Sudeep and Darshan : ಮತ್ತೆ ಒಂದಾಗಲಿದ್ದಾರೆ ಸುದೀಪ್ ಮತ್ತು ದರ್ಶನ್..!

ಅಪ್ಪು ಅಭಿನಯದ ಜೇಮ್ಸ್ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಸುದೀಪ್ ಹಾಗೂ ದರ್ಶನ್ ಒಂದಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಇಬ್ಬರೂ ಸ್ಟಾರ್ ಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದು ಸುದೀಪ್ ಹಾಗೂ ದರ್ಶನ್ ಫ್ಯಾನ್ಸ್ ಗೆ ಸಿಹಿ ಸುದ್ದಿ ನೀಡಿದೆ.

Written by - Malathesha M | Last Updated : Mar 5, 2022, 04:37 PM IST
  • ಅಪ್ಪು ಅಭಿನಯದ ಜೇಮ್ಸ್ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ
  • ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಒಂದಾಗಲಿದ್ದಾರೆ ಸುದೀಪ್ ಹಾಗೂ ದರ್ಶನ್
  • 'ಅಪ್ಪು' ಅಭಿಮಾನ
Sudeep and Darshan : ಮತ್ತೆ ಒಂದಾಗಲಿದ್ದಾರೆ ಸುದೀಪ್ ಮತ್ತು ದರ್ಶನ್..! title=

ಕಿಚ್ಚ ಸುದೀಪ್ ಹಾಗೂ ಡಿ ಬಾಸ್ ದರ್ಶನ್ ಈ ಮೊದಲಿನಿಂದಲೂ ಕುಚಿಕುಗಳು. ಆದ್ರೆ ಮೊದಲಿದ್ದ ಬಾಂಧವ್ಯ ಈಗ ಉಳಿದಿಲ್ಲ ಅನ್ನೋ ಬೇಸರ ಅಭಿಮಾನಿಗಳನ್ನ ಕಾಡುತ್ತಿತ್ತು‌. ಇದೀಗ ಇಬ್ಬರೂ ನಟರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಸಮಯ ಕೂಡಿ ಬಂದಿದೆ‌. ಇದು ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟು ಮಾಡಿದೆ.

ದರ್ಶನ್‌(Darshan) ಸ್ಯಾಂಡಲ್‌ವುಡ್‌ನ ಮಾಸ್‌ ಮ್ಯಾನ್.‌. ಹೀಗೆ ತಮ್ಮ ಮಾಸ್‌ ಲುಕ್‌ ಹಾಗೂ ಮಾಸ್‌ ಆಕ್ಟಿಂಗ್‌ ಮೂಲಕವೇ ಕೋಟಿ ಕೋಟಿ ಅಭಿಮಾನಿಗಳ ಹೃದಯ ಗೆದ್ದವರು ದರ್ಶನ್.‌ ಹಾಗೇ ಸುದೀಪ್ ಕೂಡ ತಮ್ಮ ಆಕ್ಟಿಂಗ್ ಖದರ್ ಮೂಲಕ ದೇಶ ವಿದೇಶದಲ್ಲೂ ಸದ್ದು ಮಾಡಿದವರು. ಹೀಗೆ ಈ ಇಬ್ಬರೂ ನಟರು ಸಖತ್ ಕ್ಲೋಸ್ ಆಗಿದ್ರು‌. ಆದರೆ ಅದೇನಾಯ್ತೋ ಇಬ್ಬರ ಸ್ನೇಹದಲ್ಲಿ ದಿಢೀರ್ ಬಿರುಕೊಂದು ಮೂಡಿತ್ತು.

ಇದನ್ನೂ ಓದಿ : Kichcha Sudeep: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಕಿಚ್ಚ ಸುದೀಪ್ ಭೇಟಿ

ಹೀಗೆ ದಶಕಗಳ ಬಾಂಧವ್ಯ ಹಲವು ವರ್ಷಗಳಿಂದ ಮುರಿದುಬಿದ್ದಿದೆ‌. ಈ ಹೊತ್ತಲ್ಲಿ ದರ್ಶನ್ ಹಾಗೂ ಸುದೀಪ್(Sudeep - Darshan,) ಅಭಿಮಾನಿಗಳು ಬೇಸರಪಡುತ್ತಿದ್ದಾರೆ‌. ಇಬ್ಬರೂ ನಟರು ಒಂದಾಗಲಿ ಅನ್ನೋ ಆಶಯ ಎಲ್ಲರಲ್ಲೂ ಇದೆ. ಆದರೆ ಆ ಶುಭ ಸಂದರ್ಭಕ್ಕೆ ಇನ್ನೂ ಸಮಯ ಕೂಡಿ ಬಂದಿಲ್ಲ ಅಂತಾ ಫ್ಯಾನ್ಸ್ ಬೇಸರದಲ್ಲಿ ಇದ್ದರು‌. ಇದೀಗ ಚಂದನವನದಿಂದ ಸಿಹಿ ಸುದ್ದಿಯೊಂದು ಹೊರಬಿದ್ದಿದ್ದು, ದರ್ಶನ್ ಹಾಗೂ ಸುದೀಪ್ ಒಂದಾಗುತ್ತಿದ್ದಾರಂತೆ.

ಅಂದಹಾಗೆ ಅಪ್ಪು ಅಭಿನಯದ ಜೇಮ್ಸ್ ಸಿನಿಮಾ(James Movie Grand Pre-Release Event) ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಸುದೀಪ್ ಹಾಗೂ ದರ್ಶನ್ ಒಂದಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಇಬ್ಬರೂ ಸ್ಟಾರ್ ಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದು ಸುದೀಪ್ ಹಾಗೂ ದರ್ಶನ್ ಫ್ಯಾನ್ಸ್ ಗೆ ಸಿಹಿ ಸುದ್ದಿ ನೀಡಿದೆ.

ಸ್ಟಾರ್ ಗಳ ಎಂಟ್ರಿ..!

ಒಂದು ಕಡೆ ಪವರ್‌ ಸ್ಟಾರ್‌(Puneeth Rajkumar) ಸಿನಿಮಾ ಬಿಡುಗಡೆಗೆ ಸಿದ್ಧತೆ ಸಾಗಿದ್ದರೆ, ಫ್ಯಾನ್ಸ್ ಸಂಭ್ರಮಾಚರಣೆ ಮುಗಿಲು ಮುಟ್ಟುವ ನಿರೀಕ್ಷೆ ದಟ್ಟವಾಗಿದೆ. ಈ ಮಧ್ಯೆ ಜೇಮ್ಸ್‌ ಚಿತ್ರದ ಪ್ರೀರಿಲೀಸ್‌ ಇವೆಂಟ್‌ಗೆ ದೊಡ್ಡ ದೊಡ್ಡ ಸ್ಟಾರ್‌ಗಳನ್ನೇ ಕರೆಸಲು‌ ಪ್ಲ್ಯಾನ್‌ ಮಾಡಿಕೊಳ್ಳಲಾಗಿದೆ‌.

'ಅಪ್ಪು' ಅಭಿಮಾನ

ಪುನೀತ್ ರಾಜ್‌ಕುಮಾರ್(Puneeth Rajkumar) ಕೊನೆ ಸಿನಿಮಾ 'ಜೇಮ್ಸ್' ಮೇಲಿನ ನಿರೀಕ್ಷೆಗಳು ಮುಗಿಲು ಮುಟ್ಟಿವೆ. ಇಷ್ಟು ವರ್ಷ ಅಪ್ಪು ಚಿತ್ರರಂಗ ಹಾಗೂ ಸಮಾಜ ಮತ್ತು ಕರುನಾಡಿಗೆ ಮಾಡಿದ್ದ ಸೇವೆಗೆ ಜೇಮ್ಸ್ ಮೂಲಕ ಉಡುಗೊರೆ ನೀಡಲು ಇಡೀ ಕರುನಾಡು ಸಜ್ಜಾಗಿದೆ. ಕೋಟಿ ಕೋಟಿ ಕನ್ನಡಿಗರು ಜೇಮ್ಸ್‌ ಚಿತ್ರಕ್ಕಾಗಿ ಕಾದು ಕುಳಿತಿದ್ದಾರೆ. ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ಪುನೀತ್ ಅವರ  ಹುಟ್ಟುಹಬ್ಬದ ದಿನದಂದೇ ಸಿನಿಮಾ ರಿಲೀಸ್‌ ಆಗುತ್ತಿರುವ ಹಿನ್ನೆಲೆ ಅಪ್ಪು ಅಭಿಮಾನಿ ಬಳಗಕ್ಕೆ ಡಬಲ್‌ ಧಮಾಖಾ ಸಿಕ್ಕಂತಾಗಿದೆ. ಹೀಗೆ ಬೆಟ್ಟದಷ್ಟು ನಿರೀಕ್ಷೆ ಇರುವ ಅಪ್ಪು ಸಿನಿಮಾದ ಪ್ರೀ ರಿಲೀಸ್‌ ಇವೆಂಟ್‌ಗೆ ತೆಲುಗು ಸಿನಿ ರಂಗದ ಇಬ್ಬರು ಘಟಾನುಘಟಿ ನಟರು ಅತಿಥಿಗಳಾಗಿ ಬರುವ ನಿರೀಕ್ಷೆ ಇದೆ. ಜೊತೆಗೆ ನಟ ಸುದೀಪ್ ಹಾಗೂ ನಟ ದರ್ಶನ್ ಕೂಡ ಭಾಗವಹಿಸಲಿದ್ದಾರೆ ಎನ್ನಲಾಗಿದೆ‌.

ಇದನ್ನೂ ಓದಿ : 

ಒಟ್ಟಾರೆ ಹೇಳೋದಾದ್ರೆ ಜೇಮ್ಸ್‌(James Movie) ಜಗತ್ತಿನಾದ್ಯಂತ ಹವಾ ಎಬ್ಬಿಸೋದು ಪಕ್ಕಾ. ಈಗಾಗಲೇ ಸೈನಿಕನಾಗಿ ಅಪ್ಪು ಅವರ ಪೋಸ್ಟರ್‌ ಸಖತ್‌ ಹವಾ ಕ್ರಿಯೇಟ್‌ ಮಾಡಿದ್ದು, ಟೀಸರ್‌ ಕೂಡ ಅಷ್ಟೇ ಖಡಕ್‌ ಆಗಿದೆ. ಹಾಗೇ ಜೇಮ್ಸ್ ಟೀಸರ್ ಮತ್ತು ಟ್ರೇಡ್ ಮಾರ್ಕ್ ಹಾಡು ಕೂಡ ಸಖತ್ ಹವಾ ಎಬ್ಬಿಸಿದೆ. ಹೀಗಾಗಿ ಜೇಮ್ಸ್‌ ಬ್ಲಾಕ್‌ ಬಸ್ಟರ್‌ ಸಿನಿಮಾ ಆಗುವ ಜೊತೆಗೆ, ಎಂದೆಂದಿಗೂ ಕನ್ನಡಿಗರ ಮನದಲ್ಲಿ ಉಳಿಯುವ ಸಿನಿಮಾ ಆಗೋದರಲ್ಲಿ ಎರಡನೇ ಮಾತಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News