ಅಪ್ಪು ಹಾಡಿನ ಎದುರು ದಾಖಲೆಗಳು ಧೂಳ್..‌ ಧೂಳ್..!‌

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ 'ಜೇಮ್ಸ್‌  (James) ' ಸಿನಿಮಾದ 'ಟ್ರೇಡ್ ಮಾರ್ಕ್' ಸಾಂಗ್‌ ಯುಟ್ಯೂಬ್‌ನಲ್ಲಿ ದಾಖಲೆಗಳನ್ನ ಧೂಳ್‌ ಧೂಳ್‌ ಮಾಡುತ್ತಿದೆ. 'ಟ್ರೇಡ್ ಮಾರ್ಕ್' ಹಾಡು ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್‌ ವೀವ್ಸ್‌ ಪಡೆದುಕೊಂಡಿದೆ.ಇದು ಕನ್ನಡ ವರ್ಷನ್‌ ದಾಖಲೆ ಆಗಿದ್ದರೆ, ಇತರ ಭಾಷೆಗಳಲ್ಲೂ 'ಟ್ರೇಡ್ ಮಾರ್ಕ್' ಸಾಂಗ್‌ ಸಾಕಷ್ಟು ಸದ್ದು ಮಾಡುತ್ತಿದೆ.

Written by - Malathesha M | Edited by - Manjunath N | Last Updated : Mar 1, 2022, 08:06 PM IST
  • ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ 'ಜೇಮ್ಸ್‌ (James) ' ಸಿನಿಮಾದ 'ಟ್ರೇಡ್ ಮಾರ್ಕ್' ಸಾಂಗ್‌ ಯುಟ್ಯೂಬ್‌ನಲ್ಲಿ ದಾಖಲೆಗಳನ್ನ ಧೂಳ್‌ ಧೂಳ್‌ ಮಾಡುತ್ತಿದೆ.
ಅಪ್ಪು ಹಾಡಿನ ಎದುರು ದಾಖಲೆಗಳು ಧೂಳ್..‌ ಧೂಳ್..!‌ title=

ಬೆಂಗಳೂರು: ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಭಿನಯದ 'ಜೇಮ್ಸ್‌  (James) ' ಸಿನಿಮಾದ 'ಟ್ರೇಡ್ ಮಾರ್ಕ್' ಸಾಂಗ್‌ ಯುಟ್ಯೂಬ್‌ನಲ್ಲಿ ದಾಖಲೆಗಳನ್ನ ಧೂಳ್‌ ಧೂಳ್‌ ಮಾಡುತ್ತಿದೆ. 'ಟ್ರೇಡ್ ಮಾರ್ಕ್' ಹಾಡು ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್‌ ವೀವ್ಸ್‌ ಪಡೆದುಕೊಂಡಿದೆ.ಇದು ಕನ್ನಡ ವರ್ಷನ್‌ ದಾಖಲೆ ಆಗಿದ್ದರೆ, ಇತರ ಭಾಷೆಗಳಲ್ಲೂ 'ಟ್ರೇಡ್ ಮಾರ್ಕ್' ಸಾಂಗ್‌ ಸಾಕಷ್ಟು ಸದ್ದು ಮಾಡುತ್ತಿದೆ.

ಇದನ್ನೂ ಓದಿ: James Trademark Song: ಪವರ್ ಸ್ಟಾರ್ ಸಾಂಗ್, ಪವರ್ ಫುಲ್ ರಿಲೀಸ್..! ಹೇಗಿದೆ 'ಜೇಮ್ಸ್' ಹಾಡು..?

ಬೆಳಗ್ಗೆ 11 ಗಂಟೆ 11 ನಿಮಿಷಕ್ಕೆ ರಿಲೀಸ್‌ ಆದ 'ಟ್ರೇಡ್ ಮಾರ್ಕ್' ಹಾಡು, ಬೆಳಗ್ಗೆಯಿಂದಲೂ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ. ಪವರ್‌ ಸ್ಟಾರ್ (Powerstar Puneeth Rajkumar) ಫ್ಯಾನ್ಸ್‌ ಅದ್ಧೂರಿಯಾಗಿ ಅಪ್ಪು ಹಾಡನ್ನು ಬರಮಾಡಿಕೊಂಡರು. ಹಾಗೇ ಹಾಡಿನ ಪ್ರತಿ ಕ್ಷಣವನ್ನೂ ಎಂಜಾಯ್‌ ಮಾಡಿದ್ರು.

ಇದನ್ನೂ ಓದಿ: James: ಹಾಲಿವುಡ್ ರೇಂಜ್ ಗೆ ಅಪ್ಪು ಸಾಂಗ್‌..! ಹೊಸ ದಾಖಲೆ ಬರೆದ 'ಜೇಮ್ಸ್'..!

ಪರಭಾಷೆಯಲ್ಲೂ ಹವಾ..!

ಕನ್ನಡ ಭಾಷೆಯ ಹಾಡಿನ ಜೊತೆಗೆ ಇತರ ಭಾಷೆಗಳಲ್ಲೂ 'ಟ್ರೇಡ್ ಮಾರ್ಕ್' ಸಾಂಗ್‌  ಸದ್ದು ಮಾಡುತ್ತಿದೆ. ಪುನೀತ್‌ ರಾಜ್‌ಕುಮಾರ್‌ ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದು, ಇತರ ರಾಜ್ಯಗಳಲ್ಲೂ ಅಭಿಮಾನಿ ಬಳಗವಿದೆ. ಹೀಗಾಗಿ ಫ್ಯಾನ್ಸ್‌ ಅಪ್ಪು ಹಾಡನ್ನು ಎಂಜಾಯ್‌ ಮಾಡಿದ್ದಾರೆ.

ಒಟ್ಟಾರೆ ಅಪ್ಪು ಹಾಡು ಸಖತ್‌ ಹೈಪ್‌ ಕ್ರಿಯೇಟ್‌ ಮಾಡಿದ್ದು, ಎಲ್ಲೆಲ್ಲೂ ಕನ್ನಡ ಸಿನಿಮಾ ಹವಾ ಎಬ್ಬಿಸಿದೆ. ಆದರೆ ಪವರ್‌ ಸ್ಟಾರ್‌ ಅಕಾಲಿಕ ಮರಣ ಈಗಲೂ ಕನ್ನಡಿಗರನ್ನ ಕಾಡುತ್ತಿದ್ದು, ಜೇಮ್ಸ್‌ ಸಿನಿಮಾವನ್ನ ಹಬ್ಬದ ರೀತಿ ಆಚರಿಸಲು ಅಪ್ಪು ಅಭಿಮಾನಿ ಬಳಗ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News