Vikrant Rona: ಜುಲೈ 28ಕ್ಕೆ ಜಗತ್ತಿನಾದ್ಯಂತ ರಿಲೀಸ್ ಆಗಲಿದೆ ‘ವಿಕ್ರಾಂತ್ ರೋಣ’..!

ಜುಲೈ 28ಕ್ಕೆ ಜಗತ್ತಿನಾದ್ಯಂತ ‘ವಿಕ್ರಾಂತ್‌ ರೋಣ’ 3D ಯಲ್ಲಿ ರಿಲೀಸ್ ಆಗಲಿದೆ ಎಂದು ನಟ ಕಿಚ್ಚ ಸುದೀಪ್ ಘೋಷಿಸಿದ್ದಾರೆ.

Written by - Malathesha M | Edited by - Puttaraj K Alur | Last Updated : Apr 2, 2022, 02:27 PM IST
  • ನಟ ಕಿಚ್ಚ ಸುದೀಪ್ ಅಭಿಮಾನಿ ಬಳಗಕ್ಕೆ ಯುಗಾದಿ ಹಬ್ಬದ ಪ್ರಯುಕ್ತ ಡಬಲ್ ಗಿಫ್ಟ್
  • ಜುಲೈ 28ಕ್ಕೆ ಜಗತ್ತಿನಾದ್ಯಂತ ‘ವಿಕ್ರಾಂತ್‌ ರೋಣ’ 3D ಯಲ್ಲಿ ರಿಲೀಸ್ ಆಗಲಿದೆ
  • ಯೂಟ್ಯೂಬ್‌ನಲ್ಲಿ ದಾಖಲೆ ಬರೆಯುತ್ತಿರುವ ‘ವಿಕ್ರಾಂತ್ ರೋಣ’ ಸಿನಿಮಾದ ಟೀಸರ್
Vikrant Rona: ಜುಲೈ 28ಕ್ಕೆ ಜಗತ್ತಿನಾದ್ಯಂತ ರಿಲೀಸ್ ಆಗಲಿದೆ ‘ವಿಕ್ರಾಂತ್ ರೋಣ’..! title=
ಜುಲೈ 28ಕ್ಕೆ ‘ವಿಕ್ರಾಂತ್ ರೋಣ’ ದರ್ಶನ

ಬೆಂಗಳೂರು: ನಟ ಕಿಚ್ಚ ಸುದೀಪ್(Kiccha Sudeep) ಅಭಿಮಾನಿ ಬಳಗಕ್ಕೆ ಇಂದು ಯುಗಾದಿ ಪ್ರಯುಕ್ತ ಡಬಲ್ ಗಿಫ್ಟ್ ಸಿಕ್ಕಿದೆ. ಒಂದು ಕಡೆ ಬೆಳಗ್ಗೆ 9:55ಕ್ಕೆ ‘ವಿಕ್ರಾಂತ್‌ ರೋಣ’ ಸಿನಿಮಾ ಟೀಸರ್ ರಿಲೀಸ್(Vikrant Rona Teaser Release) ಆಗಿದ್ದರೆ, ಮತ್ತೊಂದೆಡೆ ‘ವಿಕ್ರಾಂತ್‌ ರೋಣ’ ಸಿನಿಮಾ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಇದು ಕಿಚ್ಚ ಸುದೀಪ್ ಫ್ಯಾನ್ಸ್ ಸಂಭ್ರಮ ಮುಗಿಲು ಮುಟ್ಟುವಂತೆ ಮಾಡಿದೆ.

ಅಂದಹಾಗೆ ಜುಲೈ 28ಕ್ಕೆ ಜಗತ್ತಿನಾದ್ಯಂತ ‘ವಿಕ್ರಾಂತ್‌ ರೋಣ’ 3Dಯಲ್ಲಿ(Vikrant Rona 3D) ರಿಲೀಸ್ ಆಗಲಿದೆ ಎಂದು ನಟ ಕಿಚ್ಚ ಸುದೀಪ್ ಘೋಷಿಸಿದ್ದಾರೆ. ‘ವಿಕ್ರಾಂತ್‌ ರೋಣ’ ಟೀಸರ್‍ನ ಕನ್ನಡ ವರ್ಷನ್ ರಿಲೀಸ್ ಮಾಡಿ ಟ್ವೀಟ್ ಮಾಡಿರುವ ನಟ ಸುದೀಪ್, ‘After a long and a beautiful journey,,,Happy to announce that #VikrantRona will hit the theaters on July 28th 2022, #VikrantRonaJuly28 in cinemas worldwide in 3D’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Vikrant Rona: ಟಿಕ್.. ಟಿಕ್.. ಟಿಕ್ ಬರುತಿದೆ ಕಾಲ..! 'ವಿಕ್ರಾಂತ್ ರೋಣ' ಟೀಸರ್ ರಿಲೀಸ್ ಗೆ ಕೌಂಟ್ ಡೌನ್..!

ಯೂಟ್ಯೂಬ್‌ನಲ್ಲಿ ಸುನಾಮಿ..!

ಈ ಮಧ್ಯೆ ಯೂಟ್ಯೂಬ್‌ನಲ್ಲಿ ‘ವಿಕ್ರಾಂತ್‌ ರೋಣ’(Vikrant Rona)ಟೀಸರ್ ಅಬ್ಬರ ಜೋರಾಗಿದೆ. ‘ವಿಕ್ರಾಂತ್‌ ರೋಣ’ ಟೀಸರ್ ರಿಲೀಸ್ ಆಗುತ್ತಿದ್ದಂತೆ ನಟ ಸುದೀಪ್ ಅಭಿಮಾನಿಗಳ ಸಾಗರ ಯೂಟ್ಯೂಬ್‌ನಲ್ಲಿ ಸುನಾಮಿಯಂತೆ ಮುನ್ನುಗ್ಗುತ್ತಿದೆ. ಸಿನಿಮಾದ ಟೀಸರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಹಲವು ದಾಖಲೆಗಳನ್ನು ಪುಡಿ ಪುಡಿ ಮಾಡಿದೆ.

‘ವಿಕ್ರಾಂತ್‌ ರೋಣ’ ಸಿನಿಮಾ ಟೀಸರ್(Vikrant Rona Cinema Teaser) ಅನ್ನು ವಿವಿಧ ಭಾಷೆಗಳಲ್ಲಿ ರಿಲೀಸ್‌ ಮಾಡಲಾಗಿದ್ದು, ತೆಲುಗು ಟೀಸರ್‌ ರಿಲೀಸ್‌ಗೆ ಟಾಲಿವುಡ್ ‘ಮೆಗಾಸ್ಟಾರ್’ ಚಿರಂಜೀವಿ ಸಾಥ್‌ ನೀಡಿದ್ದು, ಮಲಯಾಳಂ ಟೀಸರ್‌ಗೆ ನಟ ಮೋಹನ್ ಲಾಲ್, ತಮಿಳು ಭಾಷೆಯಲ್ಲಿ ಟೀಸರ್‌ ರಿಲೀಸ್‌ಗೆ ನಟ ಸಿಂಬು ಕೈಜೋಡಿಸಿದ್ದರು. ಹಾಗೆಯೇ ಹಿಂದಿ ವರ್ಷನ್ ಟೀಸರ್‌ ಅನ್ನು ನಟ ಸಲ್ಮಾನ್‌ ಖಾನ್‌ ರಿಲೀಸ್‌ ಮಾಡಿದ್ದಾರೆ.

ಇದನ್ನೂ ಓದಿ: 'ವಿಕ್ರಾಂತ್‌ ರೋಣ' ಟೀಸರ್‌ ರಿಲೀಸ್..!‌ ಮುಗಿಲು ಮುಟ್ಟಿದ ಸುದೀಪ್‌ ಅಭಿಮಾನಿಗಳ ಸಂಭ್ರಮ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News