ನವದೆಹಲಿ: ನಟಿ ಕಂಗನಾ ರನೌತ್ ಅಭಿನಯದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನ ಕುರಿತಾದ ಚಿತ್ರ ತಲೈವಿ ಕೊನೆಗೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಆದರೆ ಈ ಚಿತ್ರವೂ ಬಾಕ್ಸ್ ಆಫೀಸ್ ನಲ್ಲಿ ಇನ್ನೂ ನೆಲೆ ಕಂಡುಕೊಳ್ಳುವ ಮೊದಲೇ ಚಿತ್ರವೂ ಆನ್ ಲೈನ್ ನಲ್ಲಿ ಸೋರಿಕೆಯಾಗಿರುವುದು ಈಗ ನಟಿ ಮತ್ತು ನಿರ್ಮಾಪಕರಿಗೆ ನಿರಾಶೆಯಾಗಿದೆ.ಈ ಚಿತ್ರವು ಚಿತ್ರಮಂದಿರಗಳಿಗೆ ಬಂದ ಕೆಲವೇ ಗಂಟೆಗಳಲ್ಲಿ ಟೊರೆಂಟ್ ಸೈಟ್‌ಗಳು ಮತ್ತು ಇತರ ನೆಟ್‌ವರ್ಕ್‌ಗಳಲ್ಲಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ಬಾಲಿವುಡ್ ಲೈಫ್ ವರದಿಗಳ ಪ್ರಕಾರ, ತಮಿಳ್ರೊಕರ್ಜ್, ಮೊವಿರುಲ್ಜ್, ಟೆಲಿಗ್ರಾಂ ನಂತಹ ವಿವಿಧ ಪೈರಸಿ ವೆಬ್‌ಸೈಟ್‌ಗಳಲ್ಲಿ ಈ ಚಲನಚಿತ್ರವು ಉಚಿತ ಸ್ಟ್ರೀಮಿಂಗ್‌ಗೆ ಲಭ್ಯವಿದೆ.
ಇದನ್ನೂ ಓದಿ-Sprouted Moong Benefits : ಪ್ರತಿ ದಿನ ಈ ಸಮಯದಲ್ಲಿ ಮೊಳಕೆ ಕಾಳು ಸೇವಿಸಿ ; ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ!
ಬಹುತೇಕ ದೊಡ್ಡ ಬ್ಲಾಕ್‌ಬಸ್ಟರ್‌ಗಳು ಬಿಡುಗಡೆಯಾದ ಕೆಲವು ಗಂಟೆಗಳ ನಂತರ ಆನ್‌ಲೈನ್‌ನಲ್ಲಿ ಸೋರಿಕೆಯಾಗುತ್ತವೆ.'ತಲೈವಿ' ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿಯೂ ಬಿಡುಗಡೆಯಾಗಿದೆ.ಗಮನಿಸಬೇಕಾದ ಸಂಗತಿಯೆಂದರೆ, ಕಂಗನಾ (Kangana Ranaut) ಇತ್ತೀಚೆಗೆ ಥಿಯೇಟರ್ ಮಾಲೀಕರೊಂದಿಗೆ ಜಗಳವಾಡಿದ್ದರು, ಅವರು ಅದರ ಥೇಟರ್ ಮತ್ತು ಡಿಜಿಟಲ್ ಬಿಡುಗಡೆಯ ನಡುವಿನ ಅಲ್ಪಾವಧಿಯ ಅಂತರದ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು.
ಈ ಚಿತ್ರದಲ್ಲಿ ಜಯಲಲಿತಾ ಅವರ ಜೀವನ ಮತ್ತು ಅವರು ಅಧಿಕಾರದ ಪಟ್ಟಕ್ಕೆ ಏರುವ ಮೂಲಕ ತಮಿಳುನಾಡಿನ ಜನರ ಹೃದಯವನ್ನು ಗೆಲ್ಲುವ ಕಥನವನ್ನು ಇದರಲ್ಲಿ ಚಿತ್ರಿಸಲಾಗಿದೆ.ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾದ 'ತಲೈವಿ' ಚಿತ್ರವನ್ನು ಎಎಲ್ ವಿಜಯ್ ನಿರ್ದೇಶಿಸಿದ್ದಾರೆ ಮತ್ತು ಕೆವಿ ವಿಜಯೇಂದ್ರ ಪ್ರಸಾದ್, ಮದನ್ ಕರ್ಕಿ ಮತ್ತು ರಜತ್ ಅರೋರಾ ಬರೆದಿದ್ದಾರೆ.ಇದರಲ್ಲಿ ಅರವಿಂದ ಸ್ವಾಮಿ, ನಾಸರ್ ಮತ್ತು ಭಾಗ್ಯಶ್ರೀ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.