ಪ್ರತಿದಿನವೂ ನನ್ನ ವಿರುದ್ಧ 200 FIR ದಾಖಲಾಗುತ್ತವೆ: ನಟಿ ಕಂಗನಾ ರಣಾವತ್
ಕೊರೊನಾ ಲಾಕ್ಡೌನ್ನಿಂದಾಗಿ ನಾನು ಟ್ವಿಟರ್ಗೆ ಸೇರಿಕೊಂಡೆ ಮತ್ತು ಲಾಕ್‌ಡೌನ್ ತೆರವಾದ ಬಳಿಕ ನನ್ನನ್ನು ಅದರಿಂದ ಹೊರಹಾಕಲಾಯಿತು ಅಂತಾ ಕಂಗನಾ ಸ್ಪಷ್ಟನೆ ನೀಡಿದರು.
ನವದೆಹಲಿ: ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಇತ್ತೀಚಿನ ಚಿತ್ರ ‘ತಲೈವಿ’ ಬಿಡುಗಡೆಯ ಬಳಿಕ ಅತ್ಯಂತ ಉತ್ಸುಕರಾಗಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಅವರು ಶನಿವಾರ ‘ದಿ ಕಪಿಲ್ ಶರ್ಮಾ ಶೋ’(The Kapil Sharma Show)ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಪ್ರತಿದಿನವೂ ನನ್ನ ವಿರುದ್ಧ ಟ್ವಿಟರ್ ನಲ್ಲಿ ಸುಮಾರು 200 FIRಗಳು ದಾಖಲಾಗುತ್ತವೆ ಎಂದು ಹೇಳುವ ಮೂಲಕ ಕಂಗನಾ ನೆರೆದಿದ್ದ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗನಾ ತುಂಬಾ ಅಂದವಾಗಿ ಕಾಣುತ್ತಿದ್ದರು. ಕಾರ್ಯಕ್ರಮದ ನಿರೂಪಕ ಕಪಿಲ್ ಶರ್ಮಾ ಕಂಗನಾ(Kangana Ranaut) ಬಗ್ಗೆ ಕೆಲವು ಹಾಸ್ಯಾಸ್ಪದ ಮಾತುಗಳನ್ನಾಡುವ ಮೂಲಕ ಪ್ರೇಕ್ಷಕರಲ್ಲಿ ನಗುವಿನ ಅಲೆಯನ್ನು ಎಬ್ಬಿಸಿದರು. ಇದಕ್ಕೆ ಕಂಗನಾರ ಮೊಗದಲ್ಲಿಯೂ ಮಂದಹಾಸ ಮೂಡಿತ್ತು. ಕಪಿಲ್ ಅವರಿಗೆ 2017ರ ಹಳೆಯ ಎಪಿಸೋಡ್‌ನ ಕ್ಲಿಪ್ ಅನ್ನು ತೋರಿಸಿದರು. ನಟ ಶಾಹಿದ್ ಕಪೂರ್ ಜೊತೆಗೆ ಕಂಗನಾ ತಮ್ಮ ‘ರಂಗೂನ್’ ಚಿತ್ರದ ಪ್ರಚಾರಕ್ಕಾಗಿ ಆಗಮಿಸಿದ್ದಾಗ ಪ್ರೇಕ್ಷಕರು ತಾವು ಏಕೆ ಯಾವುದೇ ಸಾಮಾಜಿಕ ಮಾಧ್ಯಮ(Social Media)ಗಳ ವೇದಿಕೆಯಲ್ಲಿ ಇಲ್ಲ ಎಂದು ಪ್ರಶ್ನಿಸಿದ್ದರು. ಸಾಮಾಜಿಕ ಮಾಧ್ಯಮವನ್ನು ಐಡಲ್ ಜನರು ಮಾತ್ರ ಬಳಸುತ್ತಾರೆ ಎಂದು ತಾನು ಭಾವಿಸುತ್ತೇನೆಂದು ನಟಿ ಉತ್ತರಿಸಿದ್ದರು.
ಇದನ್ನೂ ಓದಿ: ಹಿಂದಿ ಸಿನಿಮಾ ಜಗತ್ತನ್ನಾಳಿದ್ದ ಧಾರವಾಡ ಮೂಲದ ನಟಿ ಲೀಲಾ ಚಿತ್ನಿಸ್
‘ಸಾಮಾಜಿಕ ಮಾಧ್ಯಮಗಳಲ್ಲಿ ಏನೂ ಮಾಡದ ಜನರಿದ್ದಾರೆ’ ಎಂದು ನನಗೆ ಅನಿಸುತ್ತದೆ. ನಿಮಗೆ ಗೊತ್ತಿರುವ ಜನರೊಂದಿಗೆ ಮಾತನಾಡಲು ನಿಮಗೆ ಸಮಯ ಸಿಗುವುದಿಲ್ಲ. ನಿಮಗೆ ಗೊತ್ತಿಲ್ಲದವರಿಗೆ ನೀವು ಏನು ಹೇಳುತ್ತೀರಿ’ ಎಂದು ಪ್ರಶ್ನಸಿದ್ದರು. ಮುಂದುವರಿದು ‘ಟ್ವಿಟರ್, ಫೇಸ್‌ಬುಕ್(Facebook), ಇನ್‌ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿರುವ ಜನರು ಎಷ್ಟೊಂದು ಪ್ರಕರಣಗಳನ್ನು ತಾವೇ ಮುಗಿಸಿಕೊಂಡಿದ್ದಾರೆ. ಅಲ್ಲಿ ಬಳಕೆದಾರರೇ ನ್ಯಾಯ, ತೀರ್ಪು ಎಲ್ಲವನ್ನೂ ನೀಡುತ್ತಾರೆ’ ಅಂತಾ ಹೇಳಿದಿದ್ದರು.
ಹಾಡುಹಗಲೇ ನಟಿ ಅಲಂಕೃತ ಸಹಾಯ್ ಮನೆಗೆ ನುಗ್ಗಿ 6 ಲಕ್ಷ ರೂ ದೊಚಿಸಿದ ದರೋಡೆಕೋರರು
ಕೊರೊನಾ ಬರುವುದಕ್ಕಿಂತ ಮುಂಚೆ ನಾನು ನನ್ನ ಕೆಲಸಗಳಲ್ಲಿ ಬ್ಯುಸಿಯಾಗಿದ್ದೆ. ಲಾಕ್‌ಡೌನ್(Lockdown) ಬಳಿಕ ಶೂಟಿಂಗ್ ಸ್ಥಗಿತವಾಗಿದ್ದರಿಂದ ನಾನು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯಳಾದೆ. ಟ್ವಿಟರ್ ನಲ್ಲಿ ನಾನು 6 ತಿಂಗಳು ಕೂಡ ಇರಲು ಸಾಧ್ಯವಾಗಲಿಲ್ಲ. ನನ್ನ ಟ್ವೀಟ್ ಗಳನ್ನು ವಿರೋಧಿಸಿ ಪ್ರತಿದಿನ ನನ್ನ ವಿರುದ್ಧ ಸುಮಾರು 200 ಪ್ರಕರಣಗಳನ್ನು ದಾಖಲಿಸಲಾಗುತ್ತಿತ್ತು. ಹೀಗಾಗಿ ಟ್ವಿಟರ್ ನಿಂದ ನನ್ನನ್ನು ಬ್ಯಾನ್ ಮಾಡಲಾಯಿತು ಅಂತಾ ಕಂಗನಾ ಹೇಳಿಕೊಂಡಿದ್ದಾರೆ. ಕಂಗನಾ ನಟನೆಯ ‘ತಲೈವಿ’ ಸಿನಿಮಾ ಮೇಲೆ ಹೆಚ್ಚು ಭರವಸೆ ಇಟ್ಟುಕೊಳ್ಳಲಾಗಿತ್ತು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್ ಆಗಿ ಮೂಡಿಬಂದಿರುವ ಈ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಆದರೆ ಬಾಕ್ಸ್ ಆಫೀಸ್ ನಲ್ಲಿ ಯಾಕೋ ಈ ಸಿನಿಮಾ ನಿರೀಕ್ಷಿತ ಮಟ್ಟದ ಯಶಸ್ಸು ಗಳಿಸಿಲ್ಲವೆಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.