ಜಾಕ್ ಪಾಟ್ ಪ್ರೇಮೋತ್ಸವ ವೇದಿಕೆಯಲ್ಲಿ ಸಂಗೀತ ಸುಧೆ!
Jackpot Premotsava: ಕನ್ನಡಿಗರ ಅಚ್ಚು ಮೆಚ್ಚಿನ ಖಾಸಗಿ ವಾಹಿನಿಯು ವ್ಯಾಲಂಟೈನ್ಸ್ ಡೇ ಪ್ರಯುಕ್ತ `ಜಾಕ್ ಪಾಟ್ ಪ್ರೇಮೋತ್ಸವ` ಎಂಬ ವಿಶೇಷ ಸಂಚಿಕೆಯನ್ನು ಪ್ರಸಾರ ಮಾಡಲು ಸಜ್ಜಾಗಿದೆ.
ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ 'ಜಾಕ್ ಪಾಟ್ ಪ್ರೇಮೋತ್ಸವ' ವೇದಿಕೆಯಲ್ಲಿ ಕರಾವಳಿ 'ಚಂಡೆ'ಯ ನಾದಾಮೃತವನ್ನು ವೀಕ್ಷಕರಿಗೆ ಅಚ್ಚುಕಟ್ಟಾಗಿ ತೋರಿಸಲಾಗಿದೆ. ಕನ್ನಡಿಗರ ನೆಚ್ಚಿನ ರಾಪರ್ ಚಂದನ್ ಶೆಟ್ಟಿ, ಕಾಟೇರ ಸಿನಿಮಾ ಖ್ಯಾತಿಯ ಗಾಯಕ ಅನಿರುದ್ಧ ಶಾಸ್ತ್ರೀ, ಐಶ್ವರ್ಯ ರಂಗರಾಜನ್, ಚಿನ್ಮಯಿ ಅತ್ರೇಯಸ್, ಇಂಪನಾ ಜಯರಾಜ್, ಸುಹಾನಾ ಸೈಯದ್ ಮತ್ತು ಕಾರ್ತಿಕ್ ಶರ್ಮ ಸೇರಿದಂತೆ ಖ್ಯಾತ ಗಾಯಕ-ಗಾಯಕಿಯರು ಒಟ್ಟಾಗಿ ಸಂಗೀತದ ವರ್ಷಧಾರೆಯನ್ನು ಹರಿಸಲಿದ್ದಾರೆ.
ಕರ್ನಾಟಕದ ಹೆಸರಾಂತ ಗಾನ ಕೋಗಿಲೆ ಶ್ರೀಮತಿ ಬಿ. ಆರ್. ಛಾಯಾ ರವರು ಹಿನ್ನಲೆ ಗಾಯಕಿಯಾಗಿ ಸಂಗೀತ ಕ್ಷೇತ್ರದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ, ಸಂಗೀತ ಕ್ಷೇತ್ರದ ಸಾಧನೆಗೈದ ಅಂಗವಾಗಿ ಪ್ರೇಮೋತ್ಸವದ ವೇಧಿಕೆಯಲ್ಲಿ ಗೌರವಾರ್ಪಣೆಯನ್ನು ಸಲ್ಲಿಸಲಾಗಿದೆ.
ಇದನ್ನೂ ಓದಿ-Radhika Pandit: ಪತಿ ಮತ್ತು ಮಕ್ಕಳೊಡನೆ ರಾಧಿಕಾ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಷನ್!
ಇದರ ಜೊತೆ 40 ವರ್ಷಗಳ ದಾಂಪತ್ಯ ಜೀವನವನ್ನು ಪೂರೈಸಿರುವ ಬೊಂಬಾಟ್ ಭೋಜನ ಖ್ಯಾತಿಯ ಸಿಹಿ-ಕಹಿ ದಂಪತಿಗಳಾದ ಚಂದ್ರು ಮತ್ತು ಗೀತಾ ರವರು ತಮ್ಮ ಮದುವೆ ವಾರ್ಷಿಕೋತ್ಸವವನ್ನು ಪ್ರೇಮೋತ್ಸವ ವೇಧಿಕೆಯಲ್ಲಿ ಸಂಭ್ರಮಿಸಿದ್ದಾರೆ ಹಾಗು ತಮ್ಮ ದಾಂಪತ್ಯ ಜೀವನದಲ್ಲಿ ನಡೆದ ಒಂದಷ್ಟು ಘಟನೆಗಳನ್ನು ಮೆಲುಕು ಹಾಕಿ ಸಂತೋಷದ ಕ್ಷಣಗಳನ್ನುಎಲ್ಲರೊಡನೆ ಹಂಚಿಕೊಂಡಿದ್ದಾರೆ. 2 ಗಂಟೆಗಳ ಈ ಕಾರ್ಯಕ್ರಮ ನಿಮಗೆಲ್ಲಾ ಮಹಾ ಮನರಂಜನೆ ನಿಡೋದಂತೂ ಖಚಿತ.
ಈ ಪ್ರೇಮಿಗಳ ದಿನ ಸಂಗೀತಮಯವಾಗಲಿದೆ, ಮನರಂಜನೆಯ ರಸದೌತಣವನ್ನು ಹೊತ್ತು ತರ್ತಿದೆ "ಜಾಕ್ ಪಾಟ್ ಪ್ರೇಮೋತ್ಸವ" ಸಂಗೀತ ಸಂಜೆ ಇದೇ ಭಾನುವಾರ ರಾತ್ರಿ 7 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.