ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ ಸದ್ಯದಲ್ಲೇ ಶುರು

ಗೋಲ್ಡನ್ ಸ್ಟಾರ್ ಗಣೇಶ್, ಅಮೂಲ್ಯ, ಅನಂತ್ ನಾಗ್, ತಾರಾ ಹಾಗೂ ಸಾಧುಕೋಕಿಲ ಪ್ರಮುಖ ಭೂಮಿಕೆಯಲ್ಲಿದ್ದ ಶ್ರಾವಣಿ ಸುಬ್ರಮಣ್ಯ ಸಿನಿಮಾ ಬಿಡುಗಡೆಯಾಗಿ ಹತ್ತು ವರ್ಷಗಳನ್ನು ಪೂರೈಸಿದೆ. ದಶಕದ ಸಂಭ್ರಮದ ನೆನಪಿನಲ್ಲಿಯೇ "ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ" ಸಿನಿಮಾ ಅನೌನ್ಸ್ ಮಾಡಿದ್ದಾರೆ ನಿರ್ಮಾಪಕ ಕೆ.ಎ.ಸುರೇಶ್. 

Written by - YASHODHA POOJARI | Edited by - Manjunath N | Last Updated : Dec 28, 2023, 11:18 PM IST
  • 27 ಡಿಸೆಂಬರ್ 2013 ರಲ್ಲಿ ತೆರೆಕಂಡಿದ್ದ ಶ್ರಾವಣಿ ಸುಬ್ರಮಣ್ಯ, ಸೂಪರ್ ಹಿಟ್ ಆಗುವ ಮೂಲಕ ಎಲ್ಲರಿಗೂ ಬ್ರೇಕ್ ಕೊಟ್ಟಿತ್ತು
  • ಗಣೇಶ್ - ಅಮೂಲ್ಯ ಜೋಡಿಯ ಎಲ್ಲರೂ ನೋಡಿ ಮೆಚ್ಚಿಕೊಂಡಿದ್ದರಿಂದ ಸಿನಿಮಾ ಶತಕ ಪೂರೈಸುವಲ್ಲಿ ಯಶಸ್ವಿಯಾಯಿತು
  • ಇದೀಗ ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ ಅಧಿಕೃತವಾಗಿ ಘೋಷಣೆಯಾಗಿದೆ
 ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ ಸದ್ಯದಲ್ಲೇ ಶುರು title=

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್, ಅಮೂಲ್ಯ, ಅನಂತ್ ನಾಗ್, ತಾರಾ ಹಾಗೂ ಸಾಧುಕೋಕಿಲ ಪ್ರಮುಖ ಭೂಮಿಕೆಯಲ್ಲಿದ್ದ ಶ್ರಾವಣಿ ಸುಬ್ರಮಣ್ಯ ಸಿನಿಮಾ ಬಿಡುಗಡೆಯಾಗಿ ಹತ್ತು ವರ್ಷಗಳನ್ನು ಪೂರೈಸಿದೆ. ದಶಕದ ಸಂಭ್ರಮದ ನೆನಪಿನಲ್ಲಿಯೇ "ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ" ಸಿನಿಮಾ ಅನೌನ್ಸ್ ಮಾಡಿದ್ದಾರೆ ನಿರ್ಮಾಪಕ ಕೆ.ಎ.ಸುರೇಶ್. 

ಇದನ್ನೂ ಓದಿ: ದಿನ ಪತ್ರಿಕೆ ವಿತರಕರಿಂದ ಅಪಘಾತ ಪರಿಹಾರ ಹಾಗೂ ವೈದ್ಯಕೀಯ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

27 ಡಿಸೆಂಬರ್ 2013 ರಲ್ಲಿ ತೆರೆಕಂಡಿದ್ದ ಶ್ರಾವಣಿ ಸುಬ್ರಮಣ್ಯ, ಸೂಪರ್ ಹಿಟ್ ಆಗುವ ಮೂಲಕ ಎಲ್ಲರಿಗೂ ಬ್ರೇಕ್ ಕೊಟ್ಟಿತ್ತು. ಗಣೇಶ್ - ಅಮೂಲ್ಯ ಜೋಡಿಯ ಎಲ್ಲರೂ ನೋಡಿ ಮೆಚ್ಚಿಕೊಂಡಿದ್ದರಿಂದ ಸಿನಿಮಾ ಶತಕ ಪೂರೈಸುವಲ್ಲಿ ಯಶಸ್ವಿಯಾಯಿತು. ಇದೀಗ ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ ಅಧಿಕೃತವಾಗಿ ಘೋಷಣೆಯಾಗಿದೆ. ಸದ್ಯ ಹರಿಬಿಟ್ಟಿರುವ ಕಲರ್ ಫುಲ್ ಪೋಸ್ಟರ್ ಸಿನಿಮಾ ಮೇಲೆ ಕೂತುಹಲ ಮಾಡುವಂತಿದೆ. ಶ್ರಾವಣಿ ಸುಬ್ರಮಣ್ಯ ಗೆದ್ದಿರುವುದರಿಂದ ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ ಜೋಡಿ ಮೋಡಿ ಮಾಡಲಿದೆ ಎಂಬುದು ಪೋಸ್ಟರ್ ನೋಡಿದವರ ಅನಿಸಿಕೆ.

ಇದನ್ನೂ ಓದಿ: ಕಾರ್ಯಕರ್ತರ ಕೋಪಕ್ಕೆ BMTC ಬಸ್‌ ಗ್ಲಾಸ್‌ ಪೀಸ್‌ ಪೀಸ್‌

ಮಂಜು ಸ್ವರಾಜ್ ಅವರೇ ಹೊಸ ಶ್ರಾವಣಿ ಸುಬ್ರಮಣ್ಯ ಜೋಡಿಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಉಳಿದಂತೆ ಕಲಾವಿದರ ಆಯ್ಕೆಗಾಗಿ ಆಡಿಷನ್ ಕರೆದಿದೆ ಚಿತ್ರತಂಡ. ಇದೊಂದು ಯೂತ್ ಫುಲ್ ಲವ್ ಕಮ್ ಫ್ಯಾಮಿಲಿ ಸ್ಟೋರಿ ಆಗಿರುವುದರಿಂದ ಚಿತ್ರದ ನಾಯಕ, ನಾಯಕಿ ಪಾತ್ರಕ್ಕೆ ಹುಡುಕಾಟ ಶುರುವಾಗಿದೆ. 20 ವರ್ಷದ ಆಸುಪಾಸು ಇದ್ದವರು ಹೊಸ ಶ್ರಾವಣಿ ಸುಬ್ರಮಣ್ಯ ಜೋಡಿಯಾಗಲು ಅರ್ಜಿ ಸಲ್ಲಿಸಬಹುದು. ಎಲ್ಲಾ ಅಂದುಕೊಂಡಂತೆ ನಡೆದರೆ ಹೊಸ ವರ್ಷದಲ್ಲಿ ಹೊಸ ಶ್ರಾವಣಿ ಸುಬ್ರಮಣ್ಯ ಲವ್ ಕಹಾನಿ ಶುರುವಾಗಲಿದೆ. ಉಳಿದ ಪಾತ್ರವರ್ಗ ಹಾಗೂ ತಾಂತ್ರಿಕ ವರ್ಗದ ಕುರಿತು ಸದ್ಯದಲ್ಲೇ ಮಾಹಿತಿ ಹಂಚಿಕೊಳ್ಳಲಿದೆ ಚಿತ್ರತಂಡ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News