ಪ್ಯಾನ್ ಇಂಡಿಯಾ ʼಕೋರʼ ಸಿನಿಮಾ ಟೀಸರ್ ರಿಲೀಸ್ ಮಾಡಿದ ಧ್ರುವ ಸರ್ಜಾ 

ʼಒರಟʼ ಸಿನಿಮಾ ಖ್ಯಾತಿಯ ನಿರ್ದೇಶಕ ಶ್ರೀ ಮತ್ತೊಂದು ಹೊಸ ಪ್ರಾಜೆಕ್ಟ್ ಜೊತೆಗೆ ನಿರ್ದೇಶನಕ್ಕೆ ಮರಳಿದ್ದಾರೆ. ಚಿತ್ರಕ್ಕೆ ‘ಕೋರ’ ಎಂದು ಟೈಟಲ್ ಇಡಲಾಗಿದ್ದು, ಚಿತ್ರದ ಪವರ್ ಫುಲ್ ಟೀಸರ್ ಬಿಡುಗಡೆ ಮಾಡುವ ಮೂಲಕ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 

Written by - YASHODHA POOJARI | Edited by - Krishna N K | Last Updated : Nov 11, 2022, 05:35 PM IST
  • ಪ್ಯಾನ್ ಇಂಡಿಯಾ ʼಕೋರʼ ಸಿನಿಮಾ ಟೀಸರ್ ರಿಲೀಸ್ ಮಾಡಿದ ಧ್ರುವ ಸರ್ಜಾ
  • ʼಒರಟʼ ಸಿನಿಮಾ ಖ್ಯಾತಿಯ ನಿರ್ದೇಶಕ ಶ್ರೀ ಅವರ ಹೊಸ ಪ್ರಾಜೆಕ್ಟ್
  • ‘ಕೋರ’ ಚಿತ್ರದ ಪವರ್ ಫುಲ್ ಟೀಸರ್ ಬಿಡುಗಡೆ
ಪ್ಯಾನ್ ಇಂಡಿಯಾ ʼಕೋರʼ ಸಿನಿಮಾ ಟೀಸರ್ ರಿಲೀಸ್ ಮಾಡಿದ ಧ್ರುವ ಸರ್ಜಾ  title=

ಬೆಂಗಳೂರು : ʼಒರಟʼ ಸಿನಿಮಾ ಖ್ಯಾತಿಯ ನಿರ್ದೇಶಕ ಶ್ರೀ ಮತ್ತೊಂದು ಹೊಸ ಪ್ರಾಜೆಕ್ಟ್ ಜೊತೆಗೆ ನಿರ್ದೇಶನಕ್ಕೆ ಮರಳಿದ್ದಾರೆ. ಚಿತ್ರಕ್ಕೆ ‘ಕೋರ’ ಎಂದು ಟೈಟಲ್ ಇಡಲಾಗಿದ್ದು, ಚಿತ್ರದ ಪವರ್ ಫುಲ್ ಟೀಸರ್ ಬಿಡುಗಡೆ ಮಾಡುವ ಮೂಲಕ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 

‘ಕೋರ’ ಸಿನಿಮಾ ಮೂಲಕ ರಿಯಾಲಿಟಿ ಶೋ ಖ್ಯಾತಿಯ ಸುನಾಮಿ ಕಿಟ್ಟಿ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಚರೀಷ್ಮಾ ನಟಿಸುತ್ತಿದ್ದಾರೆ. ಟೀಸರ್ ಝಲಕ್ ಪ್ರಾಮಿಸಿಂಗ್ ಆಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರದ ನಿರ್ಮಾಪಕರ ಪಿ. ಮೂರ್ತಿ ಖಳನಟನಾಗಿ ನಟಿಸಿದ್ದು, ಎಂ. ಕೆ ಮಠ, ಮುನಿರಾಜು, ಸೌಜನ್ಯ ಒಳಗೊಂಡ ತಾರಾಗಣ ಚಿತ್ರದಲ್ಲಿದೆ.

ಟೀಸರ್ ರಿಲೀಸ್ ಮಾಡಿ ಮಾತನಾಡಿದ ಧ್ರುವ ಸರ್ಜಾ ಚಿತ್ರದ ಬ್ಯಾಗ್ರೌಂಡ್ ಸ್ಕೋರ್ ಶಶಾಂಕ್ ಶೇಷಗಿರಿ ಅದ್ಭುತವಾಗಿ ಮಾಡಿದ್ದಾರೆ. ಸುನಾಮಿ ಕಿಟ್ಟಿ ಸಖತ್ ಆಗಿ ಸ್ಟಂಟ್ಸ್ ಮಾಡಿದ್ದಾರೆ. ಹಂಡ್ರೆಡ್ ಪರ್ಸೆಂಟ್ ಈ ಸಿನಿಮಾ ರಿಲೀಸ್ ಆದ ಮೇಲೆ ಜನಗಳು ಸುನಾಮಿ ತರ ಥಿಯೇಟರ್ ಗೆ ಬರ್ತಾರೆ. ನಿರ್ಮಾಪಕರು ಕೂಡ ಖಳನಟನಾಗಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಟೀಸರ್ ನಲ್ಲಿ ಪಾಸಿಟಿವ್ ವೈಬ್ಸ್ ಇದೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ. 

ಇದನ್ನೂ ಓದಿ: ಜಿಮ್‌ನಲ್ಲಿ ಕುಸಿದುಬಿದ್ದು ನಟ ಸಿದ್ದಾಂತ್ ವೀರ್ ಸೂರ್ಯವಂಶಿ ಸಾವು

ನಿರ್ಮಾಪಕರಾದ ಪಿ. ಮೂರ್ತಿ ಮಾತನಾಡಿ ನಮ್ಮ ಚಿತ್ರದ ಟೀಸರ್ ಧ್ರುವ ಸರ್ಜಾ ಬಿಡುಗಡೆ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಎಲ್ಲಾ ಕಲಾವಿದರು ತುಂಬಾ ಕಷ್ಟಪಟ್ಟು ಸಿನಿಮಾ ಮಾಡಿದ್ದೀವಿ. ನಾನು ಚಿತ್ರದಲ್ಲಿ ಖಳನಟನಾಗಿ ನಟಿಸಿದ್ದೇನೆ. ಎಲ್ಲರ ಆಶೀರ್ವಾದ ಚಿತ್ರತಂಡದ ಮೇಲಿರಲಿ ಎಂದರು.

ನಿರ್ದೇಶಕ ಶ್ರೀ ಮಾತನಾಡಿ ಟೀಸರ್ ನಲ್ಲಿ ಯಾವ ರೀತಿ ಮೇಕಿಂಗ್, ಕ್ವಾಲಿಟಿ ಇದೆಯೋ ಅದೇ ರೀತಿ ಇಡೀ ಸಿನಿಮಾ ಕೂಡ ಇರುತ್ತೆ. ಕೋರದಲ್ಲಿ ಬುಡುಕಟ್ಟು ಜನಾಂಗದ ಕಥೆ ಹೇಳ ಹೊರಟಿದ್ದೀವಿ, ಅವರಿಂದಲೇ ಇಂದು ಕಾಡು ಉಳಿದಿದೆ. ನಾವೆಲ್ಲರೂ ಬುಡಕಟ್ಟು ಜನಾಂಗದವರನ್ನು ಉಳಿಸೋ ಕೆಲಸ ಮಾಡಬೇಕಾಗಿದೆ. ಅವರ ಭಾವನೆಗಳು, ಆಚಾರ, ವಿಚಾರ, ನೋವು ಇದೆಲ್ಲವೂ ಸಿನಿಮಾದಲ್ಲಿದೆ. ತುಂಬಾ ದೊಡ್ಡ ಸ್ಕೇಲ್ ನಲ್ಲಿ ಆಕ್ಷನ್ ಪ್ಯಾಕೇಜ್ ಜೊತೆಗೆ ಇದೆಲ್ಲವನ್ನು ಕಟ್ಟಿಕೊಡಲಾಗಿದೆ. ನಿರ್ಮಾಪಕರು ಇದಕ್ಕೆ ದೊಡ್ಡ ಮಟ್ಟದಲ್ಲಿ ಸಾಥ್ ನೀಡಿದ್ದು ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗುತ್ತಿದೆ. ಬಹುತೇಕ ಶೂಟಿಂಗ್ ಮುಗಿದಿದ್ದು, ಎರಡು ಫೈಟಿಂಗ್ ಸೀನ್ ಬಾಕಿ ಇದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  20 years of Prabhas : ವಿಶ್ವವೇ ಅಚ್ಚರಿ ಪಡುವ ಪ್ರಭಾಸ್‌ ಮುಂದಿನ ಚಿತ್ರಗಳಿವು..! 

ನಾಯಕ ನಟ ಸುನಾಮಿ ಕಿಟ್ಟಿ ಮಾತನಾಡಿ ಮೂರ್ತಿ ಅವರ ಬ್ಯಾನರ್ ನಡಿ ಹೀರೋ ಆಗಿ ಲಾಂಚ್ ಆಗ್ತಿರೋದಕ್ಕೆ ತುಂಬಾ ಖುಷಿ ಇದೆ. ಕೋರ ಮೂಲಕ ಹೀರೋ ಆಗಿ ಎಂಟ್ರಿ ಕೊಡ್ತಿದ್ದೇನೆ. ರಿಯಾಲಿಟಿ ಶೋ ಗಳಲ್ಲಿ ನನಗೆ ಹೇಗೆ ಸಾಥ್ ಕೊಟ್ಟು ಬೆಳೆಸಿದ್ರೋ ಹಾಗೆ ಈ ಸಿನಿಮಾಗೂ ಸಪೋರ್ಟ್ ಮಾಡಿ ಎಂದು ತಿಳಿಸಿದ್ರು.

ರತ್ನಮ್ಮ ಮೂವೀಸ್ ಬ್ಯಾನರ್ ನಡಿ ಪಿ. ಮೂರ್ತಿ 'ಕೋರ' ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದು, ಶಶಾಂಕ್ ಶೇಷಗಿರಿ ಹಿನ್ನೆಲೆ ಸಂಗೀತ, ಹೇಮಂತ್ ಕುಮಾರ್ ಸಂಗೀತ ನಿರ್ದೆಶನ, ಸೆಲ್ವಂ ಛಾಯಾಗ್ರಹಣ, ಕೆ.ಗಿರೀಶ್ ಕುಮಾರ್ ಸಂಕಲನ, ರವಿವರ್ಮಾ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಸಕಲೇಶಪುರ, ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ, ಬೆಂಗಳೂರಿನಲ್ಲಿ ‘ಕೋರ’ ಸಿನಿಮಾ ಸೆರೆ ಹಿಡಿಯಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News