ಮುಂಬೈ : ಬಾಲಿವುಡ್ನಿಂದ ಹಾಲಿವುಡ್ ವರೆಗೂ ಖ್ಯಾತಿ ಪಡೆದಿರುವ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಬೋಲ್ಡ್ ಅವತಾರಕ್ಕೆ ಮಾತ್ರವಲ್ಲ, ತಮ್ಮ ನೇರ ನುಡಿಗಳಿಗೂ ಹೆಸರುವಾಸಿಯಾಗಿದ್ದಾರೆ. ಪತಿ ನಿಕ್ ಜೊನಸ್ ಅವರೊಂದಿಗಿನ ತನ್ನ ಸಂಬಂಧಗಳ ಬಗ್ಗೆ ಪ್ರಿಯಾಂಕ ಓಪನ್ ಆಗಿ ಮಾತನಾಡುತ್ತಾರೆ. ಇತ್ತೀಚಿಗೆ ಪ್ರಿಯಾಂಕಾ ಚೋಪ್ರಾ ಸಂದರ್ಶನವೊಂದರಲ್ಲಿ ತಾವು 11 ಮಕ್ಕಳಿಗೆ ತಾಯಿಯಾಗುವ ಬಯಕೆ ಹೊಂದಿರುವುದಾಗಿ ತಿಳಿಸಿದ್ದಾರೆ. ಅವರು ತಮ್ಮದೇ ಆದ ಒಂದು ಕ್ರಿಕೆಟ್ ತಂಡವನ್ನು ನಿರ್ಮಿಸಲು ಬಯಸುವುದಾಗಿ ಹಾಸ್ಯ ಚಟಾಕಿಯನ್ನೂ ಹಾರಿಸಿದ್ದಾರೆ.


COMMERCIAL BREAK
SCROLL TO CONTINUE READING

ಸಂಡೇ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ಚೋಪ್ರಾಗೆ ಎಷ್ಟು ಮಕ್ಕಳು ಬೇಕು ಎಂಬ ಪ್ರಶ್ನೆಯನ್ನೂ ಕೇಳಲಾಯಿತು. ಈ ಪ್ರಶ್ನೆಗೆ ಪ್ರಿಯಾಂಕಾ ಚೋಪ್ರಾ (Priyanka Chopra) ಪ್ರತಿಕ್ರಿಯೆಯನ್ನು ಕೇಳಿ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ವಾಸ್ತವವಾಗಿ 38 ವರ್ಷದ ನಟಿ ದೇಸಿ ಗರ್ಲ್ ತನಗೆ 11 ಮಕ್ಕಳು ಬೇಕು ಎಂದು ಹೇಳುತ್ತಾ ಸ್ವತಃ ಜೋರಾಗಿ ನಗಲು ಪ್ರಾರಂಭಿಸಿದಳು. ಪ್ರಿಯಾಂಕಾ ಚೋಪ್ರಾ ತಮ್ಮದೇ ಕ್ರಿಕೆಟ್ ತಂಡವನ್ನು ನಿರ್ಮಿಸಲು ಬಯಸುವುದಾಗಿ ಹಾಸ್ಯಮಯವಾಗಿ ನುಡಿದಿದ್ದಾರೆ.


ಇದನ್ನೂ ಓದಿ - ಹಿರಿಯ ಬಾಲಿವುಡ್ ನಟಿ ನೀನಾ ಗುಪ್ತಾಗೆ ಸ್ಪೂರ್ತಿಯಾಗಿದ್ದ ಪ್ರಿಯಾಂಕಾ ಚೋಪ್ರಾ...ಇಲ್ಲಿದೆ ರಿಯಲ್ ಕಹಾನಿ..!


ಈ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆಯೂ ಮನಬಿಚ್ಚಿ ಮಾತನಾಡಿರುವ ಪ್ರಿಯಾಂಕ ಚೋಪ್ರಾ, ಪತಿ ನಿಕ್ ಜೋನಸ್ (Nick Jonas) ಅವರೊಂದಿಗಿನ ಏಜ್ ಗ್ಯಾಪ್ ಮತ್ತು ಕಲ್ಚರಲ್ ಡಿಫರೆನ್ಸಸ್ ಕುರಿತು ವಿಶೇಷ ಮಾಹಿತಿ ಹಂಚಿಕೊಂಡರು. ಪತಿ ನಿಕ್ ಜೊನಾಸ್ ಭಾರತೀಯ ಸಂಸ್ಕೃತಿಯನ್ನು ಸುಲಭವಾಗಿ ಅಳವಡಿಸಿಕೊಂಡಿದ್ದಾರೆ ಮತ್ತು ನಮ್ಮಿಬ್ಬರ ನಡುವೆ ವಯಸ್ಸಿನ ಅಂತರ ಒಂದು ವಿಷಯವೇ ಅಲ್ಲ. ಇದರಿಂದ ಯಾವ ಅಡ್ಡಿಯೂ ಇಲ್ಲ ಎಂದು ಪ್ರಿಯಾಂಕ ನಿಕ್ ಅವರನ್ನು ಹಾಡಿ ಹೊಗಳಿದರು.


ದಂಪತಿಗಳ ನಡುವೆ ಪರಸ್ಪರ ಹೊಂದಾಣಿಕೆ ಅಗತ್ಯ : 
ಸಂದರ್ಶನದಲ್ಲಿ ಪ್ರಿಯಾಂಕ ಮತ್ತವರ ಪತಿ ನಿಕ್ ಅವರ ನಡುವಿನ 10 ವರ್ಷಗಳ ವಯಸ್ಸಿನ ಅಂತರ ಮತ್ತು ಇಬ್ಬರ ಸಾಂಸ್ಕೃತಿಕ ಭಿನ್ನತೆಗಳ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಸರಳವಾಗಿಯೇ ಪ್ರತಿಕ್ರಿಯಿಸಿರುವ ದೇಸಿ ಗರ್ಲ್  ಇತರ ದಂಪತಿಗಳಂತೆ ನಾವು ಸಹ ಪರಸ್ಪರ ಅರ್ಥಮಾಡಿಕೊಳ್ಳುತ್ತೇವೆ ಮತ್ತು ಪರಸ್ಪರ ಹೊಂದಿಕೊಳ್ಳುತ್ತೇವೆ. ಇನ್ನು ವಯಸ್ಸಿನ ಅಂತರವು ನಮ್ಮಿಬ್ಬರ ನಡುವೆ ಯಾವುದೇ ಅಡಚಣೆಯನ್ನು ಉಂಟು ಮಾಡಿಲ್ಲ ಎಂದು ಒತ್ತಿ ಹೇಳಿದರು.


ಇದನ್ನೂ ಓದಿ - 9 ವರ್ಷ ಪೂರೈಸಿದ ಡಾನ್ 2 : ಡಾನ್ 3 ಚಿತ್ರ ನಿರ್ಮಾಣಕ್ಕೆ ಅಭಿಮಾನಿಗಳ ಒತ್ತಾಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.