ಸೈನಿಕನಿಗೆ ಸಲಾಂ ಹೇಳಿದ 'ಜೇಮ್ಸ್'..! ಅಪ್ಪು ಕೊನೆಯ ಸಿನಿಮಾದ ಮತ್ತೊಂದು ಹಾಡು ರಿಲೀಸ್..!

ಜೇಮ್ಸ್' ಕೇವಲ ಸಿನಿಮಾ ಆಗಿಲ್ಲ, ಅದು ಹಬ್ಬದಂತೆ ಸಿಂಗಾರಗೊಂಡಿದೆ. ಮುಂದಿನ ಗುರುವಾರ ಜಗತ್ತಿನಾದ್ಯಂತ ಸಾವಿರಾರು ಥಿಯೇಟರ್‌ಗಳಲ್ಲಿ ರಿಲೀಸ್‌ ಆಗಲಿದ್ದು, ಕೆಲವು ದಿನಗಳ ಹಿಂದೆ 'ಟ್ರೇಡ್‌ ಮಾರ್ಕ್‌' ಹಾಡು ರಿಲೀಸ್‌ ಆಗಿ ಹೊಸ ದಾಖಲೆ ಬರೆದಿತ್ತು.

Written by - Malathesha M | Last Updated : Mar 11, 2022, 12:08 PM IST
  • ಜೇಮ್ಸ್ ಚಿತ್ರದ 'ಸಲಾಂ ಸೋಲ್ಡರ್' ರಿಲೀಸ್‌ ಹಾಡು ರಿಲೀಸ್
  • ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವ್ಯೂವ್ಸ್
  • ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಟ್ರೆಂಡ್‌ ಕ್ರಿಯೇಟ್‌
ಸೈನಿಕನಿಗೆ ಸಲಾಂ ಹೇಳಿದ 'ಜೇಮ್ಸ್'..! ಅಪ್ಪು ಕೊನೆಯ ಸಿನಿಮಾದ ಮತ್ತೊಂದು ಹಾಡು ರಿಲೀಸ್..! title=
ಜೇಮ್ಸ್ ಚಿತ್ರದ 'ಸಲಾಂ ಸೋಲ್ಡರ್' ರಿಲೀಸ್‌ ಹಾಡು ರಿಲೀಸ್

ಬೆಂಗಳೂರು : 'ಜೇಮ್ಸ್'.. (James) ಅಪ್ಪು ಅಭಿನಯದ ಕೊನೆಯ ಸಿನಿಮಾ. ಎಲ್ಲೆಲ್ಲೂ ಸೌಂಡ್‌ ಮಾಡ್ತಿರೋ 'ಜೇಮ್ಸ್' ಚಿತ್ರದ ಮತ್ತೊಂದು ಸಾಂಗ್‌ ಇವತ್ತು ರಿಲೀಸ್‌ ಆಗಿದೆ (James song release). 'ಸಲಾಂ ಸೋಲ್ಡರ್' ಹಾಡು ಇಂದು ರಿಲೀಸ್‌ ಆಗಿದ್ದು, ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀವ್ಸ್‌ ಗಿಟ್ಟಿಸುವ ಮೂಲಕ ಹೊಸ ದಾಖಲೆ ಮೂಡಿಸಿದೆ.

'ಜೇಮ್ಸ್' (James film) ಕೇವಲ ಸಿನಿಮಾ ಆಗಿಲ್ಲ, ಅದು ಹಬ್ಬದಂತೆ ಸಿಂಗಾರಗೊಂಡಿದೆ. ಮುಂದಿನ ಗುರುವಾರ ಜಗತ್ತಿನಾದ್ಯಂತ ಸಾವಿರಾರು ಥಿಯೇಟರ್‌ಗಳಲ್ಲಿ ರಿಲೀಸ್‌ ಆಗಲಿದ್ದು, ಕೆಲವು ದಿನಗಳ ಹಿಂದೆ 'ಟ್ರೇಡ್‌ ಮಾರ್ಕ್‌' ಹಾಡು ರಿಲೀಸ್‌ ಆಗಿ ಹೊಸ ದಾಖಲೆ ಬರೆದಿತ್ತು (James song records). ಇಂದು ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ 'ಜೇಮ್ಸ್' ಚಿತ್ರತಂಡ. ಈ ಮೂಲಕ ಅಪ್ಪು ಕೊನೆಯ ಸಿನಿಮಾ ಕ್ರೇಜ್‌ ಮುಗಿಲು ಮುಟ್ಟಿದೆ.

ಇದನ್ನೂ ಓದಿ : Kangana On PM Modi: 'ಈ ಕಾರಣಕ್ಕಾಗಿ ನಾನು PM Modi ಪರವಾಗಿ ಹೋರಾಡುತ್ತೇನೆ', ವಿಡಿಯೋ ಹಂಚಿಕೊಂಡು Kangana Ranaut ಹೇಳಿದ್ದೇನು?

ಸಖತ್ ಸಂಭ್ರಮ..!
'ಜೇಮ್ಸ್' ಟೀಸರ್‌ ಬಿಡುಗಡೆಯಾದ ಸಂದರ್ಭದಲ್ಲಿ ಅಭಿಮಾನಿಗಳು ದೇಶಾದ್ಯಂತ ಸಂಭ್ರಮಿಸಿದ್ದರು (James teaser). ನಂತರ ಮೊದಲ ಹಾಡು ರಿಲೀಸ್‌ ಆಗಿ ದೊಡ್ಡ ಹೈಪ್‌ ಕ್ರಿಯೇಟ್‌ ಮಾಡಿತ್ತು. ಇದೀಗ 'ಸಲಾಂ ಸೋಲ್ಡರ್' ರಿಲೀಸ್‌ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ (Salam Soldier song release). ಅಪ್ಪು ಅಭಿಮಾನಿಗಳ ಸಂಭ್ರಮ ಡಬಲ್‌ ಆಗಿದೆ.

 

'ಜೇಮ್ಸ್' ಸಿನಿಮಾದಲ್ಲಿ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರು ಸೈನಿಕನ ಪಾತ್ರದಲ್ಲಿ ಮಿಂಚಲಿದ್ದಾರೆ. 'ಸಲಾಂ ಸೋಲ್ಡರ್' ಹಾಡಿನ ಮೂಲಕ ಭಾರತದ ಹೆಮ್ಮೆಯ ಸೈನಿಕರಿಗೆ 'ಜೇಮ್ಸ್' ಚಿತ್ರತಂಡ ಗೌರವ ಸಲ್ಲಿಸಿದೆ. ನೀವು ಕೂಡ ಮಿಸ್‌ ಮಾಡದೆ ಹಾಡು ನೋಡಿ.

 

ಇದನ್ನೂ ಓದಿ :  Samantha-Nagachaitanya: ನಟಿ ಸಮಂತಾ & ನಾಗಚೈತನ್ಯ ನಡುವೆ ಮತ್ತೊಂದು ಮಹಾ ಬಿರುಕು..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News