ಜೇಮ್ಸ್‌ ಸಿನಿಮಾ (James) ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಅಭಿಮಾನಿಗಳಿಗಂತೂ ಬರೀ ಜೇಮ್ಸ್‌ದೇ ಕನವರಿಕೆ ಶುರುವಾಗಿದೆ. ಈ ನಡುವೆ ಟಿಕೆಟ್‌ ಬುಕ್ಕಿಂಗ್‌ ವಿಚಾರದಲ್ಲಿ ಜೇಮ್ಸ್‌ ಹೊಸ ದಾಖಲೆ ಬರೆದಿದೆ. ಅದೂ ಒಂದೇ ಚಿತ್ರಮಂದಿರದಲ್ಲಿ ಜೇಮ್ಸ್‌ ಚಿತ್ರದ 5 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ ಅನ್ನೋದು ವಿಶೇಷ. 


COMMERCIAL BREAK
SCROLL TO CONTINUE READING

ಇದೇ ತಿಂಗಳು 17ರಂದು ಕರುನಾಡಿನ ರತ್ನ ಜೇಮ್ಸ್‌ ಬರ್ತಾರೆ ಅಂತ ಅಭಿಮಾನಿಗಳು ಶಬರಿಯಂತೆ ಕಾದು ಕುಳಿತಿದ್ದಾರೆ. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ಉಸಿರನ್ನು ಬಿಗಿ ಹಿಡಿದು ಕಾದಿದ್ದಾರೆ.  


ಯಾಕಂದ್ರೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು (Puneeth Rajkumar) ನಟನೆಯ ಕೊನೆಯ ಸಿನಿಮಾ ಇದು. ಹಾಗಾಗಿ ಈ ಸಿನಿಮಾ ನೋಡಲು ಎಲ್ಲರಲ್ಲೂ ಕಾತರ ಹೆಚ್ಚಾಗಿದೆ. ಜೇಮ್ಸ್‌ ಪುನೀತ್‌ ರಾಜ್‌ಕುಮಾರ್‌ ಅವರ ಕನಸಿನ ಸಿನಿಮಾ ಆಗಿದೆ. ಆದ್ರೆ ಈ ಸಿನಿಮಾ ಬಿಡುಗಡೆ ಆಗೋ ಮುನ್ನವೇ ಬೆಟ್ಟದ ಹೂವನ್ನು ದೇವರು ಕಿತ್ತುಕೊಂಡಾಯಿತು. 


ಇದನ್ನೂ ಓದಿ: ಅಪ್ಪುಗೆ ನಮಿಸಲು ಹಾಡು ಬರೆದ ನಿರ್ದೇಶಕ ಸಂತೋಷ್ ಆನಂದ್‌ರಾಮ್


ಅಭಿಮಾನಿಗಳ (Appu Fans) ಪಾಲಿಗೆ ದೇವರಾಗಿರೋ ಅಪ್ಪು, ಮಾರ್ಚ್‌ 17 ರಂದು ಪ್ರತ್ಯಕ್ಷವಾಗೋ ಮೂಲಕ ಎಲ್ಲರಿಗೂ ದರ್ಶನ ಭಾಗ್ಯ ನೀಡಲಿದ್ದಾರೆ. ಅದಕ್ಕಾಗಿ ಇನ್ನೂ ಹೆಚ್ಚು ಸಮಯ ಕಾಯಬೇಕಾಗಿಲ್ಲ. 


ಇನ್ನು ಜೇಮ್ಸ್ ಚಿತ್ರದ ಬಗ್ಗೆ ಎಷ್ಟು ಹೇಳಿದರು, ಎಷ್ಟು ಮಾತನಾಡಿದರು ಸಾಲದು. ಅಷ್ಟರ ಮಟ್ಟಿಗೆ ಜೇಮ್ಸ್ ಚಿತ್ರದ ಹವಾ ಇದೆ. ಜೇಮ್ಸ್ ದಿನಕ್ಕೊಂದು ದಾಖಲೆ ಮಾಡುತ್ತಿದೆ. ಕನ್ನಡ ಚಿತ್ರಗಳು (Kannada Movies) ಹಿಂದೆಂದೂ ಮಾಡಿರದ ರೆಕಾರ್ಡ್ ಮಾಡುತ್ತಿದೆ ಜೇಮ್ಸ್. ಸಿನಿಮಾ ಬಿಡುಗಡೆಗೆ ಮುನ್ನವೇ ಒಂದೊಂದೇ ಸುದ್ದಿಗಳು ಸಂಚಲನ ಮೂಡಿಸುತ್ತಿವೆ. ಜೇಮ್ಸ್ ಚಿತ್ರದ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. 


ಸಾವಿರಾರು ಮಂದಿ ಚಿತ್ರವನ್ನು ನೋಡಲು ಟಿಕೆಟ್ ಬುಕ್ (James Ticket) ಮಾಡುತ್ತಿದ್ದಾರೆ. ಸಿನಿಮಾ ಟಿಕೆಟ್ ಸಿಗುವುದು ಮುಂದಿನ ದಿನಗಳಲ್ಲಿ ಕಷ್ಟ ಆಗಬಹುದು. ಹಾಗಾಗಿ ಮುಂಚಿತವಾಗಿಯೇ ಜನ ಟಿಕೆಟ್ ಬುಕ್ ಮಾಡಲು ಪ್ರಾರಂಭಿಸಿದ್ದಾರೆ. ಟಿಕೆಟ್ ಬುಕ್ಕಿಂಗ್ ವಿಚಾರದಲ್ಲಿ ಜೇಮ್ಸ್ ಹೊಸ ದಾಖಲೆ ಮಾಡಿದೆ. 


ಒಂದೇ ಚಿತ್ರಮಂದಿರದಲ್ಲಿ ಜೇಮ್ಸ್ (James) ಚಿತ್ರದ 5 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಬೆಂಗಳೂರಿನಲ್ಲಿ ಪುನೀತ್ ರಾಜ್‌ಕುಮಾರ್ ನಿವಾಸದ ಬಳಿ ಇರುವ 'ಕಾವೇರಿ ಸಿನಿಮಾಸ್' ಚಿತ್ರಮಂದಿರದಲ್ಲಿ ಬೆಳಗಿನ 4 ಗಂಟೆಯ ಪ್ರದರ್ಶನ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚಿನ ಟಿಕೆಟ್‌ಗಳು ಈಗಾಗಲೇ ಮಾರಾಟ ಆಗಿದ್ದು, ಜನ ಮತ್ತೆ ಮತ್ತೆ ಟಿಕೆಟ್‌ಗಾಗಿ ಮುಗಿಬೀಳುತ್ತಿದ್ದಾರೆ.
 
ಆನ್‌ಲೈನ್‌ ಮೂಲಕವೂ ಹೆಚ್ಚೆಚ್ಚು ಟಿಕೆಟ್ ಬುಕ್ಕಿಂಗ್ ಆಗುತ್ತಿದೆ. 'ಜೇಮ್ಸ್' ಸಿನಿಮಾದ ಟಿಕೆಟ್ ಅನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿರುವ 5 ಗೋಪಾಲನ್ ಮಾಲ್‌ಗಳಲ್ಲಿ ಜೇಮ್ಸ್ (James) ಸಿನಿಮಾ ಟಿಕೆಟ್‌ ಬುಕ್ಕಿಂಗ್ ಮಾಡಬಹುದಾಗಿದೆ. 


ಇದನ್ನೂ ಓದಿ: ಸೈನಿಕನಿಗೆ ಸಲಾಂ ಹೇಳಿದ 'ಜೇಮ್ಸ್'..! ಅಪ್ಪು ಕೊನೆಯ ಸಿನಿಮಾದ ಮತ್ತೊಂದು ಹಾಡು ರಿಲೀಸ್..!


ಮೈಸೂರು ರಸ್ತೆಯಲ್ಲಿರುವ ಗೋಪಾಲನ್ ಆರ್ಕೇಡ್‌, ಬನ್ನೇರುಘಟ್ಟದ ಗೋಪಾಲನ್ ಮಾಲ್, ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್, ಸಿರ್ಸಿ ಸರ್ಕಲ್‌ನಲ್ಲಿರುವ ಗೋಪಾಲನ್ ಮಾಲ್, ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಮಿನಿಪ್ಲೆಕ್ಸ್‌ನಲ್ಲಿ 'ಜೇಮ್ಸ್' ಚಿತ್ರದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ.


ಕರ್ನಾಟಕದಲ್ಲಿ ಈಗಾಗಲೇ ಸುಮಾರು 135 ಚಿತ್ರಮಂದಿರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಎರಡನೇ ಹಂತದ ಚಿತ್ರಮಂದಿರಗಳ ಪಟ್ಟಿ ಬಿಡುಗಡೆಯಾಗಬೇಕಿದೆ. ಒಂದು ಅಂದಾಜಿನ ಪ್ರಕಾರ, ಕರ್ನಾಟಕದಲ್ಲಿಯೇ ಸುಮಾರು 400 ಸಿಂಗಲ್ ಸ್ಕ್ರೀನ್‌ಗಳಲ್ಲಿ ಜೇಮ್ಸ್‌ ರಿಲೀಸ್ ಆಗಲಿದೆ. 


ಇನ್ನು ಮಲ್ಟಿಪ್ಲೆಕ್ಸ್‌ನಲ್ಲೂ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಕೊನೆಯ ದಿನವೇ ಥಿಯೇಟರ್‌ಗಳ ಸಂಖ್ಯೆ ಎಷ್ಟು ಎಂಬ ಮಾಹಿತಿ ಹೊರಬೀಳಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.