ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿ (Bigg Boss)  ಸೆಲೆಬ್ರಿಟಿ  ಜಯಶ್ರಿ ರಾಮಯ್ಯ (Jayashree Ramaiah) ಆತ್ಮಹತ್ಯೆ ಪ್ರಕರಣ ಕನ್ನಡ ಚಿತ್ರರಂಗಕ್ಕೆ ಶಾಕ್ ನೀಡಿದೆ.  ಈ ನಡುವೆ, ಜಯಶ್ರೀ ಬರೆದಿರುವ ಡೆತ್ ನೋಟ್ (Death Note)ಸಿಕ್ಕಿದೆ.  ಆ ಡೆತ್ ನೋಟಿನಲ್ಲಿ ಪಶ್ಚಾತ್ತಾಪದ ದನಿಯೊಂದು ವ್ಯಕ್ತವಾಗುತ್ತಿದೆ.  ತನ್ನ ಮಾವ ಗಿರೀಶ್ ಬಗ್ಗೆ ಮಾಡಿದ ಅಪಾದನೆಗಳು ಸರಿಯಿರಲಿಲ್ಲ. ಮಾವ ತನಗೆ ತುಂಬಾ ನೆರವಾಗಿದ್ದಾರೆ ಅಂತೆಲ್ಲಾ ಹೇಳಿಕೊಂಡಿದ್ದಾರೆ.  ಅದರಲ್ಲಿ ಏನಿದೆ ಅನ್ನೋದು ಇಲ್ಲಿ ಚುಟುಕಾಗಿ ಹೇಳ್ತೀವಿ.


COMMERCIAL BREAK
SCROLL TO CONTINUE READING

“ಅಭಿವೃದ್ಧಿ ಮತ್ತು ಅಧಃಪತನ ಎರಡಕ್ಕೂ ನಾನೇ ಕಾರಣ, ನನ್ನನ್ನು ಕ್ಷಮಿಸಿ”
ಜಯಶ್ರೀ ರಾಮಯ್ಯ (Jayashree Ramaiah) ಬರೆದ್ದಿದ್ದಾರೆ ಎನ್ನಲಾದ ಡೆತ್ ನೋಟ್ ಬಹಿರಂಗವಾಗಿದೆ. ಅದರಲ್ಲೊಂದು ಪಶ್ಚಾತ್ತಾಪದ ಗೆರೆ ಕಾಣಿಸುತ್ತಿದೆ. ಅದರಲ್ಲೇನಿದೆ ನೋಡಿ. 
“ಚಿಕ್ಕಂದಿನಿಂದಲೂ ಮಾನಸಿಕ ಖಿನ್ನತೆ (Depression)ಯಿಂದ ಬಳಲುತ್ತಿದ್ದೆ. ನನ್ನ ಕುಟುಂಬವನ್ನು ಅರ್ಥ ಮಾಡಿಕೊಳ್ಳೋಕೆ ಸಾಧ್ಯವಾಗಲೇ ಇಲ್ಲ. ನನ್ನ ಮಾವ ಬಹಳ ಹಿಂದಿನಿಂದಲೂ  ನನಗೆ ಸಲಹೆ ನೀಡುತ್ತಲೇ ಬಂದಿದ್ದರು. ನಮ್ಮ ಮಾವನಿಗೆ ಬಹಳ ಕಷ್ಟ ಕೊಟ್ಟಿದ್ದೇನೆ. ಇದರಿಂದ ಕೋಪಗೊಂಡು, ನಮ್ಮ ಸಮಸ್ಯೆಗಳಿಗೆ ನಮ್ಮ ಮಾವನೇ ಕಾರಣ ಎಂದು ಮಾಧ್ಯಮಗಳಲ್ಲಿ ಹೇಳಿದ್ದೆ. ಮಾವನ ಮರ್ಯಾದೆಯನ್ನು ಹಾಳು ಮಾಡಿದ್ದಕ್ಕೆ ನನ್ನನ್ನು ನಾನು ದೂಷಿಸುತ್ತಿದ್ದೇನೆ. ನನ್ನ ಯಾವುದೇ ಸಮಸ್ಯೆಗಳಿಗೆ ನಮ್ಮ ಮಾವ ಎಂದೂ ಕಾರಣವಾಗಿರಲಿಲ್ಲ. ಮುಂದೆಂದೂ ನಾನು ಯಾರಿಗೂ ತೊಂದರೆ ನೀಡುವುದಿಲ್ಲ. ಉತ್ತಮವಾಗಿ ಬದುಕಲು ಇದು ಕೊನೆಯ ಅವಕಾಶ ಎಂದು ಭಾವಿಸುತ್ತೇನೆ. ಮಾನಸಿಕ ಖಿನ್ನತೆಯಿಂದ ನಾನು ಹೊರ ಬರಲು ನಮ್ಮ ಮಾವ ಸಾಧ್ಯವಾದಷ್ಟು ಸಹಾಯ ಮಾಡಿದ್ದಾರೆ. ಕೋಪಗೊಂಡು, ಜಿಗುಪ್ಸೆಯಿಂದ ಮತ್ತು ಅತಿಯಾಗಿ ಯೋಚನೆ ಮಾಡಿದ ಕಾರಣ ನಮ್ಮ ಮಾವನ ವಿರುದ್ಧ ನಾನು ಮಾಧ್ಯಮಗಳಲ್ಲಿ(Media) ಸುಳ್ಳು ಹೇಳಿದ್ದೇನೆ. ನನ್ನ ಅಭಿವೃದ್ಧಿ ಮತ್ತು ಅಧಃಪತನ ಎರಡಕ್ಕೂ ನಾನೇ ಕಾರಣ, ನನ್ನನ್ನು ಕ್ಷಮಿಸಿ” ಎಂದು ಬರೆದಿದ್ದಾರೆ.



ಇದನ್ನೂ ಓದಿ :Jayashree Ramaiah Suicide : ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ ನೇಣಿಗೆ ಶರಣು


ಕನ್ನಡ ಚಿತ್ರ ನಟಿ ಮತ್ತು ಕನ್ನಡ ಬಿಗ್ ಬಾಸ್ (Bigboss) ಸ್ಪರ್ಧಿ ಜಯಶ್ರೀ ರಾಮಯ್ಯ (Jayashree Ramaiah) ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಜಯಶ್ರೀ ರಾಮಯ್ಯ ಮೃತದೇಹ ಸಂಧ್ಯಾಕಿರಣ (Sandhya Kiran) ಆಶ್ರಮದಲ್ಲಿ  ನೇಣು ಬಿಗಿದ ಸ್ಥಿತಿಯಲ್ಲಿ  ಪತ್ತೆಯಾಗಿತ್ತು. .


 ಜಯಶ್ರೀ ರಾಮಯ್ಯ (Jayashree Ramaiah ಸ್ವಲ್ಪ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದು,  ಜಯಶ್ರೀ ರಾಮಯ್ಯ ಅವರು ಬೆಂಗಳೂರಿನ ಸಂಧ್ಯಾ ಕಿರಣ್ ಆಶ್ರಮದಲ್ಲಿ (Sandhya Kiran Ashram) ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಅವರುಬಿಗ್ ಬಾಸ್ ಸೀಸನ್ (Bigboss) 3 ರ ಸ್ಪರ್ಧಿಯಾಗಿದ್ದರು. ಜಯಶ್ರೀ ರಾಮಯ್ಯ  ಉಪ್ಪು ಹುಳಿ ಖಾರ, ಕನ್ನಡಗೊತ್ತಿಲ್ಲ  ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು.


ಇದನ್ನೂ ಓದಿ : ಸಾಯುವ ವಯಸ್ಸು ಇದಾಗಿರಲಿಲ್ಲ , ಹೀಗಿತ್ತು Jayashree Ramaiah ಪಯಣ...


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.