ನಾನು ಅಭಿಷೇಕ್ ಪತ್ನಿ ಎಂದು ಜಾಹ್ನವಿ ಕಪೂರ್ ಹಂಗಾಮ ! ಬಚ್ಚನ್ ನಿವಾಸದ ಎದುರೇ ನಡೆಯಿತು ಆತ್ಮಹತ್ಯೆ ಯತ್ನ !
Aishwarya Rai Abhishek Bachchan:ಬಾಲಿವುಡ್ ಫೆವರಿಟ್ ದಂಪತಿಗಳ ಸಾಲಿನಲ್ಲಿದ್ದ ಇವರಿಬ್ಬರ ಸಂಬಂಧ ವಿಚ್ಚೇದನದವರೆಗೆ ಹೋಗಿದ್ದು ಯಾವ ಕಾರಣದಿಂದ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
Aishwarya Rai Abhishek Bachchan : ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ವಿಚ್ಛೇದನದ ಸುದ್ದಿ ಇದೀಗ ಭಾರೀ ಸದ್ದು ಮಾಡುತ್ತಿದೆ. ಅಭಿಷೇಕ್ ಮತ್ತು ಐಶ್ವರ್ಯ ವಿವಾಹವಾಗಿ 16 ವರ್ಷವಾಗಿದೆ. 16 ವರ್ಷ ಚೆನ್ನಾಗಿಯೇ ಇದ್ದ ಇವರ ಸಂಬಂಧದಲ್ಲಿ ಇದ್ದಕ್ಕಿದ್ದಂತೆ ಬಿರುಕು ಕಾಣಿಸಿಕೊಂಡಿದೆ. ವಿಚ್ಛೇದನದ ಸುದ್ದಿಯ ಮಧ್ಯೆಯೇ ಅಲ್ಲಲ್ಲಿ ಕೆಲವೊಂದು ಸಮಾರಂಭದಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿರುವುದು ಕೂಡಾ ಪತ್ತೆಯಾಗಿತ್ತು. ಆದರೆ ಅಲ್ಲಿ ಕೂಡಾ ಇಬ್ಬರ ಹಿಂದೆ ಮಧ್ಯೆ ಇದ್ದ ಕೆಮಿಸ್ಟ್ರಿ ಕಾಣಿಸುತ್ತಿರಲಿಲ್ಲ. ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಕೂಡಾ ಹೇಳಲಾಗುತ್ತಿದೆ. ಬಾಲಿವುಡ್ ಫೆವರಿಟ್ ದಂಪತಿಗಳ ಸಾಲಿನಲ್ಲಿದ್ದ ಇವರಿಬ್ಬರ ಸಂಬಂಧ ವಿಚ್ಚೇದನದವರೆಗೆ ಹೋಗಿದ್ದು ಯಾವ ಕಾರಣದಿಂದ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
ಏಪ್ರಿಲ್ 20, 2007 ರಂದು ಐಶ್ವರ್ಯ ಮತ್ತು ಅಭಿಷೇಕ್ ವಿವಾಹ :
ಏಪ್ರಿಲ್ 20, 2007 ರಂದು ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್ ವಿವಾಹದ ವೇಳೆಯೂ ಅನೇಕ ವಿವಾದಗಳು ಎದ್ದಿತು. ವಿವಾದಗಳೇನೆ ಇದ್ದರೂ ನಂತರ ಎಲ್ಲವೂ ಬಗೆಹರಿದಿತ್ತು. ಹ್ಯಾಪಿ ಕಪಲ್ ಎಂದೇ ಇವರಿಬ್ಬರು ಕರೆಸಿಕೊಳ್ಳುತ್ತಿದ್ದರು. ಯಾವುದೇ ಸಮಾರಂಭವಾಗಲಿ ಒಬ್ಬರನ್ನೊಬ್ಬರು ಹೊಗಳುವ ಅಥವಾ ತಾವು ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸುತ್ತೇವೆ ಎನ್ನುವುದನ್ನು ವ್ಯಕ್ತಪಡಿಸುವ ಅವಕಾಶವನ್ನು ಇಬ್ಬರೂ ಬಿಡುತ್ತಿರಲಿಲ್ಲ.
ಇದನ್ನೂ ಓದಿ : BBK 10 : ಈ ವಾರದ ಕ್ಯಾಪ್ಟನ್ ಪಟ್ಟ ಯಾರಿಗೆ..? ಸ್ಪರ್ಧಿಗಳ ಕುಟುಂಬಸ್ಥರು ಹೇಳಿದ್ದು ಈ ಒಬ್ಬ ವ್ಯಕ್ತಿ ಹೆಸರು ಮಾತ್ರ
ಖ್ಯಾತ ನಟಿಯ ಹಂಗಾಮ :
16 ವರ್ಷಗಳ ಹಿಂದೆ ಇವರ ಮದುವೆಯ ವೇಳೆಯೇ ಖ್ಯಾತ ನಟಿ ಮತ್ತು ಮಾಡೆಲ್ ಒಬ್ಬರು ನಾನೇ ಅಭಿಷೇಕ್ ನಿಜವಾದ ಪತ್ನಿ ಎಂದು ಹಂಗಾಮ ನಡೆಸಿದ್ದರು. ಅಭಿಷೇಕ್ ನನಗೆ ಮೋಸ ಮಾಡಿ ಐಶ್ವರ್ಯ ಅವರನ್ನು ವಿವಾಹವಾಗುತ್ತಿದ್ದಾರೆ ಎಂದು ಗಲಾಟೆ ಎಬ್ಬಿಸಿದ್ದರು. ಈ ಬಗ್ಗೆ ಜುಹು ಪೊಲೀಸ್ ಠಾಣೆಗೆ ತೆರಳಿ ಅಭಿಷೇಕ್ ವಿರುದ್ಧ ಪ್ರಕರಣ ದಾಖಲಿಸಿ ಮದುವೆ ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದರು ಕೂಡಾ. ಆದರೆ, ಆ ಸಂದರ್ಭದಲ್ಲಿ ಪೊಲೀಸರು ಜಾಹ್ನವಿ ದೂರು ದಾಖಲಿಸಿಕೊಂಡಿರಲಿಲ್ಲ.
ಪೊಲೀಸರ ವರ್ತನೆಯಿಂದ ಬೇಸತ್ತ ನಟಿ, ಮಾಡೆಲ್ ತನ್ನ ಕೈಯ ನರವನ್ನು ಕತ್ತರಿಸಿ ಬಚ್ಚನ್ ನಿವಾಸದ ಎದುರು ಆತ್ಮಹತ್ಯೆಗೂ ಯತ್ನಿಸಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾತ್ರವಲ್ಲ ಐಶ್ವರ್ಯ - ಅಭಿಷೇಕ್ ಮದುವೆ ಮುಗಿಯುವವರೆಗೂ ಜಾಹ್ನವಿಯನ್ನು ಆಸ್ಪತ್ರೆಯಲ್ಲಿಯೇ ಇರಿಸಲಾಗಿತ್ತು.
ಇದನ್ನೂ ಓದಿ : Kaatera Review : ‘ಕಾಟೇರ’ನಿಗೆ ವಿಜಯಲಕ್ಷ್ಮಿ ದರ್ಶನ್ ಫಿದಾ..! ಪತಿ ಸಿನಿಮಾ ಬಗ್ಗೆ ಹೇಳಿದ್ದಿಷ್ಟು
ಮಾಡೆಲ್ ಮತ್ತು ನಟಿ ಜಾನ್ವಿ 2005 ರ 'ದಸ್' ಚಿತ್ರದಲ್ಲಿ ಅಭಿಷೇಕ್ ಜೊತೆ ಕೆಲಸ ಮಾಡಿದ್ದರು. ಈ ಘಟನೆಯ ನಂತರ, ಜಾಹ್ನವಿ ಕಪೂರ್ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಮಾಧ್ಯಮಗಳ ಎದುರು ಕೂಡಾ ಬಂದಿಲ್ಲ. ಈಗ ಅವರು ಎಲ್ಲಿದ್ದಾರೆ ಎನ್ನುವ ಬಗ್ಗೆ ಕೂಡಾ ಯಾವುದೇ ಮಾಹಿತಿ ಇಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.