Salman Khan: ನೀವು ನನ್ನ ಮದುವೆಯಾಗ್ತೀರಾ? ಹಾಲಿವುಡ್‌ ನಟಿಯ ಪ್ರಶ್ನೆಗೆ 'ಭಾಯಿಜಾನ್' ಹೇಳಿದ್ದೇನು!

Salman Khan Marriage: IIFA 2023 ರ ಗ್ರೀನ್ ಕಾರ್ಪೆಟ್ ಈವೆಂಟ್ ಸಮಯದಲ್ಲಿ, ಹಾಲಿವುಡ್‌ನ ನಟಿಯೊಬ್ಬಳು ಸಲ್ಮಾನ್ ಖಾನ್ ಅವರನ್ನು ಮದುವೆಗೆ ಪ್ರಸ್ತಾಪಿಸಿದರು. ಸಲ್ಮಾನ್ ಖಾನ್ ತಮ್ಮದೇ ಶೈಲಿಯಲ್ಲಿ ನಟಿಯನ್ನು ನಿರಾಕರಿಸಿದರು.

Written by - Chetana Devarmani | Last Updated : May 27, 2023, 02:02 PM IST
  • IIFA 2023 ರ ಗ್ರೀನ್ ಕಾರ್ಪೆಟ್ ಈವೆಂಟ್
  • ನೀನು ನನ್ನ ಮದುವೆಯಾಗ್ತೀಯಾ?
  • ಹಾಲಿವುಡ್‌ ನಟಿಯ ಪ್ರಶ್ನೆಗೆ 'ಭಾಯಿಜಾನ್' ಹೇಳಿದ್ದೇನು!
Salman Khan: ನೀವು ನನ್ನ ಮದುವೆಯಾಗ್ತೀರಾ? ಹಾಲಿವುಡ್‌ ನಟಿಯ ಪ್ರಶ್ನೆಗೆ 'ಭಾಯಿಜಾನ್' ಹೇಳಿದ್ದೇನು!  title=
Salman Khan

Salman Khan Gets Marriage Proposal: IIFA 2023 ರ ಗ್ರೀನ್ ಕಾರ್ಪೆಟ್ ಈವೆಂಟ್‌ನಲ್ಲಿ ಸಲ್ಮಾನ್ ಖಾನ್ ಅವರನ್ನು ಹಾಲಿವುಡ್‌ನ ಮಹಿಳೆಯೊಬ್ಬರು ಸಾರ್ವಜನಿಕವಾಗಿ ಪ್ರಸ್ತಾಪಿಸಿದರು. ಸಲ್ಮಾನ್ ಖಾನ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಮಧ್ಯೆ ಬಂದು ನಟ ಸಲ್ಮಾನ್ ಖಾನ್, ನೀವು ನನ್ನನ್ನು ಮದುವೆಯಾಗುತ್ತೀರಾ? ಎಂದು ಕೇಳಿದರು. ಈ ಪ್ರಸ್ತಾಪಕ್ಕೆ ಪ್ರತಿಕ್ರಿಯೆಯಾಗಿ, ಸಲ್ಮಾನ್ ಖಾನ್ ಕೂಡ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದರು. "ನನ್ನ ಮದುವೆಯ ದಿನಗಳು ಕಳೆದುಹೋಗಿವೆ. ನೀವು ನನ್ನನ್ನು 20 ವರ್ಷಗಳ ಹಿಂದೆ ಭೇಟಿಯಾಗಬೇಕಿತ್ತು" ಎಂದು ಸಲ್ಮಾನ್ ಖಾನ್ ನೀಡಿದ್ದಾರೆ. ಈ ವಿಡಿಯೋ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: WATCH: IIFA ನಲ್ಲಿ ವಿಕ್ಕಿ ಕೌಶಲ್‌ನ್ನು ದೂರ ತಳ್ಳಿದ ಸಲ್ಮಾನ್ ಖಾನ್ ಬಾಡಿಗಾರ್ಡ್‌, ವಿಡಿಯೋ ವೈರಲ್‌ 

ಬಾಲಿವುಡ್ ಮೆಗಾಸ್ಟಾರ್ ಸಲ್ಮಾನ್ ಖಾನ್ ತಮ್ಮ ಸ್ಟೈಲ್‌ ಮತ್ತು ವೈಯಕ್ತಿಕ ಜೀವನಕ್ಕಾಗಿ ಆಗಾಗ್ಗೆ ಮುಖ್ಯಾಂಶಗಳಲ್ಲಿ ಇರುತ್ತಾರೆ. ಸದ್ಯ ಬಾಲಿವುಡ್‌ನ ಮೋಸ್ಟ್‌ ಎಲಿಜೆಬಲ್‌ ಬ್ಯಾಚುಲರ್‌ಗಳಲ್ಲಿ ಸಲ್ಮಾನ್ ಖಾನ್ ಒಬ್ಬರು. ಇವರು ಆಗಾಗ ಅನೇಕರಿಂದ ಮದುವೆಗೆ ಪ್ರಸ್ತಾಪಗಳನ್ನು ಪಡೆಯುತ್ತಾರೆ. IIFA 2023 ರ ಪ್ರೀಈವೆಂಟ್‌ನಲ್ಲಿ ಮತ್ತೊಮ್ಮೆ ಮದುವೆಗೆ ಪ್ರಪೋಸಲ್‌ ಪಡೆದಿದ್ದಾರೆ. IIFA 2023 ಗ್ರೀನ್ ಕಾರ್ಪೆಟ್ ಈವೆಂಟ್‌ನ ಸಲ್ಮಾನ್ ಖಾನ್ ಅವರ ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ನಟನನ್ನು ಅಭಿಮಾನಿಗಳು ಮತ್ತು ಮಾಧ್ಯಮಗಳು ಸುತ್ತುವರೆದಿದ್ದರು. ಆಗ ಮಹಿಳೆಯ ಧ್ವನಿ ಕೇಳಿತು. ಸಲ್ಮಾನ್ ನಾನು ಹಾಲಿವುಡ್‌ನಿಂದ ಈ ಪ್ರಶ್ನೆಯನ್ನು ಕೇಳಲು ಬಂದಿದ್ದೇನೆ, ನಾನು ನಿಮ್ಮನ್ನು ನೋಡಿದಾಗಿನಿಂದ ನಿಮ್ಮನ್ನು ಪ್ರೀತಿಸುತ್ತಿದ್ದೇನೆ. ಮಹಿಳಾ ಅಭಿಮಾನಿಯ ಪ್ರಶ್ನೆಗೆ ಸಲ್ಮಾನ್ ಉತ್ತರಿಸಿ, "ನೀವು ಶಾರುಖ್ ಖಾನ್ ಬಗ್ಗೆ ಮಾತನಾಡುತ್ತಿದ್ದೀರಿ, ಅಲ್ಲವೇ?" ಎಂದರು. 

 

 

ಆಗ ಆ ನಟಿ, ನಾನು ಸಲ್ಮಾನ್ ಖಾನ್ ಬಗ್ಗೆ ಮಾತನಾಡುತ್ತಿದ್ದೇನೆ, ನೀವು ನನ್ನನ್ನು ಮದುವೆಯಾಗುತ್ತೀರಾ? ಎಂದು ಹೇಳಿದರು. ಇನ್ನು ಸಲ್ಮಾನ್ ತಮ್ಮ ದಬಾಂಗ್ ಸ್ಟೈಲ್ ನಲ್ಲಿ "ನನ್ನ ಮದುವೆಯ ದಿನ ಕಳೆದು ಹೋಗಿದೆ. 20 ವರ್ಷಗಳ ಹಿಂದೆ ನೀನು ನನ್ನನ್ನು ಭೇಟಿಯಾಗಬೇಕಿತ್ತು" ಎಂದು ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೇಗವಾಗಿ ಹರಿದಾಡುತ್ತಿದೆ. 

ಇದನ್ನೂ ಓದಿ: ಸಾರಾ ಅಲಿ ಖಾನ್​ ​- ಶುಭ್​ಮನ್ ಗಿಲ್​ ಬ್ರೇಕಪ್‌? ಸಂಬಂಧ ಮುರಿದುಬಿದ್ದಿರುವುದಕ್ಕೆ ಇಲ್ಲಿದೆ ಸಾಕ್ಷಿ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News