KGF Actor: ಕೆಜಿಎಫ್ ತಾತ ಆಸ್ಪತ್ರೆಗೆ ದಾಖಲು!

KGF Actor Krishna G Rao : ಕೆಜಿಎಫ್ ತಾತ ಎಂದೇ ಫೇಮಸ್ ಆಗಿರುವ ಹಿರಿಯ ನಟ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೃಷ್ಣ ಜಿ ರಾವ್ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃಷ್ಣ ಜಿ ರಾವ್ ಅವರು ಕೆಜಿಎಫ್ ಮತ್ತು ಕೆಜಿಎಫ್ ಚಾಪ್ಟರ್‌ 2 ಎರಡೂ ಸಿನಿಮಾಗಳಲ್ಲಿಯೂ ನಟಿಸಿದ್ದರು. 

Written by - Chetana Devarmani | Last Updated : Dec 1, 2022, 01:24 PM IST
  • ಕೆಜಿಎಫ್ ತಾತ ಎಂದೇ ಫೇಮಸ್ ಆಗಿರುವ ಹಿರಿಯ ನಟ
  • ಕೆಜಿಎಫ್ ತಾತ ಆಸ್ಪತ್ರೆಗೆ ದಾಖಲಾದ ಕೃಷ್ಣ ಜಿ ರಾವ್
  • ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ
KGF Actor: ಕೆಜಿಎಫ್ ತಾತ ಆಸ್ಪತ್ರೆಗೆ ದಾಖಲು!  title=
ಕೃಷ್ಣ ಜಿ ರಾವ್

KGF Actor Krishna G Rao hospitalized : ಕೆಜಿಎಫ್ ತಾತ ಎಂದೇ ಫೇಮಸ್ ಆಗಿರುವ ಹಿರಿಯ ನಟ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೃಷ್ಣ ಜಿ ರಾವ್ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃಷ್ಣ ಜಿ ರಾವ್ ಅವರು ಕೆಜಿಎಫ್ ಮತ್ತು ಕೆಜಿಎಫ್ ಚಾಪ್ಟರ್‌ 2 ಎರಡೂ ಸಿನಿಮಾಗಳಲ್ಲಿಯೂ ನಟಿಸಿದ್ದರು. ಅಲ್ಲದೇ ಸಿನಿಮಾದಲ್ಲಿನ ತಮ್ಮ ಪಾತ್ರದ ಮೂಲಕ ಖ್ಯಾತಿ ಕೂಡ ಪಡೆದಿದ್ದರು. ಯಶ್ ಜೊತೆ ನಟಿಸಿ ಜನರ ಮನಗೆದ್ದಿದ್ದ ಕೃಷ್ಣ ಜಿ ರಾವ್ ಅವರನ್ನು ಬೆಂಗಳೂರಿನ ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : "ಬೇರೆ ಯಾರೋ ನಮ್ಮ ಮದುವೆ ಡೇಟ್​ ಹೇಳುವ ಮುನ್ನ.." ಪ್ರಭಾಸ್​ ಜತೆಗಿನ ಲವ್ ಬಗ್ಗೆ ಕೃತಿ ಹೀಗಂದ್ರು

ಇವರು ತುಮಕೂರಿನ ಪಾವಗಡ ಮೂಲದವರು. ಕೃಷ್ಣ ಜಿ ರಾವ್ ಅವರು ಸಂಬಂಧಿಕರ ಮನೆಗೆ ಹೋಗಿದ್ದರು. ಈ ವೇಳೆ ಆಯಾಸಗೊಂಡು, ಆರೋಗ್ಯ ಸ್ಥಿತಿ ಹದಗೆಟ್ಟಿತ್ತು ಈ ಹಿನ್ನೆಲೆ ಮಧ್ಯರಾತ್ರಿ ಆಸ್ಪತ್ರೆಗೆ ‌ದಾಖಲು ಮಾಡಲಾಗಿದೆ. ಸದ್ಯ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಯಾಂಡಲ್​​ವುಡ್ ನಟ ಕೃಷ್ಣ ಜಿ ರಾವ್ ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. 

ನ್ಯಾನೋ ನಾರಾಯಣಪ್ಪ ಸಿನಿಮಾದಲ್ಲಿಯೂ ಅಭಿನಯಿಸಿದ್ದ ಕೃಷ್ಣ ಜಿ ರಾವ್ ಅವರು ಕೆಜಿಎಫ್ ಪಾತ್ರದ ಮೂಲಕ ಪ್ರಸಿದ್ಧರಾದರು. ಇದಲ್ಲದೇ ಕೆಮಿಸ್ಟ್ರಿ ಆಫ್ ಕರಿಯಪ್ಪ, ಕ್ರಿಟಿಕಲ್ ಕೀರ್ತನೆಗಳು ಸಿನಿಮಾಗಳಲ್ಲಿಯೂ ಕೃಷ್ಣ ಜಿ ರಾವ್ ಕೆಲಸ ಮಾಡಿದ್ದಾರೆ. 

ಇದನ್ನೂ ಓದಿ : Abishek Ambareesh : ಡಿ. 11ಕ್ಕೆ ಯಂಗ್‌ ರೆಬಲ್‌ ಸ್ಟಾರ್‌ ಎಂಗೇಜ್‌ಮೆಂಟ್‌! ಇವರೇ ನೋಡಿ ಅಂಬಿ ಸೊಸೆ!

ಕೆಜಿಎಫ್ ಸಿನಿಮಾದಲ್ಲಿ ಕುರುಡು ಮುದುಕನ ಪಾತ್ರಕ್ಕೆ ಜೀವ ತುಂಬಿ, ಜನಪ್ರಿಯರಾಗಿದ್ದರು ನಟ ಕೃಷ್ಣ ಜಿ ರಾವ್. ಕೆಜಿಎಫ್‌ನ ಈ ಪಾತ್ರವು ಕೃಷ್ಣ ಜಿ ರಾವ್ ಅವರ ವೃತ್ತಿ ಜೀವನಕ್ಕೆ ಮಹತ್ವದ ತಿರುವು ನೀಡಿದೆ. 2018 ರಲ್ಲಿ ಕೆಜಿಎಫ್ ಚಾಪ್ಟರ್‌ 1 ಬಿಡುಗಡೆಯಾದ ನಂತರ, ಅವರು 30 ಚಿತ್ರಗಳಲ್ಲಿ ಕಾಣಿಸಿಕೊಂಡರು. ಕೆಜಿಎಫ್ ಚಾಪ್ಟರ್‌ 2 ನಂತರ ಅವರು ಸುಮಾರು 15 ಚಿತ್ರಗಳಲ್ಲಿ ನಟಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News