James: ಹಾಲಿವುಡ್ ರೇಂಜ್ ಗೆ ಅಪ್ಪು ಸಾಂಗ್‌..! ಹೊಸ ದಾಖಲೆ ಬರೆದ 'ಜೇಮ್ಸ್'..!

James Trademark Song: ಕನ್ನಡ ಭಾಷೆಯ ಜೊತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ 'ಜೇಮ್ಸ್' ಸಿನಿಮಾದ 'ಟ್ರೇಡ್ ಮಾರ್ಕ್' ಹಾಡು ರಿಲೀಸ್ ಆಗಿದ್ದು, ಯೂಟ್ಯೂಬ್‌ ನಲ್ಲಿ ಹವಾ ಎಬ್ಬಿಸಿದೆ.   

Written by - Malathesha M | Edited by - Yashaswini V | Last Updated : Mar 1, 2022, 02:06 PM IST
  • 'ಜೇಮ್ಸ್' ಹೆಜ್ಜೆ ಹೆಜ್ಜೆಗೂ ಹೊಸ ಹೊಸ ದಾಖಲೆ ಬರೆಯುತ್ತಿದೆ
  • ಕನ್ನಡ ಭಾಷೆಯ ಜೊತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ 'ಜೇಮ್ಸ್' ಸಿನಿಮಾದ 'ಟ್ರೇಡ್ ಮಾರ್ಕ್' ಹಾಡು ರಿಲೀಸ್ ಆಗಿದೆ
  • 'ಟ್ರೇಡ್ ಮಾರ್ಕ್' ಹಾಡು ರಿಲೀಸ್ ಆಗಿ ಕೆಲವೇ ಗಂಟೆಗಳ ಅಂತರದಲ್ಲಿ ಅರ್ಧ ಮಿಲಿಯನ್ ವೀವ್ಸ್ ಗಿಟ್ಟಿಸಿಕೊಂಡಿದೆ
James: ಹಾಲಿವುಡ್ ರೇಂಜ್ ಗೆ ಅಪ್ಪು ಸಾಂಗ್‌..! ಹೊಸ ದಾಖಲೆ ಬರೆದ 'ಜೇಮ್ಸ್'..! title=
James new record

James Trademark Song: ಅಪ್ಪು ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಹೆಜ್ಜೆ ಹೆಜ್ಜೆಗೂ ಹೊಸ ಹೊಸ ದಾಖಲೆ ಬರೆಯುತ್ತಿದೆ. ಇಂದು ಯೂಟ್ಯೂಬ್ ನಲ್ಲಿ 'ಜೇಮ್ಸ್' ಸಿನಿಮಾದ 'ಟ್ರೇಡ್ ಮಾರ್ಕ್' ಹಾಡು ರಿಲೀಸ್ ಆಗಿದ್ದು, ಕೆಲವೇ ಗಂಟೆಗಳ ಅಂತರದಲ್ಲಿ ಅರ್ಧ ಮಿಲಿಯನ್ ವೀವ್ಸ್ ಗಿಟ್ಟಿಸಿಕೊಂಡಿದೆ. ಜೊತೆಗೆ ಲೈಕ್ ಗಳ ವಿಚಾರದಲ್ಲೂ ಅಪ್ಪು ಹಾಡು ಹೊಸ ದಾಖಲೆ ಬರೆದಿದ್ದು, ಫ್ಯಾನ್ಸ್ ಈ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸುತ್ತಿದ್ದಾರೆ.

ಕನ್ನಡ ಭಾಷೆಯ ಜೊತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ 'ಜೇಮ್ಸ್' (James) ಸಿನಿಮಾದ 'ಟ್ರೇಡ್ ಮಾರ್ಕ್' ಹಾಡು (TradeMark Song) ರಿಲೀಸ್ ಆಗಿದ್ದು, ಯೂಟ್ಯೂಬ್‌ ನಲ್ಲಿ ಹವಾ ಎಬ್ಬಿಸಿದೆ. 

ಇದನ್ನೂ ಓದಿ- ಅವಳಿ ಮಕ್ಕಳಿಗೆ ಜನ್ಮ ನೀಡಿದ 'ಗೋಲ್ಡನ್​ ಕ್ವೀನ್' ನಟಿ ಅಮೂಲ್ಯ..!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (PowerStar Puneeth Rajkumar) ಅವರ ಅಭಿನಯದ ಕೊನೆಯ ಸಿನಿಮಾದ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲವಿದ್ದು, ಈಗಾಗಲೇ ಈ ಚಿತ್ರದ ಹಾಡು ಯೂಟ್ಯೂಬ್‌ ನಲ್ಲಿ ಟ್ರೆಂಡ್ ಆಗಿದೆ. ಜೇಮ್ಸ್ ಚಿತ್ರ ಮತ್ತಷ್ಟು ದಾಖಲೆಗಳನ್ನು ಪುಡಿ ಪುಡಿ ಮಾಡುವುದರಲ್ಲಿ ಅನುಮಾನವೇ ಇಲ್ಲ‌. ಇದರ ಜೊತೆಗೆ ಹಾಡು ಹಾಲಿವುಡ್ ರೇಂಜ್ ಗೆ ತಲುಪಿದೆ ಅಂತಾ ಅಪ್ಪು ಅಭಿಮಾನಿಗಳು ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ‌.

ಇದನ್ನೂ ಓದಿ- ಇದನ್ನು ಕುಡಿದು ಆರಾಮಾಗಿರಿ ಎಂದ ಕಿರಿಕ್​ ಬೆಡಗಿ.. ಮದ್ವೆ ಟ್ರೋಲ್ಸ್​ಗೆ ರಶ್ಮಿಕಾ ಕೊಟ್ರಾ ರಿಯಾಕ್ಷನ್!?

ಗಮನಾರ್ಹವಾಗಿ, ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ 'ಜೇಮ್ಸ್' ಸಿನಿಮಾದ ಟೀಸರ್ ಹಲವು ದಾಖಲೆಗಳನ್ನು ಸೃಷ್ಟಿಸಿದೆ. ಇದೀಗ 'ಜೇಮ್ಸ್' ಸಿನಿಮಾದ 'ಟ್ರೇಡ್ ಮಾರ್ಕ್' ಹಾಡು ರಿಲೀಸ್ ಆಗಿದ್ದು, ಅಪ್ಪು ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಿದೆ. ಇದೇ ತಿಂಗಳು ಬಿಡುಗಡೆಗೆ ಸಜ್ಜಾಗಿರುವ 'ಜೇಮ್ಸ್' ಚಿತ್ರಕ್ಕಾಗಿ ದೇಶಾದ್ಯಂತ ಅಪ್ಪು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಕೆಲ ದಿನಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ವೇಗವಾಗಿ ಕೆಲಸಗಳು ಸಾಗುತ್ತಿವೆ. ಇದರ ನಡುವೆ ಚಿತ್ರದ ಪ್ರತಿಯೊಂದು ಅಪ್ ಡೇಟ್ ಕೂಡ ಕರುನಾಡಿನಲ್ಲಿ ಸಂಚಲನವನ್ನೇ ಸೃಷ್ಟಿಸುತ್ತಿದೆ. ಇಂದು ಜೇಮ್ಸ್ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದ್ದು ಹಾಡು ಕೇಳಿ ಕನ್ನಡಿಗರು ಫಿದಾ ಆಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News