ಬೆಂಗಳೂರು : 'ಏನೇ ಹೇಳಿ ನಮ್ಮ ಅಪ್ಪು ಥರ ಡಾನ್ಸ್ ಯಾರಿಗೂ ಬರಲ್ಲ..' ಹೌದು, ಈ ಮಾತು ಹೇಳಿದ್ದು ಅಪ್ಪು ಅಭಿಮಾನಿ ಬಳಗ (Puneetha Rajkumars fans). ನಿನ್ನೆ ಹಾಡು ರಿಲೀಸ್ ಆಗುತ್ತಿದ್ದಂತೆ ಪವರ್ ಸ್ಟಾರ್ ಅಭಿಮಾನಿಗಳ ನರನಾಡಿಗಳಲ್ಲಿ ಹೊಸ ಚೈತನ್ಯ ಮೂಡಿತ್ತು. 'ಏನ್ ಗುರೂ ಈ ರೇಂಜ್ ಗೆ ಇದೆ ಸಾಂಗ್' ಅಂತಾ ಅಪ್ಪು ಫ್ಯಾನ್ಸ್ ಫುಲ್ ಖುಷ್ ಆಗಿದ್ದರು. ಇದೀಗ ಅದೇ ಹಾಡು ಹೊಸ ದಾಖಲೆ ಬರೆದಿದೆ.


COMMERCIAL BREAK
SCROLL TO CONTINUE READING

ಅಪ್ಪು ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' (James kannada film) ಹೆಜ್ಜೆ ಹೆಜ್ಜೆಗೂ ಹೊಸ ಹೊಸ ದಾಖಲೆ ಬರೆಯುತ್ತಿದೆ. ನಿನ್ನೆ ಬೆಳಗ್ಗೆ 11 ಗಂಟೆ 11 ನಿಮಿಷಕ್ಕೆ ಯೂಟ್ಯೂಬ್ ನಲ್ಲಿ 'ಜೇಮ್ಸ್' ಸಿನಿಮಾದ 'ಟ್ರೇಡ್ ಮಾರ್ಕ್' ಹಾಡು ರಿಲೀಸ್ ಆಗಿದ್ದು, ಕೆಲವೇ ಗಂಟೆಗಳ ಅಂತರದಲ್ಲಿ 5 ಮಿಲಿಯನ್ ವೀವ್ಸ್ ಗಿಟ್ಟಿಸಿಕೊಂಡಿದೆ (James song release). ಜೊತೆಗೆ ಲೈಕ್ ಗಳ ವಿಚಾರದಲ್ಲೂ ಅಪ್ಪು ಹಾಡು ಹೊಸ ದಾಖಲೆ ಬರೆದಿದ್ದು, ಫ್ಯಾನ್ಸ್ ಈ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸುತ್ತಿದ್ದಾರೆ (James records).


ಇದನ್ನೂ ಓದಿ : ಅವಳಿ ಮಕ್ಕಳಿಗೆ ಜನ್ಮ ನೀಡಿದ 'ಗೋಲ್ಡನ್​ ಕ್ವೀನ್' ನಟಿ ಅಮೂಲ್ಯ..!


ಕನ್ನಡ ಭಾಷೆಯ ಜೊತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ 'ಜೇಮ್ಸ್' ಸಿನಿಮಾದ 'ಟ್ರೇಡ್ ಮಾರ್ಕ್' ಹಾಡು ರಿಲೀಸ್ ಆಗಿದ್ದು, ಯೂಟ್ಯೂಬ್‌ ನಲ್ಲಿ ಹವಾ ಎಬ್ಬಿಸಿದೆ (James song in youtube). ಈಗಾಗಲೇ ಅಪ್ಪು ಹಾಡು ಯೂಟ್ಯೂಬ್‌ ನಲ್ಲಿ ಟ್ರೆಂಡ್ ಆಗಿದ್ದು ಮತ್ತಷ್ಟು ದಾಖಲೆಗಳನ್ನ ಪುಡಿ ಪುಡಿ ಮಾಡುವುದರಲ್ಲಿ ಅನುಮಾನವೇ ಇಲ್ಲ‌. ಇದರ ಜೊತೆಗೆ ಹಾಡು ಹಾಲಿವುಡ್ ರೇಂಜ್ ಗೆ ತಲುಪಿದೆ ಅಂತಾ ಅಪ್ಪು ಅಭಿಮಾನಿಗಳು ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ‌.


 ಎಲ್ಲೆಲ್ಲೂ ಹವಾ..!
ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ 'ಜೇಮ್ಸ್' ಸಿನಿಮಾದ ಟೀಸರ್ ಎಲ್ಲೆಲ್ಲೂ ಹವಾ ಎಬ್ಬಿಸಿತ್ತು (James teaser). ಅಲ್ಲದೆ ಹಲವು ದಾಖಲೆಗಳನ್ನೂ 'ಜೇಮ್ಸ್' ಸಿನಿಮಾದ ಟೀಸರ್ ಪುಡಿ ಪುಡಿ ಮಾಡಿದೆ. ಇದೀಗ 'ಜೇಮ್ಸ್' ಸಿನಿಮಾದ 'ಟ್ರೇಡ್ ಮಾರ್ಕ್' ಹಾಡು ರಿಲೀಸ್ ಆಗಿದ್ದು, ಅಪ್ಪು ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಿದೆ.


ಇದನ್ನೂ ಓದಿ : ಇದನ್ನು ಕುಡಿದು ಆರಾಮಾಗಿರಿ ಎಂದ ಕಿರಿಕ್​ ಬೆಡಗಿ.. ಮದ್ವೆ ಟ್ರೋಲ್ಸ್​ಗೆ ರಶ್ಮಿಕಾ ಕೊಟ್ರಾ ರಿಯಾಕ್ಷನ್!?


ಅಪ್ಪು ಹುಟ್ಟುಹಬ್ಬಕ್ಕೆ 'ಜೇಮ್ಸ್' ರಿಲೀಸ್ ಆಗಿ, ದೇಶಾದ್ಯಂತ ಹವಾ ಎಬ್ಬಿಸೋದು ಪಕ್ಕಾ ಆಗಿದೆ. ಸಿನಿಮಾ ಬಿಡುಗಡೆಗೆ ಕೆಲ ದಿನಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ವೇಗವಾಗಿ ಕೆಲಸಗಳು ಸಾಗುತ್ತಿವೆ. ಇದರ ನಡುವೆ ಚಿತ್ರದ ಪ್ರತಿಯೊಂದು ಅಪ್ ಡೇಟ್ ಕೂಡ ಕರುನಾಡಿನಲ್ಲಿ ಸಂಚಲನವನ್ನೇ ಸೃಷ್ಟಿಸುತ್ತಿದೆ. ಇಂದು ಜೇಮ್ಸ್ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದ್ದು ಹಾಡು ಕೇಳಿ ಕನ್ನಡಿಗರು ಫಿದಾ ಆಗಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.