ನವದೆಹಲಿ: ತಮ್ಮ ಮುಕ್ತ ಅಭಿಪ್ರಾಯಗಳಿಂದ ಬಾಲಿವುಡ್ ನಲ್ಲಿ ಸುದ್ದಿಯಲ್ಲಿರುವ ಸೋನಂ ಕಪೂರ್, ಈ ಬಾರಿ ತನ್ನ ಮದುವೆಯ ಕುರಿತಾಗಿ ಎದ್ದಿರುವ ಊಹಾಪೋಹಗಳಿಗೆ ಸಂಬಂಧಿಸಿಯ ಪ್ರಶ್ನೆಗಳನ್ನು ಕೇಳಿದ ಮಾಧ್ಯಮದವರಿಗೆ ಬಹಳ ಖಡಕ್ಕಾಗಿ ಉತ್ತರಿಸಿರುವ ಸೋನಂ ಕಪೂರ್ "ನಟಿಯರನ್ನೇ ಯಾಕೆ ಹೆಚ್ಚಾಗಿ ಅವರ ವೈಯಕ್ತಿಕ ಜೀವನದ ಬಗ್ಗೆ ಕೇಳಲಾಗುತ್ತದೆ, ಯಾರಾದರು ರಣಬೀರ್ ಕಪೂರ್ ಅಥವಾ ರಣವೀರ್ ಸಿಂಗ್ ಯಾವಾಗ ಮದುವೆಯಾಗುತ್ತಾರೆ ಎಂದು ಯಾವಾಗಲು ಕೇಳಿದ್ದಾರಾ? ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಎಸೆದಿದ್ದಾಳೆ.


COMMERCIAL BREAK
SCROLL TO CONTINUE READING

ಇನ್ನು ಮುಂದುವರೆದು ಯಾರಿಗೂ ಕೂಡಾ ನನ್ನ ವೈಯಕ್ತಿಕ ಜೀವನದ ಬಗ್ಗೆ ಕೇಳುವ ಹಕ್ಕಿಲ್ಲ, ಈ ಒಂದು ಭಾಗ ಮಾತ್ರ ನನ್ನ ನಿಯಂತ್ರಣದಲ್ಲಿರುವುದು ಎಂದು ತಿಳಿಸಿದರು. ಸದ್ಯ ಸೋನಂ ಕಪೂರ್ ಸಧ್ಯ ಅಕ್ಷಯಕುಮಾರ್ ಅಭಿನಯದ ಪಾದಮನ್ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.