Kabzaa Hindi teaser : ಕಬ್ಜದ ಹಿಂದಿ ಟೀಸರ್ ಇಂದು ರಿಲೀಸ್‌ ಆಗಿದೆ. ಈ ಸಿನಿಮಾದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಶ್ರಿಯಾ ಶರಣ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಕಬ್ಜ ಸಿನಿಮಾ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರ ಡಿಸೆಂಬರ್ 25 ರಂದು ಚಿತ್ರಮಂದಿರಗಳಿಗೆ ಬರಲಿದೆ. ನಿರ್ಮಾಪಕ ಆನಂದ್ ಪಂಡಿತ್ ಅವರು ಕಬ್ಜ ಚಿತ್ರದ ಹಿಂದಿ ಟೀಸರ್ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. "ಫಸ್ಟ್ ಲುಕ್ ಎಲ್ಲವನ್ನೂ ಹೇಳುತ್ತದೆ! #Kabzaa ಟೀಸರ್ ಈಗ ಹೊರಬಂದಿದೆ. ಶೀಘ್ರದಲ್ಲೇ ಭಾರತೀಯ ಚಿತ್ರಮಂದಿರಗಳಲ್ಲಿ ಬರಲಿದೆ" ಎಂದು ಬರೆದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಡಿ. 11ಕ್ಕೆ ಯಂಗ್‌ ರೆಬಲ್‌ ಸ್ಟಾರ್‌ ಎಂಗೇಜ್‌ಮೆಂಟ್‌! ಇವರೇ ನೋಡಿ ಅಂಬಿ ಸೊಸೆ!


ಕಬ್ಜ ಸಿನಿಮಾದ ಕತೆ ಬ್ರಿಟಿಷರಿಂದ ಕೊಲ್ಲಲ್ಪಟ್ಟ ವೀರ ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರನ ಸುತ್ತ ಸುತ್ತುತ್ತದೆ. ಪ್ರತಿಕೂಲ ಪರಿಸ್ಥಿತಿಗಳಿಂದಾಗಿ, ಅವರ ಮಗ ಅರ್ಕೇಶ್ವರ 1960-1984 ರ ಅವಧಿಯಲ್ಲಿ ಭಾರತದಲ್ಲಿ ಭೂಗತ ಜಗತ್ತಿನ ರಾಜನಾದನು. ಚಿತ್ರದ ನಟ ಉಪೇಂದ್ರ, ಬಾಲಿವುಡ್ ನ ಹೆಸರಾಂತ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಮೂಲಕ ಭೂಗತ ಜಗತ್ತಿನ ಹೊಸ ಅಧ್ಯಾಯ ಕಬ್ಜ ಹಿಂದಿಯಲ್ಲಿ ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ. ನಿಮ್ಮೆಲ್ಲರ ಸಹಕಾರ ಹೀಗೆಯೇ ಇರಲಿ ಎಂದಿದ್ದಾರೆ.


 


KGF Actor: ಕೆಜಿಎಫ್ ತಾತ ಆಸ್ಪತ್ರೆಗೆ ದಾಖಲು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.