ಕೆಜಿಎಫ್ ಚಿತ್ರವನ್ನು ಹಿಂದಿಕ್ಕಲಿದೆಯಾ ಸಲಾರ್? ಮತ್ತಷ್ಟು ಕುತೂಹಲ ಹೆಚ್ಚಿಸಿದ ಪ್ರಭಾಸ್ ನ್ಯೂ ಲುಕ್!
Salar Movie Updates: ಪ್ರಭಾಸ್ ಹುಟ್ಟುಹಬ್ಬಕ್ಕೆ ಶುಭಕೋರಲು ಹೊಂಬಾಳೆ ಫಿಲಂಸ್ ಸಲಾರ್ ಚಿತ್ರದ ವಿಶೇಷ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
Darling Prabhas: ಕೆಜಿಎಫ್ ನಂತರ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಈ ವರ್ಷ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಹೊಂಬಾಳೆ ಫಿಲಂಸ್‌ನ ಬಹುನಿರೀಕ್ಷಿತ ಚಿತ್ರ 'ಸಲಾರ್' ಡಿಸೆಂಬರ್ 22 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ದಕ್ಷಿಣ ಭಾರತದ ಆಕ್ಷನ್ ಸೂಪರ್‌ಸ್ಟಾರ್ ಪ್ರಭಾಸ್ ಮತ್ತು ಮಲಯಾಳಿ ಹಿಟ್ ಮೇಕರ್ ಸೂಪರ್‌ಸ್ಟಾರ್ ಪೃಥ್ವಿರಾಜ್ ಜೊತೆಯಾದ ಚಿತ್ರಕ್ಕಾಗಿ ಇಡೀ ಭಾರತವೇ ಕಾಯುತ್ತಿದೆ. ಹಿಟ್ ಚಿತ್ರಗಳ ಭಾಗವಾಗಿರುವ ಹೊಂಬಾಳೆ ಫಿಲ್ಮ್ಸ್ ಮತ್ತು ಹಿಟ್ ನಿರ್ದೇಶಕ ಕೆಜಿಎಫ್ ನಂತರ ಮತ್ತೆ ಒಂದಾಗುತ್ತಿದ್ದಾರೆ. ಹೀಗಾಗಿ ಪ್ರೇಕ್ಷಕರ ನಿರೀಕ್ಷೆ ಗಗನಕ್ಕೇರಿದೆ.
ಅಪ್ಪಟ್ಟ ಹಳ್ಳಿ ಸೊಗಡಿನ ಸಿನಿಮಾದಲ್ಲಿ ಮತ್ತೆ ಹೀರೋ ಆಗಿ ಮಿಂಚಲು ಸಜ್ಜಾದ ಗೌರಿ ಶಂಕರ್
ಕೆಜಿಎಫ್ ನಂತಹ ಹಿಟ್ ಚಿತ್ರಗಳನ್ನು ನೀಡಿದ ಸಾಹಸಿ ನಿರ್ದೇಶಕನ ಕೈಚಳಕದಲ್ಲಿ ಮೂಡಿಬರುತ್ತಿರುವ ಸಲಾರ್ ಈ ವರ್ಷದ ಅತಿದೊಡ್ಡ ಭಾರತೀಯ ಚಿತ್ರವಾಗಲಿದೆ. ಹೊಂಬಾಳೆ ಫಿಲ್ಮ್ ಹೌಸ್‌ನಿಂದ ಚಿತ್ರದ ಟೀಸರ್ ಜುಲೈ 6 ರಂದು ಬಿಡುಗಡೆಯಾಗಿದ್ದು, ಕಾಯುತ್ತಿರುವ ಅಭಿಮಾನಿಗಳಿಗೆ ಉಡುಗೊರೆ ನೀಡಲಾಗಿತ್ತು. ಅಲ್ಲದೇ ಆ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಈ ಹಿಂದೆ ಪ್ರಭಾಸ್ ಸಲಾರ್ ಚಿತ್ರದಲ್ಲಿ ಎರಡು ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಮತ್ತು ಅವುಗಳಲ್ಲಿ ಒಂದು ನೆಗೆಟಿವ್ ಕ್ಯಾರೆಕ್ಟರ್ ಎಂದು ವರದಿಗಳು ಬಂದಿದ್ದವು. ಅಲ್ಲದೇ ಚಿತ್ರದಲ್ಲಿ ಪೃಥ್ವಿರಾಜ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು.
ಕೆಜಿಎಫ್ 2 ಮತ್ತು ಕಾಂತಾರಂತಹ ಬ್ಲಾಕ್‌ಬಸ್ಟರ್‌ಗಳೊಂದಿಗೆ 2022 ರ ವರ್ಷವನ್ನು ಆಳಿದ ನಂತರ, ಸಲಾರ್ ಹೊಂಬಾಳೆ ಫಿಲ್ಮ್ಸ್‌ನ ಮುಂದಿನ ದೊಡ್ಡ ಪ್ಯಾಜೆಕ್ಟ್ ಆಗಿದೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತದೆ ಎನ್ನುವ ನಿರೀಕಕ್ಷೆಯೊಂದಿಗೆ, ಈ ಮೆಗಾ-ಆಕ್ಷನ್ ಪ್ಯಾಕ್ಡ್ ಚಿತ್ರವನ್ನು ವೀಕ್ಷಿಸಲು ಸಿನಿ ರಸಿಕರು ಉತ್ಸಾಹದ ಉತ್ತುಂಗದಲ್ಲಿದ್ದಾರೆ.
ಇದನ್ನೂ ಓದಿ-ಸಲ್ಮಾನ್ ಕೈಯ್ಯಲ್ಲಿರುವ ಬ್ರೇಸ್ ಲೈಟ್ ಬರೀ ಶೋಕಿಗಾಗಿ ಅಲ್ಲ! ಅದೊಂದು ಪವಾಡವಂತೆ !
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ