ಸಾಯುವ ವಯಸ್ಸು ಇದಾಗಿರಲಿಲ್ಲ , ಹೀಗಿತ್ತು Jayashree Ramaiah ಪಯಣ...

 ಕನ್ನಡ ಚಲನಚಿತ್ರ ನಟಿ,  ರೂಪದರ್ಶಿ, ಕನ್ನಡ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ ಇಹ ಲೋಕ ತ್ಯಜಿಸಿದ್ದಾರೆ. 

ಬೆಂಗಳೂರು : ಕನ್ನಡ ಚಲನಚಿತ್ರ ನಟಿ,  ರೂಪದರ್ಶಿ, ಕನ್ನಡ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ (Jayashree Ramaiah) ಇಹ ಲೋಕ ತ್ಯಜಿಸಿದ್ದಾರೆ. ಸಂಧ್ಯಾ ಕಿರಣ (Sandhya Kiran) ಆಶ್ರಮದಲ್ಲಿ ನೇಣಿಗೆ ಕೊರಳೊಡ್ಡಿ ಈ ಲೋಕದ ಪಯಣ ಮುಗಿಸಿಬಿಟ್ಟಿದ್ದಾರೆ. ಖಿನ್ನತೆಗೆ ಒಳಗಾಗಿದ್ದ ಜಯಶ್ರೀಗೆ ಚಿಕಿತ್ಸೆಯೂ ನಡೆಯುತ್ತಿತ್ತು. ಆಗಾಗ  ಸಾವಿನ ಬಗ್ಗೆ ಮಾತನಾಡುತ್ತಿದ್ದರು. ಅತಿಕಡಿಮೆ ಅವಧಿಯಲ್ಲಿ  ಜನಪ್ರಿಯತೆಯನ್ನು ಕೂಡಾ ಪಡೆದಿದ್ದರು. ಇಷ್ಟು ಸಣ್ಣ ವಯಸ್ಸಿನಲ್ಲಿ ಸಾವಿನ ನಿರ್ಧಾರ ಮಾಡಿಕೊಂಡು ಬಿಟ್ಟರು. ಜಯಶ್ರೀ    ಪಯಣದ ಬಗ್ಗೆ ಒಂದು  ನೋಟ...

1 /5

ಗಗನ ಸಖಿಯಾಗಬೇಕೆಂಬ ಆಸೆಯಿಟ್ಟುಕೊಂಡಿದ್ದ ಜಯಶ್ರೀ ರಾಮಯ್ಯ.  ಮಾಡೆಲಿಂಗ್ ನಲ್ಲಿಯೂ ಹೆಸರು ಮಾಡಿದ್ದರು.

2 /5

ಕನ್ನಡದ ಬಿಗ್ ಬಾಸ್ 3ನೇ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದರು.  ಆದರೆ ಎರಡೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದರು. 

3 /5

ಉಪ್ಪು ಹುಳಿ ಖಾರ, ಕನ್ನಡ  ಗೊತ್ತಿಲ್ಲ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು..  ಕಡಿಮೆ  ಅವಧೀಯಲ್ಲಿಹೆಚ್ಚು ಜನಪ್ರಿಯತೆ ಕಂಡಂಥಹ ನಟಿ ಇವರು  

4 /5

ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತ ಜಯಶ್ರೀ ಖಿನ್ನತೆಗೆ ಒಳಗಾಗಿದ್ದರು. ಖಿನ್ನತೆ ಜೊತೆ ಹೋರಾಡಲು ಸಾಧ್ಯವಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರು. ಸಂಧ್ಯಾ ಕಿರಣ ಆಶ್ರಮದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

5 /5

ಇಂದು ಸಂಧ್ಯಾ ಕಿರಣ ಆಶ್ರಮದ ಕೋಣೆಯೊಂದರಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಯಶ್ರೀ ಸಾವಿಗೆ ಕನ್ನಡಚಿತ್ರರಂಗ ಕಂಬನಿಮಿಡಿದಿದೆ. ನಿರ್ದೇಶಕ ಟಿ ಎನ್ ಸೀತಾರಾಮ್ ಫೇಸ್ ಬುಕ್ ಲೈವಲ್ಲಿ ಮಾತನಾಡಿದ್ದು, ಇದೊಂದು ದುಃಖದ ವಿಚಾರ. ವಿಷಯ  ಕೇಳಿ ನನ್ನ ಹೃದಯ ಭಾರವಾಗಿದೆ ಎಂದಿದ್ದಾರೆ. ಮನುಷ್ಯನಿಗೆ ಕೆಟ್ಟ  ದಿನಗಳು ಬರುತ್ತವೆ ಆದರೆ ಹೆಚ್ಚು ದಿನ ಅದು ಉಳಿಯುವುದಿಲ್ಲ. ಒಳ್ಳೆಯ ದಿನಗಳನ್ನು ನೋಡುವ ತಾಳ್ಮೆ ನಮ್ಮಲ್ಲಿರಬೇಕು ಎಂದಿದ್ದಾರೆ. ಅಲ್ಲದೆ ಬದುಕಿಗಿಂತ ದೊಡ್ಡದು ಬೇರೊಂದಿಲ್ಲ ಎಂದು ಕಿವಿಮಾತು ಹೇಳಿದ್ದಾರೆ.

You May Like

Sponsored by Taboola