ಬೆಂಗಳೂರು: ಬಹು ನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಈಗ ಈ ಚಿತ್ರದ ಬಗ್ಗೆ ವಿಶ್ವದಾದ್ಯಂತ ಸಾಕಷ್ಟು ಕುತೂಹಲ ಹೆಚ್ಚಾಗಿದೆ.ಈಗ ಈ ಚಿತ್ರದಲ್ಲಿ ರಕ್ಕಮ್ಮಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಾಕ್ವೆಲಿನ್ ಫರ್ನಾಂಡಿಸ್ ಚಿತ್ರ ತಂಡದ ಜೊತೆಗೆ ಕೆಲಸ ಮಾಡಿರುವ ಕುರಿತಾದ ತಮ್ಮ ಅನುಭವಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಶಿವಣ್ಣ ನಟನೆಯ ʻವೇದʼ ಸಿನಿಮಾ ಮೋಷನ್ ಪೋಸ್ಟರ್‌ ರಿಲೀಸ್‌, ಗೀತಾ ಪಿಕ್ಚರ್ ಅಧ್ಯಾಯ ಆರಂಭ


'ಪ್ರಾಮಾಣಿಕವಾಗಿ, ಹೇಳಬೇಕೆಂದರೆ, ಇದುವರೆಗೆ ಎಲ್ಲಾ ರೀತಿಯ ವರ್ಕ್ ಮಾಡಿದ್ದೇನೆ,ಆದರೆ ನಾನು ರಕ್ಕಮ್ಮ ಪಾತ್ರದಲ್ಲಿ 'ವಿಕ್ರಾಂತ್ ರೋಣ' ಸೆಟ್‌ಗೆ ಕಾಲಿಟ್ಟಾಗ, ನನಗೆ ಅಚ್ಚರಿ ಎನಿಸಲಿಲ್ಲ, 2021 ಕೊರೋನಾದ ಎರಡನೇ ಅಲೆ ಇದ್ದಾಗ ಅವರು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರು ಮತ್ತು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಅವರು ಸಾಕಷ್ಟು ಶ್ರಮವನ್ನು ವಹಿಸಿದರು, ಸೆಟ್ ನಲ್ಲಿ ಸಾವಿರಾರು ಜನರಿದ್ದರು ಅನಿಸುತ್ತೆ, ಇದು ನಿಜವಾಗಿಯೂ ಬೃಹದಾಕಾರವಾಗಿತ್ತು, ಆದರೆ ಆ ಸೆಟ್ ಪರಿಪೂರ್ಣವಾಗಿದ್ದು ನೋಡಿ ನನಗೆ ನಂಬಲಾಗಲಿಲ್ಲ' ಎಂದು ಅವರು ಹೇಳಿದರು.


ಇದನ್ನೂ ಓದಿ: Bhavana Menon: ಸಿಂಪಲ್ ಆಂಡ್ ಬ್ಯೂಟಿಫುಲ್ ನಟಿ ಭಾವನಾ ಮೆನನ್ ಅನೇಕರಿಗೆ ಸ್ಫೂರ್ತಿ


ಇನ್ನೂ ಮುಂದುವರೆದು ಮಾತನಾಡಿದ ಅವರು "ಇದು ಅದ್ಭುತವಾಗಿದೆ, ಆದರೆ ಅವರು ಟ್ರೈಲರ್ ಲಾಂಚ್ ಮಾಡಿದ ರೀತಿ ಅಥವಾ ನಾನು ರಕ್ಕಮ್ಮ ಚಿತ್ರದ ಶೂಟಿಂಗ್ ಮಾಡುವಾಗ ನಾನು ಒಂದು ವಿಷಯವನ್ನು ಉಲ್ಲೇಖಿಸಲು ಬಯಸುತ್ತೇನೆ, ತಂಡದೊಂದಿಗೆ ಕೆಲಸ ಮಾಡುವುದು ಒಂದು ಆಚರಣೆಯಂತೆ ಭಾಸವಾಯಿತು. ಲೈಟಿಂಗ್ ಡಿಪಾರ್ಟ್‌ಮೆಂಟ್‌ನಿಂದ ಸ್ಪಾಟ್ ಮತ್ತು ವಿಎಫ್‌ಎಕ್ಸ್‌ನವರೆಗೆ, ಸೆಟ್‌ನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಒಳ್ಳೆಯ ಸಮಯವನ್ನು ಹೊಂದಿದ್ದರು. ಇದರಲ್ಲಿ ಬಹಳಷ್ಟು ಶ್ರಮವಿತ್ತು, ಆದರೂ ಅವರು ನಗುನಗುತ್ತಾ ಕೆಲಸ ಮಾಡುತ್ತಿದ್ದರು ಎಂದು ಜಾಕ್ವೆಲಿನ್ ಹೇಳಿದರು.


ಈಗ ಮುಂಬರುವ ಜುಲೈ 28 ರಂದು ವಿಕ್ರಾಂತ ರೋಣ ಸಿನಿಮಾ ಜಗತ್ತಿನಾಧ್ಯಂತ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಇತರ ವಿದೇಶಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.