Kamal Haasan on The Kerala Story : 'ದಿ ಕೇರಳ ಸ್ಟೋರಿ' ಚಿತ್ರದ ನಿಷೇಧದ ಸುತ್ತ ವಿವಾದಗಳು ಹೆಚ್ಚಾಗುತ್ತಿವೆ. ಕೆಲವು ಪ್ರೇಕ್ಷಕರು ಈ ಕಥೆಯನ್ನು ಮೆಚ್ಚಿಕೊಂಡಿದ್ದರೆ ಇನ್ನ ಕೆಲವುರು ಇದು ಸುಳ್ಳು ಅಂತ ವಾದಿಸುತ್ತಿದ್ದಾರೆ. ಅಲ್ಲದೆ, 'ನೈಜಕಥೆ' ಎಂದು ಹೇಳಲಾಗುತ್ತಿರುವ ನಡುವೆ, ಭಾರತೀಯ ರಾಜಕೀಯ ನಾಯಕರು ಮತ್ತು ಚಿತ್ರರಂಗದ ಕೆಲವರು ನಟರು, ಇದನ್ನು ಅಲ್ಲಗಳೆದಿದ್ದಾರೆ. ಇದೀಗ ಈ ಸಾಲಿನಲ್ಲಿ ತಮಿಳು ಖ್ಯಾತ ನಟ ಕಮಲ್‌ ಹಾಸನ್‌ ಕೂಡ ಸೇರಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ʼದಿ ಕೇರಳ ಸ್ಟೋರಿʼ ಸಿನಿಮಾದ ಕುರಿತು ಬಾಲಿವುಡ್‌ ನಟಿ ಕಂಗನಾ ರಣಾವತ್, ಅನುರಾಗ್ ಕಶ್ಯಪ್, ಸುಧೀರ್ ಮಿಶ್ರಾ ಸೇರಿದಂತೆ ಹಲವರು ಪ್ರತಿಕ್ರಿಯೆ ನೀಡಿದ್ದರು. ಇದೀಗ ಹಿರಿಯ ನಟ-ರಾಜಕಾರಣಿ ಕಮಲ್ ಹಾಸನ್ ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡುವಾಗ ಕಮಲ್ ಹಾಸನ್, ನಾನು ನಿಮಗೆ ಹೇಳಿದ್ದೇನೆ, ಇಂತಹ ಪ್ರಚಾರದ ಚಲನಚಿತ್ರಗಳನ್ನು ನಾನು ವಿರೋಧಿಸುತ್ತೇನೆ ಎಂದು. 'ನಿಜವಾದ ಕಥೆ' ಅಂತ ಕೇವಲ ಕೆಳಭಾಗದಲ್ಲಿ ಬರೆದರೆ ಸಾಕಾಗುವುದಿಲ್ಲ. ಅದು ನಿಜವಾಗಿಯೂ ನಿಜವಾಗಿರಬೇಕು ಆದ್ರೆ, ಇದು ನಿಜವಲ್ಲ ಅಂತ ಹೇಳಿದರು.


Salman Khan: ನೀವು ನನ್ನ ಮದುವೆಯಾಗ್ತೀರಾ? ಹಾಲಿವುಡ್‌ ನಟಿಯ ಪ್ರಶ್ನೆಗೆ 'ಭಾಯಿಜಾನ್' ಹೇಳಿದ್ದೇನು!


ಈ ಹಿಂದೆ ಕಂಗನಾ ರಣಾವತ್, ಸುಧೀರ್ ಮಿಶ್ರಾ ಮತ್ತು ಅನುರಾಗ್ ಕಶ್ಯಪ್ ಅವರು 'ದಿ ಕೇರಳ ಸ್ಟೋರಿ' ಸುತ್ತಲಿನ ನಿಷೇಧದ ಬಗ್ಗೆ ಮಾತನಾಡಿದರು. ಚಲನಚಿತ್ರವನ್ನು ನಿಷೇಧಿಸಬಾರದು ಎಂಬುದರ ಕುರಿತು ಮಾತನಾಡಿದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಂದು ನಿರ್ದಿಷ್ಟ ರೀತಿಯಲ್ಲಿ ಸಮುದಾಯವನ್ನು ಪ್ರತಿನಿಧಿಸುವ ಬೆಳಕಿನಲ್ಲಿ 'ದಿ ಕೇರಳ ಸ್ಟೋರಿ' ಅನ್ನು ರಾಜ್ಯದಲ್ಲಿ ನಿಷೇಧಿಸಿದರು. ಕೇರಳದಲ್ಲೂ ಸಹ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ.


ಆದರೆ ಚಿತ್ರದ ತಯಾರಕರು ಕೇರಳದಲ್ಲಿ ಸುಮಾರು 30,000 ಹುಡುಗಿಯರು ಬಲವಂತದ ಮತಾಂತರಕ್ಕೆ ಒಳಗಾಗಿದ್ದಾರೆ ಮತ್ತು ಕಾಣೆಯಾಗಿದ್ದಾರೆ ಎಂದು ತಯಾರಕರು ಹೇಳಿದ್ದಾರೆ, ಆದರೆ ಅನಧಿಕೃತ ಸಂಖ್ಯೆ ಸುಮಾರು 50,000 ಆಗಿದೆ ತಿಳಿಸಿದ್ದಾರೆ. ಇತ್ತೀಚಿಗೆ ದಿ ಕೇರಳ ಸ್ಟೋರಿ ಚಿತ್ರತಂಡ ಸುದ್ದಿಗೊಷ್ಠಿ ನಡೆಸಿ ಮತಾಂತರಗೊಂಡಿದ್ದ ಯುವತಿಯರನ್ನು ವೇದಿಕೆ ಮುಂದೆ ತಂದಿದ್ದರು. ದಿ ಕೇರಳ ಸ್ಟೋರಿಯಲ್ಲಿ ಆದಾ ಶರ್ಮಾ ನಟಿಸಿದ್ದು, ಸುದಿಪ್ತೋ ಸೇನ್ ನಿರ್ದೇಶನ ಈ ಚಿತ್ರಕ್ಕಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ