ʼಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿʼ : ಮಾತಿನ ಚಾಟಿ ಬೀಸಿದ ಡಾಲಿ...!

ವಿವಾದಗಳ ಸುಳಿಗಳಿಂದ ದೂರವಾಗಿ ಮುಂದಿನ ಚಿತ್ರದ ತಯಾರಿಯಲ್ಲಿರುವ ನಟ ರಾಕ್ಷಸ ಡಾಲಿ ಧನಂಜಯ್ ಅವರು ಸದ್ಯ ಕನಕದಾಸರ ಜಯಂತಿಯ ಪ್ರಯುಕ್ತ ಅವರ ಮಾತುಗಳನ್ನು ನೆನೆದು ʼಬಯುವವರೆಲ್ಲರೂ ಚೆಂದಾಗಿರಲಿʼ ಎಂಬ ವಚನದ ಸಾಲುಗಳನ್ನು ಹಂಚಿಕೊಳ್ಳುವ ಮೂಲಕ ನಿಂದಕರಿಗೆ ಮಾತಿನ ಚಾಟಿ ಬೀಸಿದ್ದಾರೆ.

Written by - Krishna N K | Last Updated : Nov 11, 2022, 06:29 PM IST
  • ʼಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿʼ
  • ಕನಕದಾಸರ ವಚನ ಹಂಚಿಕೊಂಡ ನಟ ರಾಕ್ಷಸ
  • ನಿಂದಕರಿಗೆ ಮಾತಿನ ಚಾಟಿ ಬೀಸಿ ಡಾಲಿ ಧನಂಜಯ್‌
ʼಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿʼ : ಮಾತಿನ ಚಾಟಿ ಬೀಸಿದ ಡಾಲಿ...! title=

ಬೆಂಗಳೂರು : ವಿವಾದಗಳ ಸುಳಿಗಳಿಂದ ದೂರವಾಗಿ ಮುಂದಿನ ಚಿತ್ರದ ತಯಾರಿಯಲ್ಲಿರುವ ನಟ ರಾಕ್ಷಸ ಡಾಲಿ ಧನಂಜಯ್ ಅವರು ಸದ್ಯ ಕನಕದಾಸರ ಜಯಂತಿಯ ಪ್ರಯುಕ್ತ ಅವರ ಮಾತುಗಳನ್ನು ನೆನೆದು ʼಬಯುವವರೆಲ್ಲರೂ ಚೆಂದಾಗಿರಲಿʼ ಎಂಬ ವಚನದ ಸಾಲುಗಳನ್ನು ಹಂಚಿಕೊಳ್ಳುವ ಮೂಲಕ ನಿಂದಕರಿಗೆ ಮಾತಿನ ಚಾಟಿ ಬೀಸಿದ್ದಾರೆ.

ಹೌದು, ಧನಂಜಯ್‌ ಅವರು ಅಭಿನಯದ ʼಹೆಡ್‌ ಬುಷ್ʼ ಕೆಲವೊಂದಿಷ್ಟು ವಿವಾದಗಳಿಗೆ ಗುರಿಯಾಗಿತ್ತು. ಕರಗ ಹಾಗೂ ವೀರಗಾಸೆಗೆ ಅವಮಾನ ಮಾಡಿದ್ದಾರೆ ಎಂಬು ಆರೋಪವನ್ನು ಡಾಲಿ ಸಿನಿಮಾ ಎದುರಿಸುತ್ತಿತ್ತು. ಸದ್ಯ ಹೆಡ್ ಬುಷ್ ವಿವಾದಕ್ಕೆ ಪೂರ್ಣ ವಿರಾಮ ಬಿದ್ದಿದೆ. ಇದೀಗ ಧನಂಜಯ್‌ ಅವರು ಹೊಯ್ಸಳ ಸಿನಿಮಾದ ಶೂಟಿಂಗ್‌ನಲಿ ಬ್ಯುಸಿಯಾಗಿದ್ದಾರೆ. ಇನ್ನು ಕನಕದಾಸ ಜಯಂತಿಯ ಪ್ರಯುಕ್ತ ತಮ್ಮ ಟ್ಟಿಟರ್‌ ಖಾತೆಯಲ್ಲಿ ಕನಕದಾಸರ ವಚನವೊಂದನ್ನು ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ಪ್ಯಾನ್ ಇಂಡಿಯಾ ʼಕೋರʼ ಸಿನಿಮಾ ಟೀಸರ್ ರಿಲೀಸ್ ಮಾಡಿದ ಧ್ರುವ ಸರ್ಜಾ 

ಮುಂದೆ ನನ್ನ ಬಯ್ಯುವರೆಲ್ಲ ಅಂದಣವೇರಲಿ, ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ, ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ, ಜನರೊಳಗೆ ಮಾನಭಂಗ ಮಾಡಿದವರಿಗೆ, ಜೇನುತುಪ್ಪ ಸಕ್ಕರೆ ಊಟ ಆಗಲಿ ಅವರಿಗೆ, ಹಾನಿ ಬಾರದಂತಹ ಲೋಕ ಆಗಲಿ ಅವರಿಗೆ, ಮಹಾನುಭಾವ ಮುಕ್ತಿಯ ಕೊಡುವ, ನೆಲೆಯಾದಿಕೇಶವ - ಕನಕದಾಸರು. ಇದು ಕನಕದಾಸರ ರಚನೆಯಾದರೂ ಸಹ ಧನಂಜಯ್ ಅವರಿಗೆ ಹತ್ತಿರವಾಗಿದ್ದು. ಸುಖಾಸುಮ್ಮನೆ ಹುಟ್ಟಿಕೊಂಡ ವಿವಾದಗಳಿಗೆ ಕನಕರ ವಚನದಿಂದ ಟಾಂಗ್ ಕೊಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News