Darshan case update : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಲಾಕ್ ಆಗಿರುವ ನಟ ದರ್ಶನ್ ಗೆ ಈ ಮತ್ತೊಂದು ಸಂಕಷ್ಟ ಎದುರಾಗಿದೆ. ಮನೆಯಲ್ಲಿ ಲಕ್ಷ ಲಕ್ಷ ಹಣ ಸೀಜ್ ಆಗಿದ್ದು ಐಟಿ ಅಧಿಕಾರಿಗಳು ನೋಟಿಸ್ ನೀಡುವ ಸಾಧ್ಯತೆಯಿದೆ. ಕೊಲೆ ದಿನ ದರ್ಶನ್ ಹಲವರನ್ನು ಸಂಪರ್ಕಿಸಿದ್ದು, ಅವರಿಗೂ ಢವಢವ ಶುರುವಾಗಿದೆ. ಅದು ಯಾಕೆ ಅನ್ನೋದರ ಡಿಟೈಲ್ಸ್ ಇಲ್ಲಿದೆ‌ ನೋಡಿ.


COMMERCIAL BREAK
SCROLL TO CONTINUE READING

ನಟ ದರ್ಶನ್‌ಗೆ ಒಂದರ ಮೇಲೊಂದು ಸಂಕಷ್ಟ ಎದುರಾಗ್ತಿದೆ. ಕೊಲೆ ಆರೋಪದ ಬೆನ್ನಲ್ಲೇ ಆದಾಯ ತೆರೆಗೆ ಇಲಾಖೆ ದರ್ಶನ್ ಬೆನ್ನು ಹತ್ತೋ ಸಾಧ್ಯತೆ ಇದೆ. ದರ್ಶನ್ ಮನೆಯಲ್ಲಿ 37ಲಕ್ಷ ನಗದು ಪತ್ತೆಯಾಗಿದೆ. ಜೊತೆಗೆ  ಕೊಲೆಯಾದ ನಂತರ ಸರಂಡರ್ ಆಗಲು 30 ಲಕ್ಷ  ನಗದು ನೀಡಿದ್ದಾರೆ. ಕಾನೂನಿನ ಪ್ರಕಾರ ಒಬ್ಬ ತಮ್ಮ ವ್ಯಕ್ತಿ ಎರಡು ಲಕ್ಷದವರೆಗೂ ನಗದನ್ನ ಇಟ್ಟು ಕೊಳ್ಳಬಹುದು. ಇದಕ್ಕೂ ಮೇಲೆ ಹಣ ಇಟ್ಟುಕೊಂಡದರೆ ಸೂಕ್ತ ದಾಖಲೆ ಒದಗಿಸಬೇಕು. 


ಇದನ್ನೂ ಓದಿ:ನಟಿ ಪ್ರಿಯಾಂಕಾ ರಕ್ತಸಿಕ್ತ ವಿಡಿಯೋ ವೈರಲ್‌..! ಏನಾಯ್ತು ನಟಿಗೆ, ಶಾಕ್‌ನಲ್ಲಿ ಪ್ಯಾನ್ಸ್‌


ಆದರೆ ದರ್ಶನ್ ಸುಮಾರು 70 ಲಕ್ಷ ಹಣ ಇಟ್ಟುಕೊಂಡಿರೋದು ತನಿಖೆಯಲ್ಲಿ ಬಯಲಾಗಿದೆ. ಈ ಹಿನ್ನೆಲೆ ಕಾಮಾಕ್ಷಿಪಾಳ್ಯ ಪೊಲೀಸ್ರು ಆದಾಯ ತೆರಿಗೆ ಅಧಿಕಾರಿಗಳಿಗೆ ಪತ್ರ ಬರೆಯಲಿದ್ದಾರೆ. ಹೀಗಾಗಿ ಐಟಿ ಅಧಿಕಾರಿಗಳು ದರ್ಶನ್ ಸಿನಿಮಾ ಅಡ್ವಾನ್ಸ್ , ಅಥವಾ ಸಿನಿಮಾ ಹಣ ಅಂತ ಹೇಳಿದ್ರು ಇಷ್ಟು ಕ್ಯಾಶ್ ಯಾಕೆ ಇಟ್ಟುಕೊಂಡಿದ್ರು, ಆ ಹಣಕ್ಕೆ ಟ್ಯಾಕ್ಸ್ ಕಟ್ಟಿದ್ದಾರ ಅಂತ ಚೆಕ್ ಮಾಡ್ತಾರೆ. ಒಂದು ವೇಳೆ ಟ್ಯಾಕ್ಸ್ ಕಟ್ಟಿಲ್ಲ ಅಂತಾದ್ರೆ ದರ್ಶನ್ ಜೊತೆಗೆ ದರ್ಶನ್ ಹಣ ನೀಡಿದವರಿಗೂ ಸಂಕಷ್ಟ ಎದುರಾಗಲಿದೆ.


ಇನ್ನೂ ಮೋಹನ್ ರಾಜ್ ಎಂಬ ವ್ಯಕ್ತಿ ದರ್ಶನ್ ಗೆ ಹಣ  ನೀಡಿರೋ ಬಗ್ಗೆ ಪೊಲೀಸ್ರಿಗೆ ಮಾಹಿತಿ ಸಿಕ್ಕಿದೆ. ದರ್ಶನ್ ಗೆ ಸ್ನೇಹಿತ ಆಗಿರೋ ಮೋಹನ್ ರಾಜ್  ನಿಂದ ದರ್ಶನ್ 40ಲಕ್ಷ ಹಣ ಪಡೆದಿದ್ದಾರಂತೆ. ಅಲ್ಲದೆ ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿ ಶಾಸಕರೊಬ್ಬರ ಪರವಾಗಿ ಪ್ರಚಾರ ಕೂಡ ಮಾಡಿದ್ರಂತೆ, ಹಾಗಾಗಿ ಇಬ್ಬರ ಹಣದ ವ್ಯಾವಹಾರ ಕೂಡ ನಡೆದಿತ್ತು ಎಂದು ತಿಳಿದು ಬಂದಿದೆ. ಸದ್ಯ ಈ ಮೋಹನ್ ರಾಜ್ ಗೂ ನೋಟೀಸ್ ನೀಡಿ ವಿಚಾರಣೆ ನಡೆಸಲು ಪೊಲೀಸ್ರು ಸಿದ್ಧತೆ ನಡೆಸಿದ್ದಾರೆ.


ಇದನ್ನೂ ಓದಿ:ನನ್ನ ದೇಹದಲ್ಲಿ ಬೇರೆ ಅಂಗವಿಲ್ಲವೇ?.. ಅದನ್ನೇ ಏಕೆ ತೋರಿಸ್ತೀರಾ..? ಇಲಿಯಾನಾ ಗರಂ
 
ಇನ್ನೂ ಡಿ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತಷ್ಟು ತಿರುವುಗಳು ಸಿಕ್ಕಿವೆ. ರೇಣುಕಾಸ್ವಾಮಿ ಕೊಲೆ ದಿನ ದರ್ಶನ್ ಜೊತೆ ಸಂಪರ್ಕದಲ್ಲಿದ್ದವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ರೇಣುಕಾಸ್ವಾಮಿ ಕೊಲೆಯಾದ ದಿನ ನಟ ದರ್ಶನ್ ಹಲವು  ಪ್ರಭಾವಿಗಳನ್ನು ಸಂಪರ್ಕಿಸಿರುವ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ದರ್ಶನ್ ಮೊಬೈಲ್ ಸೀಜ್ ಮಾಡಿದ್ದ ಪೊಲೀಸರು ಪರಿಶೀಲನೆ ನಡೆಸಿದ ವೇಳೆ ನಾರ್ಮಲ್ ಕಾಲ್, ವಾಟ್ಸ್ಆ್ಯಪ್ ಕಾಲ್ ನಲ್ಲಿ ಹಲವರು ದರ್ಶನ್ ಮಾತನಾಡಿರುವುದು ಗೊತ್ತಾಗಿದೆ. 


ಸದ್ಯ ಅಂತವರ ಲಿಸ್ಟ್ ರೆಡಿ ಮಾಡಿ ಅವರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಬರಲು ಪೊಲೀಸರು ಸೂಚಿಸುವ ಸಾಧ್ಯತೆ ಇದೆ. ದರ್ಶನ್ ಯಾಕೆ ನಿಮಗೆ ಕರೆ ಮಾಡಿದ್ರು, ಕರೆಯಲ್ಲಿ ಏನೂ ಮಾತನಾಡಿದ್ದರು ಎಂಬ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ‌. ದರ್ಶನ್ ಬಂಧನವಾದ ಮೇಲೆ ದರ್ಶನ್ ವಿಷಯದಲ್ಲಿ ಸಾಫ್ಟ್ ಕಾರ್ನರ್ ತೋರಿಸುವಂತೆ ಹಲವು ಪ್ರಭಾವಿ ವ್ಯಕ್ತಿಗಳು ಪೊಲೀಸರ ಮೇಲೆ ಒತ್ತಡ ಹೇರಿದ್ದು, ಅವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಾರೆ ಹಣದ ಅಹಂನಿಂದ ಏನು ಬೇಕಾದರೂ ಮಾಡಿ ಜಯಿಸಿಕೊಳ್ಳಬಹುದು ಎಂದುಕೊಂಡಿದ್ದ ಡಿ ಗ್ಯಾಂಗ್ ಗೆ  ಕಾನೂನಿನ ಮುಂದೆ ಯಾವುದು ನಡೆಯೋದಿಲ್ಲ ಎಂಬುದು ಅರಿವಾಗುತ್ತಿದೆ ಎಂದರೆ ತಪ್ಪಾಗಲಾರದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.