ಬೆಂಗಳೂರು: ‘ಕೆರೆಬೇಟೆ’… ಈ  ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ಹೊಗೆವಡ್ಡಿ ಹಾಲುರಾಮೇಶ್ವರ ದೇವಸ್ಥಾನದಲ್ಲಿ ನೆರವೇರಿದೆ. ‘ರಾಜಹಂಸ’ ಚಿತ್ರದ ನಂತರ ಗೌರಿಶಂಕರ್ ಅಭಿನಯದ ಹೊಸ ಚಿತ್ರ ಇದಾಗಿದೆ. ಟೈಟಲ್ ಕೇಳಿದ್ರೆ ನಿಜಕ್ಕೂ ಥ್ರಿಲ್ ಕೊಡುತ್ತೆ. ‘ಕೆರೆಬೇಟೆ’ ಟೈಟಲ್ ಸಿನಿ ಪ್ರೇಮಿಗಳಿಗೆ ಈಗಾಲಗೇ ಸಖತ್ ಕ್ಯೂರಿಯಾಸಿಟಿ ಉಂಟು ಮಾಡಿದೆ.   


COMMERCIAL BREAK
SCROLL TO CONTINUE READING

ಚಂದನವನ ಈಗ ಫುಲ್ ಬ್ಯುಸಿ ಆಗಿದೆ. ಬ್ಯಾಕ್ ಟು ಬ್ಯಾಕ್ ಹಲವಾರು ಹೊಸ ಹೊಸ ಸಿನಿಮಾಗಳು ಬಿಡುಗಡೆಯಾಗಿ ಬಹಳಷ್ಟು ಚರ್ಚೆಯಾಗುತ್ತಿದೆ. ಅಂತೆಯೇ ಇದೀಗ ಆ ಸಾಲಿಗೆ ‘ಕೆರೆಬೇಟೆ’ ಸಿನಿಮಾ ಕೂಡ ಸೇರಲು ರೆಡಿಯಾಗುತ್ತಿದೆ.


ಇದನ್ನೂ ಓದಿ: 'ಸದ್ದು ವಿಚಾರಣೆ ನಡೆಯುತ್ತಿದೆ' ಟ್ರೈಲರ್ ರಿಲೀಸ್ : ನ.25ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆಗೆ


‘ಕೆರೆಬೇಟೆ’ ಚಿತ್ರದಲ್ಲಿ ಹಳ್ಳಿ ಸೊಗಡಿನ ನೈಜತೆಯನ್ನು ನಾವು ಕಾಣಬಹುದು. ಇದೊಂದು ಅದ್ಭುತ ಪ್ರೇಮ ಕಥೆಯಾಗಿರುತ್ತೆ. ‘ಕೆರೆಬೇಟೆ’ ಅನ್ನೋದು ನಿಜಕ್ಕೂ ಕೆರೆ ಬತ್ತಿದಾಗ ಮಲೆನಾಡಿನಲ್ಲಿ ವಿಶೇಷವಾಗಿಯೇ ನಡೆಯುತ್ತದೆ. ಶೇ.70ರಷ್ಟು ನೀರು ಬತ್ತಿದ ಸಮಯದಲ್ಲಿಯೇ ಮೀನು ಹಿಡಿಯೋದನ್ನೇ ಇಲ್ಲಿ ‘ಕೆರೆಬೇಟೆ’ ಅಂತಲೇ ಕರೆಯುತ್ತಾರೆ. ಇದರ ಸುತ್ತವೇ ಇಡೀ ಸಿನಿಮಾ ಇರುತ್ತದೆ.


Vedha Teaser Release: ರಕ್ತ ಮತ್ತು ಕ್ರೂರತೆಯ ಕಥೆ ಹೇಳುವ ವೇದ ಚಿತ್ರದ ಟೀಸರ್


ಇನ್ನು ಈ ಸಿನಿಮಾದ ಕಥೆ 2003 ಮತ್ತು 2004ರ ಕಾಲಘಟ್ಟದಲ್ಲಿಯೇ ನಡೆಯುತ್ತದೆ. ಇಂತಹ ಈ ಸಿನಿಮಾವನ್ನು ಹೆಚ್ಚು ಕಡಿಮೆ 80ರಿಂದ 90 ದಿನ ಚಿತ್ರೀಕರಿಸೋ ಪ್ಲಾನ್ ಮಾಡಲಾಗಿದೆ.


ಗಗನ್ ಬಡೇರಿಯಾ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಕೀರ್ತನ್ ಪೂಜಾರಿ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಈಗಾಗಲೇ ಚಿತ್ರಕ್ಕೆ ಮುಹೂರ್ತ ಕೂಡ ಆಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.