ಬಾಲಿವುಡ್ ತಾರೆ ಕಾಜೋಲ್, ದಕ್ಷಿಣ ಭಾರತದ ನಟ-ನಿರ್ಮಾಪಕ ಸೂರ್ಯ ಮತ್ತು ಚಲನಚಿತ್ರ ನಿರ್ಮಾಪಕಿ-ಲೇಖಕಿ ರೀಮಾ ಕಾಗ್ತಿ ಸೇರಿದಂತೆ 397 ಕಲಾವಿದರು ಮತ್ತು ಕಾರ್ಯನಿರ್ವಾಹಕರು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸಸ್‌ನ ಸದಸ್ಯರಾಗಿ ಸೇರಲು ಆಹ್ವಾನವನ್ನು ಸ್ವೀಕರಿಸಿದ್ದಾರೆ. ಹೊಸ ಸದಸ್ಯರ ಪಟ್ಟಿಯನ್ನು ಅಕಾಡೆಮಿ ಮಂಗಳವಾರ ಪ್ರಕಟಿಸಿದೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸಸ್ ವಾರ್ಷಿಕವಾಗಿ ಆಸ್ಕರ್ ಪ್ರಶಸ್ತಿಗಳನ್ನು ಆಯೋಜಿಸುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: SHOCKING: ಸಲ್ಮಾನ್ ಖಾನ್ ಬಳಿಕ ಸ್ವರಾ ಭಾಸ್ಕರ್‌ಗೆ ಜೀವ ಬೆದರಿಕೆ


ಈ ವರ್ಷ ಆಹ್ವಾನವನ್ನು ಸ್ವೀಕರಿಸಿದ ಇತರ ಭಾರತೀಯರಲ್ಲಿ ಸಾಕ್ಷ್ಯಚಿತ್ರ ನಿರ್ಮಾಪಕರಾದ ಸುಶ್ಮಿತ್ ಘೋಷ್ ಮತ್ತು ರಿಂಟು ಥಾಮಸ್ ಸೇರಿದ್ದಾರೆ. ಅವರ ಚಿತ್ರ 'ರೈಟಿಂಗ್ ವಿತ್ ಫೈರ್' ಈ ವರ್ಷದ ಆರಂಭದಲ್ಲಿ ಆಸ್ಕರ್‌ಗೆ ನಾಮನಿರ್ದೇಶನಗೊಂಡಿತು. 'ಡೆಡ್‌ಪೂಲ್' ನಿರ್ಮಾಪಕ ಆದಿತ್ಯ ಸೂದ್ ಮತ್ತು PR ಮತ್ತು ಮಾರ್ಕೆಟಿಂಗ್ ವೃತ್ತಿಪರ ಸೋಹಿನಿ ಸೇನ್‌ಗುಪ್ತಾ ಅಕಾಡೆಮಿಯಿಂದ ಆಹ್ವಾನವನ್ನು ಸ್ವೀಕರಿಸಿದ ಇತರ ಇಬ್ಬರು ಭಾರತೀಯರು. ಸಂಪೂರ್ಣ ಪಟ್ಟಿಯು ಅರಿಯಾನಾ ಡಿಬೋಸ್, ಬಿಲ್ಲಿ ಎಲಿಶ್, ಜೇಮೀ ಡೋರ್ನಾನ್ ಮತ್ತು ಟ್ರಾಯ್ ಕೋಟ್ಸುರ್ ಅವರಂತಹ ನಟರನ್ನು ಸಹ ಒಳಗೊಂಡಿದೆ.


ಆಸ್ಕರ್‌ ಒಟ್ಟು 397 ಆಯ್ಕೆ ಸಮಿತಿ ಸದಸ್ಯರ ತಂಡ ಮಾಡುತ್ತಿದ್ದು, ಇದರಲ್ಲಿ ಭಾರತದ ಆರು ಮಂದಿಗೆ ಆಹ್ವಾನ ನೀಡಿದೆ. ಭಾರತದ ನಟ ಸೂರ್ಯ ಹಾಗೂ ನಟಿ ಕಾಜಲ್ ಸೇರಿ, 397 ಸದಸ್ಯರಲ್ಲಿ 53 ಮಂದಿ ಮಾತ್ರವೇ ಅಮೆರಿಕದ ಹೊರಗಿನವರಾಗಿದ್ದಾರೆ. ಈ ಬಾರಿಯ ಮತ್ತೊಂದು ವಿಶೇಷವೆಂದರೆ 71 ಮಂದಿ ಆಸ್ಕರ್ ಪ್ರಶಸ್ತಿಗೆ ಒಂದಲ್ಲ ಒಂದು ವಿಭಾಗದಲ್ಲಿ ನಾಮನಿರ್ದೇಶನವಾದವರೇ ಆಸ್ಕರ್‌ ಸಮಿತಿಯಲ್ಲೂ ಇದ್ದಾರೆ. 15 ಮಂದಿ ಆಸ್ಕರ್ ವಿಜೇತರು ಈ ಬಾರಿಯ ಸಮಿತಿಯಲ್ಲಿದ್ದಾರೆ. 44% ಮಹಿಳೆಯರು, 37% ನಿರ್ಲಕ್ಷಿತ ಸಮುದಾಯಕ್ಕೆ ಸೇರಿದವರು ಸಮಿತಿಯಲ್ಲಿದ್ದಾರೆ.  


ಅಕಾಡೆಮಿಗೆ ಸೇರಲು ಆಹ್ವಾನದ ಅರ್ಥವೇನು?


ಪ್ರತಿ ವರ್ಷ, ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸಸ್ ಪ್ರಪಂಚದಾದ್ಯಂತದ ಕಲಾವಿದರು ಮತ್ತು ಕಾರ್ಯನಿರ್ವಾಹಕರನ್ನು ಚಲನಚಿತ್ರ ಸಂಸ್ಥೆಯ ಭಾಗವಾಗಿ ಸದಸ್ಯರನ್ನಾಗಿ ಆಹ್ವಾನಿಸುತ್ತದೆ. ಒಮ್ಮೆ ಸೇರ್ಪಡೆಗೊಂಡ ನಂತರ, ಸದಸ್ಯರು ವಾರ್ಷಿಕವಾಗಿ ಲಾಸ್ ಏಂಜಲೀಸ್‌ನಲ್ಲಿ ನಡೆಯುವ ಆಸ್ಕರ್ ಪ್ರಶಸ್ತಿಗಳಿಗೆ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಸದಸ್ಯತ್ವವು ಕೇವಲ ಗೌರವದ ವಿಷಯವಲ್ಲ ಆದರೆ ಅನೇಕರು ಅದನ್ನು ಪ್ರಾತಿನಿಧ್ಯದ ರೂಪವಾಗಿ ನೋಡುತ್ತಾರೆ.


ಇದನ್ನೂ ಓದಿ: Sudeep in DKD: ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ನಲ್ಲಿ ಕಿಚ್ಚ ಸುದೀಪ್‌! ಈ ದಿನದಂದು ಪ್ರಸಾರವಾಗಲಿದೆ ಶೋ


ಏಕ್ತಾ ಕಪೂರ್, ಮಾಧುರಿ ದೀಕ್ಷಿತ್, ಅಮಿತಾಬ್‌ ಬಚ್ಚನ್, ಪ್ರಿಯಾಂಕಾ ಚೋಪ್ರಾ, ಶಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್, ವಿದ್ಯಾ ಬಾಲನ್, ಅಲಿ ಫಜಲ್, ಎ.ಆರ್.ರೆಹಮಾನ್ ಅವರಂತಹ ಹಲವಾರು ಭಾರತೀಯ ನಟರು ಮತ್ತು ತಂತ್ರಜ್ಞರು ಈಗಾಗಲೇ ಅಕಾಡೆಮಿಯ ಭಾಗವಾಗಿದ್ದಾರೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.