಪುವಿರಾ? ಫ್ಯಾನ್ಸ್‌ಗೆ ಉಪ್ಪಿ ಕೊಟ್ರು ಟಾಸ್ಕ್‌!


ಈ ಹಿನ್ನಲೆಯಲ್ಲಿ ಜೀ ಕನ್ನಡ ನ್ಯೂಸ್ ಗೆ ನೀಡಿರುವ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಸಿನಿಮಾ ಹಾಗೂ ತಮ್ಮ ಪ್ರಜಾಕೀಯ ಪಕ್ಷದ ಕುರಿತಾಗಿ ಉಪೇಂದ್ರ (Upendra) ಅವರು ವಿಸ್ತೃತವಾಗಿ ಮಾತನಾಡಿದ್ದಾರೆ.


'ಹೋಮ್‌ ಮಿನಿಸ್ಟರ್‌ ಸಿನಿಮಾ ಭರ್ಜರಿಯಾಗಿ ಓಡುತ್ತಿದೆ.ಇದು ಒಂದು ಕುಟುಂಬ ನೋಡುವ ಸಿನಿಮಾ, ಮಾಸ್ ಸಿನಿಮಾಗಳ ನಡುವೆ ಈ ಸಿನಿಮಾ‌ ತರುಂಬಾ ಡಿಫರೆಂಟಾಗಿದೆ ಮತ್ತು  ಹೊಸತಾಗಿದೆ.ಇದು ಹೋ ಮೇಕರ್‌ ಸಿನಿಮಾ. ಹೋ ಮಿನಿಸ್ಟರ್‌ ಸಿನಿಮಾದಲ್ಲಿ ಇಂಟ್ರಸ್ಟಿಂಗ್‌ ಎಲಿಮೆಂಟ್‌ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.


Vikrant Rona: ಜುಲೈ 28ಕ್ಕೆ ಜಗತ್ತಿನಾದ್ಯಂತ ರಿಲೀಸ್ ಆಗಲಿದೆ ‘ವಿಕ್ರಾಂತ್ ರೋಣ’..!


ಇದೇ ವೇಳೆ ಅವರು ಹೋಮ್ ಮಿನಿಸ್ಟರ್ (Home minister) ಚಿತ್ರದ ಟೈಟಲ್ ಗೂ ಹಾಗೂ ರಾಜಕೀಯಕ್ಕೂ ಏನಾದರೂ ಸಂಬಂಧ ಇದೆಯಾ? ಎನ್ನುವ ವಿಚಾರವಾಗಿ ಮಾತನಾಡುತ್ತಾ ಅವರು "ಹೋಂ ಮಿನಿಸ್ಟರ್‌ ಅನ್ನೋ ಟೈಟಲ್‌ಗೂ ರಾಜಕೀಯಕ್ಕೂ ಏನೂ ಸಂಭಂಧವಿಲ್ಲ.ಎರಡೂ ಬೇರೆನೇ.ನಾವು ತಪ್ಪು ಮಾಡ್ತಾ ಇದ್ದೀವಿ ಅಂತ ಗೊತ್ತಾದ್ರೂ ಓಡ್ತಾ ಇದ್ದೀವಿ.ಪ್ರಜಾಕೀಯ ಮತ್ತು ರಾಜಕೀಯ ಬೇರೆ.ಮನೆಯಲ್ಲಿ ಪ್ರಿಯಾಂಕ ಹೋಂ ಮಿನಿಸ್ಟರ ಆಗಿ ಎಲ್ಲಾವನ್ನೂ ಬ್ಯಾಲೆನ್ಸ್‌ ಆಗಿ ನಿಭಾಯಿಸುತ್ತಾಳೆ.ನಾನೂ ಕೂಡ ಸಿನಿಮಾ, ಪ್ರಜಾಕೀಯ,ಜೀವನ ಎಲ್ಲವನ್ನೂ ಟೈಮ್‌ ಮಾಡ್ಕೋಡು ಬ್ಯಾಲೆನ್ಸ್‌ ಮಾಡ್ತಾ ಇದ್ದೀನಿ" ಎಂದು ಅವರು ಪ್ರತಿಕ್ರಿಯಿಸಿದರು.


"ಪ್ರಜಾಕೀಯದ ಮೂಲಕ ಜನಸೇವೆ ಮಾಡಲು ನಾನು ಸಿದ್ದನಿದ್ದೇನೆ.ಪ್ರಸ್ತುತ ರಾಜಕೀಯದ ಬೇಸರ ವ್ಯಕ್ತಪಡಿಸಿದ ಉಪೇಂದ್ರ ಜನ್ರು ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ.ಸಿಂಪತಿ ವೋಟ್‌ ಹಾಕೋದು, ಪ್ರಚಾರಕ್ಕೆ ಮತ ಹಾಕುತ್ತಿದ್ದೇವೆ. ಯಾರೂ ಕೂಡ ಅಭಿವೃದ್ಧಿಗೆ ಮತ ಹಾಕುತ್ತಿಲ್ಲ.ಯಾಕೆ ಹೇಳಿ?.. ಮುಂದೆ ಈಗಿರೋ ವ್ಯವಸ್ಥೆ ಬದಲಾಗಲೇಬೇಕು. ಈ ವ್ಯವಸ್ಥೆಗೆ ಕಾರಣವಾಗಿವುದಕ್ಕೆ ನಮ್ಮನ್ನ ನಾವು ದೂಷಿಸಿಕೊಳ್ಳಬೇಕು ಎಂದು ಅವರು ಹೇಳಿದರು.


ಇದನ್ನೂ ಓದಿ: Girki: ‘ಗಿರ್ಕಿ’ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಸೆಂಚುರಿ ಸ್ಟಾರ್ ಶಿವಣ್ಣ


ಪ್ರಜಾಕೀಯದ ರಾಜಕೀಯ ಚಿಂತನೆ ಬಗ್ಗೆ ಮಾತನಾಡಿದ ಅವರು "ಪ್ರಜಾಕೀಯ ಪಕ್ಷ ನನ್ನದಲ್ಲ.ಇದು ಉಪೇಂದ್ರನ ಪಕ್ಷ ಅಲ್ಲ.ನಾನು ಕೂಡ ಇದ್ರಲ್ಲಿ ವರ್ಕರ್.‌ಎಲ್ಲಾರೂ ಬನ್ನಿ ಇನ್ವಾಲ್‌ ಆಗಿ. ಒಟ್ಟಾಗಿ ಕೆಲಸ ಮಾಡೋಣ ಅಂದ್ರು. ಪ್ರಮೋಷನ್‌, ಸಲೆಕ್ಷನ್‌, ಎಲೆಕ್ಷನ್‌, ರಿಜೆಕ್ಷನ್‌ ಎಲ್ಲಾ ನಮ್ಮದಾಗಿರುತ್ತೆ. ಪೆಟ್ಟು ಬಿದ್ದಾಗಲೇ ಜನ ಎಚ್ಚೆತ್ತುಕೊಳ್ಳೋದು.ನನ್ನ ಸಮಾಜ ಇದು ಸೇವೆ ಮಾಡಬೇಕು.ಜನ ಏನು ಮಾಡಿದ್ದಾನೆ ಅಂತ ಎಲ್ಲಾ ಕೇಳ್ತಾರೆ.ಅವಕಾಶ ಕೊಡಿ. ನನಗೆ ರಾಜಕೀಯ ಬೇಡ. ಪ್ರಜಾಕೀಯ ಬೇಕು. ಚೀಫ್‌ ಮಿನಿಸ್ಟರ್‌ ನಿಂದ ಹಿಡಿದು ಪ್ರೈಮ್‌ ಮಿನಿಸ್ಟರ್‌ ವರೆಗೂ ನಮ್ಮ ಹಣವೇ ಖರ್ಚಾಗುತ್ತಿದೆ.ಯಾಕೆ ನೀವು ಲೆಕ್ಕ ಕೇಳುತ್ತಿಲ್ಲಾ, ಎಜುಕೇಶನ್‌ ಸಿಸ್ಟಮ್‌ ಸರಿ ಇಲ್ಲ, ಹೆಲ್ತ್‌ ಸಿಸ್ಟಮ್‌ ಸರಿ ಇಲ್ಲ. ನಾನು ನಿಮ್ಮನ್ನ ಬದಲಾವಣೆ ಮಾಡಲು ಸಾಧ್ಯವೇ ಇಲ್ಲ.ನೀವೇ ಬದಲಾಗಿ. ಬನ್ನಿ ನಿಮಗೊಂದು ದಾರಿ ಇದೆ" ಎನ್ನುವ ಭರವಸೆಯನ್ನು ಉಪೇಂದ್ರ ಅವರು ನೀಡಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.