ಹೊಂಬಾಳೆ ಸಂಸ್ಥೆಯಿಂದ ಗುಡ್‌ನ್ಯೂಸ್‌; ರಿಲೀಸ್‌ಗೆ ಸಜ್ಜಾಗಿದೆ ಮತ್ತೊಂದು ಸಿನಿಮಾ.!

Hombale Films :  ಹೊಂಬಾಳೆ ಸಂಸ್ಥೆ ದಕ್ಷಣ ಭಾರತದ ಎಲ್ಲಾ ಭಾಷೆಗಳಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ. ಶೀಘ್ರದಲ್ಲಿಯೇ ಬಾಲಿವುಡ್‌ ಸಿನಿಮಾಗಳನ್ನು ನಿರ್ದೇಶಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ. ಇದೀಗ ಇದೇ ಸಂಸ್ಥೆಯ ಮತ್ತಂದು ಸಿನಿಮಾ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಸಿನಿಮಾ ಕೆಲವೇ ದಿನಗಳಲ್ಲಿ ತೆರೆಮೇಲೆ ಬರಲಿದೆ.   

Written by - Zee Kannada News Desk | Last Updated : May 27, 2023, 01:46 PM IST
  • ದೊಡ್ಡ ದೊಡ್ಡ ಸಿನಿಮಾಗಳನ್ನು ಕೈಗೆತ್ತಿಕೊಂಡ ಹೊಂಬಾಳೆ ಸಿನಿಮಾ
  • ಭಾರತೀಯ ಚಿತ್ರರಂಗದಲ್ಲಿಯೆ ಬಹಳ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ ಎನಿಸಿಕೊಂಡಿರುವ ಹೊಂಬಾಳೆ ಸಂಸ್ಥೆ,
  • ತಮಿಳಿನ ʼರಘುತಾತʼ ಎನ್ನುವ ಸಿನಿಮಾವನ್ನು ತನ್ನ ನಿರ್ದೇಶನದಡಿಯಲ್ಲಿ ಶೂಟಿಂಗ್‌ನ್ನು ಆರಂಭಮಾಡಿತ್ತು.
ಹೊಂಬಾಳೆ ಸಂಸ್ಥೆಯಿಂದ ಗುಡ್‌ನ್ಯೂಸ್‌; ರಿಲೀಸ್‌ಗೆ ಸಜ್ಜಾಗಿದೆ ಮತ್ತೊಂದು ಸಿನಿಮಾ.!  title=

Raghuthatha : ತೆಲುಗಿನಲ್ಲಿ ಸಲಾರ್‌ ಮಲಯಾಳಂನಲ್ಲಿ ಟೈನಸ್‌ ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳನ್ನು ಕೈಗೆತ್ತಿಕೊಂಡ ಹೊಂಬಾಳೆ ಸಿನಿಮಾ ಕನ್ನಡದಲ್ಲಿ ಕಾಂತಾರ-2, ರಿಚರ್ಡ್‌ ಆಂಟನಿ, ಯುವ, ಧೂಮಂ, ಬಘೀರ, ಸೇರಿದಂತೆ ಹಲವಾರು ಸಿನಿಮಾಗಳ ಚಿತ್ರೀಕರಣ ಆರಂಭವಾಗಿದ್ದು, ಕೆಲವು ಸಿನಿಮಾಗಳು ಮಾತುಕತೆ ಹಂತದಲ್ಲಿವೆ. ಮುಂದೆ ಕನ್ನಡದ ಸ್ಟಾರ್‌ ನಟರಾದ ಶಿವರಾಜ್‌ ಕುಮಾರ್‌ ಹಾಗೂ ಕಿಚ್ಚ ಸುದೀಪ್‌ ಕಾಂಬಿನೇಷನ್‌ನಲ್ಲಿಯೂ ಸಿನಿಮಾಗಳು ಮೂಡಿಬರಲಲಿವೆ. 

ಭಾರತೀಯ ಚಿತ್ರರಂಗದಲ್ಲಿಯೆ ಬಹಳ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ ಎನಿಸಿಕೊಂಡಿರುವ ಹೊಂಬಾಳೆ ಸಂಸ್ಥೆ, ದೊಡ್ಡ ದೊಡ್ಡ ಸಿನಿಮಾಗಳ ನಡುವೆ ಕೆಲ ದಿನಗಳ ಹಿಂದೆ ಒಂದು ಮಹಿಳಾ ಪ್ರಧಾನ ಸಿನಿಮಾವೊಂದನ್ನು ಕೈಗೆತ್ತಿಕೊಂಡಿತ್ತು. ತಮಿಳಿನ ʼರಘುತಾತʼ ಎನ್ನುವ ಸಿನಿಮಾವನ್ನು ತನ್ನ ನಿರ್ದೇಶನದಡಿಯಲ್ಲಿ ಶೂಟಿಂಗ್‌ನ್ನು ಆರಂಭಮಾಡಿತ್ತು.  

ಇದನ್ನೂ ಓದಿ-ಶೂಟಿಂಗ್‌ ಸೆಟ್‌ನಲ್ಲಿ ನಟ ಬಾಲಯ್ಯ ಕನ್ನಡತಿ ಶ್ರೀಲೀಲಾ ಕೆನ್ನೆಗೆ ಬಾರಿಸಿದ್ದೇಕೆ?

ಈ ʼರಘುತಾತʼ ಸಿನಿಮಾದಲ್ಲಿ ಸೌತ್‌ ಹಿರೋಯಿನ್‌ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್‌ ನಾಯಕಿಯಾಗಿ ನಟಿಸಿದ್ದಾರೆ. ಸದ್ದಿಲ್ಲದೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಶೂಟಿಂಗ್‌ ಕೊನೆಯದಿನ ಸೆಟ್‌ನಲ್ಲಿ ಕೇಕ್‌ ಕತ್ತರಿಸಿ ಚಿತ್ರತಂಡ ಸಂಭ್ರಮ ಆಚರಿಸಿದೆ. ಅದೇ ಪೋಟೋಗಳನ್ನು ಹೊಂಬಾಳೆ ಸಂಸ್ಥೆ ಹಂಚಿಕೊಂಡಿದ್ದು, ಸಿನಿಮಾ ಯಾವಾಗ ತೆರೆ ಮೇಲೆ ಬರಲಿದೆ ಎನ್ನುವುದೇ ಎಲ್ಲರ ಕುತೂಹಲ. 

ಈ ʼರಘುತಾತʼ ಸಿನಿಮಾಗೆ ಸುಮನ್‌ ಕುಮಾರ್‌ ಆಕ್ಷನ್‌ ಕಟ್‌ ಹೇಳಿದ್ದು, ಕೀರ್ತಿ ಜೊತೆಗೆ ಎಂ. ಎಸ್.‌ ಭಾಸ್ಕರ್‌, ದೇವದರ್ಶಿನಿ, ಆನಂದಸಾಮಿ ಮತ್ತು ರಾಜೇಶ್‌ ಬಾಲಕೃಷ್ಣನ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಯಾಮಿನಿ ಯಜ್ಞಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್‌ ಪ್ರೊಡಕ್ಷನ್‌ ಮುಗಿಸಿ ತೆರೆ ಮೇಲೆ ಬರಲಿದೆ. 

ಇದನ್ನೂ ಓದಿ-Shubman Gill - Sara Ali Khan: ಸಾರಾ ಅಲಿ ಖಾನ್​ ​- ಶುಭ್​ಮನ್ ಗಿಲ್​ ಬ್ರೇಕಪ್‌? ಸಂಬಂಧ ಮುರಿದುಬಿದ್ದಿರುವುದಕ್ಕೆ ಇಲ್ಲಿದೆ ಸಾಕ್ಷಿ!!

Trending News