ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ಕೂಡ ದೇಶ, ವಿದೇಶಗಳಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಆ ಮಟ್ಟಕ್ಕೆ ನಮ್ಮ ಕನ್ನಡ ಚಿತ್ರರಂಗ ಬೆಳೆದು ನಿಂತಿದೆ.ಒಂದು ಸಿನಿಮಾ ಅಂದ್ರೆ ಹೀಗೆಯೇ ಮಾಡಬೇಕು ಅನ್ನೋ ಹಾಗೆ ಹವಾ ಕ್ರಿಯೇಟ್‌ ಮಾಡಿದೆ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ.ಈಗ ಕನ್ನಡದಲ್ಲೂ ಹೈ ಬಜೆಟ್‌ನಲ್ಲೇ ಬಹುತೇಕ ಸಿನಿಮಾಗಳು ನಿರ್ಮಾಣ ಆಗುತ್ತಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : James: ಬಿರುಗಾಳಿಯಂತೆ 'ಜೇಮ್ಸ್' ಎಂಟ್ರಿ..! ಟಿಕೆಟ್ಸ್‌ ಸೋಲ್ಡ್‌ ಔಟ್‌..!


ಇಷ್ಟಿದ್ದರೂ ಕನ್ನಡ ಚಿತ್ರರಂಗದಲ್ಲಿ ಕನ್ನಡತಿಯರಿಗೆ ಸರಿಯಾಗಿ ಅವಕಾಶ ಸಿಗುತ್ತಿಲ್ಲವಾ? ಅನ್ನೋ ಪ್ರಶ್ನೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಹೌದು, ಕನ್ನಡ ಚಿತ್ರರಂಗದಲ್ಲಿ ಸದ್ಯ ಮಿಂಚುತ್ತಿರುವ ಮೂವರು ನಟಿಯರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲವಂತೆ. ಹಾಗಿದ್ರೆ ಅವಕಾಶ ಯಾಕೆ ಸಿಗುತ್ತಿಲ್ಲ, ಆ ನಟಿಯರು ಯಾರು ಅನ್ನೋ ಪ್ರಶ್ನೆ ಈಗ ನಿಮ್ಮಲ್ಲೂ ಮೂಡಿರಬಹುದು. ಅದರ ಬಗ್ಗೆ ಕೂಡ ಮಾಹಿತಿ ಕೊಡ್ತೀವಿ, ಮುಂದೆ ಓದಿ.


ನಟಿ ಅದಿತಿ ಪ್ರಭುದೇವ (Aditi Prabhudeva) ನೋಡಲು ಸಖತ್‌ ಬ್ಯೂಟಿಯಾಗಿದ್ದಾರೆ.ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ, ಒಳ್ಳೆ ನಟಿ, ಅಚ್ಚ ಕನ್ನಡತಿ.ಇನ್ನು ಅಮೃತ ಅಯ್ಯಂಗಾರ್‌ ಬಳುಕೋ ಸುಂದರಿ, ನಟನೆಗೂ ಸೈ.ಮತ್ತೊಬ್ಬರು ದಿಯಾ ಖ್ಯಾತಿಯ ಖುಷಿ ರವಿ.ಈಕೆಯೂ ರಂಗಭೂಮಿಯಿಂದ ಬಂದ ನಟಿ.ಇಷ್ಟೆಲ್ಲಾ ಕಲೆ, ಬ್ಯೂಟಿ ಇದ್ರು ಕೂಡ ಇವರನ್ನು ನಮ್ಮ ಚಿತ್ರರಂಗ ಸರಿಯಾಗಿ ಬಳಸಿಕೊಳ್ಳುತ್ತಿಲ್ಲವಾ? ಅನ್ನೋ ಪ್ರಶ್ನೆ ಕಾಡುತ್ತಿದೆ.


ಇದನ್ನೂ ಓದಿ : Hijab Row: ಶಾಲಾ-ಕಾಲೇಜುಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಡಿಕೆಶಿ ಮನವಿ


ಈ ಮೂವರು ನಟಿಮಣಿಗಳು ತಾವು ಚಿತ್ರರಂಗಕ್ಕೆ ಯಾಕೆ ಮತ್ತು ಹೇಗೆ ಎಂಟ್ರಿ ಕೊಟ್ಟಿರೋದು ಮತ್ತು ಎಂಟ್ರಿಯಾದ ಬಳಿಕ ತಮಗಾದ ನೋವು ಏನು?, ಸದ್ಯ ಚಿತ್ರರಂಗದಲ್ಲಿ ಅವಕಾಶ ಇದೆಯಾ? ಅನ್ನೋ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ನಾವು ಕನ್ನಡ ಮಾತನಾಡೋದೇ ತಪ್ಪಾ? ಅಂತ ನಟಿ ಅದಿತಿ ಪ್ರಶ್ನಿಸಿದ್ದಾರೆ.ಯಾಕಂದ್ರೆ ಕನ್ನಡ ಮಾತನಾಡಿದ್ರೆ ಸಂಭಾವನೆಯೇ ಕಡಿಮೆಯಂತೆ.ಅಚಾನಕ್‌ ಆಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನನಗೆ ಕನ್ನಡನಾಡಿನ ಜನತೆ ಅನ್ನ ಕೊಡುತ್ತಿದೆ ಅಂತ ಹೆಮ್ಮೆಯಿಂದ ನಟಿ ಅಧಿತಿ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ : ವಿದೇಶದಲ್ಲೂ ಅಪ್ಪು 'ಜೇಮ್ಸ್' ಹವಾ..! ಎಷ್ಟು ಥಿಯೇಟರ್‌ ಬುಕ್‌ ಆಗಿದೆ ಗೊತ್ತಾ..?


ಇನ್ನು ನಟಿ ಅಮೃತ ಅಯ್ಯಂಗಾರ್‌ ಇಲ್ಲಿಯವರೆಗೆ ಮಾಡಿರೋ ಅಷ್ಟೂ ಸಿನಿಮಾಗಳು ಜನಪ್ರಿಯತೆ ಪಡೆಕೊಂಡಿದ್ದರೂ ಇಲ್ಲಿಯವರೆಗೆ ತಮಗೆ ಯಾವ ಸ್ಟೋರಿಗಳು ಕೂಡ ಹುಡುಕಿಕೊಂಡು ಬಂದಿಲ್ಲವಂತೆ.ಇನ್ನು ಮದ್ವೆಯಾಗಿದೆ ಅಥವಾ ರಿಲೇಶನ್‌ಶಿಪ್‌ನಲ್ಲಿ ಇದ್ರೆ ನಿಮಗೆ ಸಿನಿಮಾ ಮಾಡಲು ತೊಂದ್ರೆ ಏನು ಇಲ್ವಾ ಅನ್ನೋ ಪ್ರಶ್ನೆ ಕೇಳ್ತಾರಂತೆ. ಹಾಗಂತ ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನ  ಹೀರೋಗಳಿಗೆ ಯಾಕೆ ಕೇಳಲ್ಲ ಅನ್ನೋದು ಇವರ ಪ್ರಶ್ನೆಯಾಗಿದೆ.ಇದೇ ವೇಳೆ, ದಯವಿಟ್ಟು ಕನ್ನಡ ಹಿರೋಯಿನ್‌ಗಳಿಗೆ ಸಂಭಾವನೆ ಜಾಸ್ತಿ ಮಾಡಿ ಅಂತ ಅವರು ಕೇಳಿಕೊಂಡಿದ್ದಾರೆ.ನಮ್ಮ ಕನ್ನಡದ ಹಿರೋಯಿನ್‌ಗಳು ನೋಡಲು ಅಂದವಾಗಿದ್ದಾರೆ. ನಟನೆ ಕೂಡ ಅದ್ಭುತವಾಗಿ ಮಾಡ್ತಾರೆ.ಆದ್ರೂ ಕೂಡ ಪರಭಾಷೆಯ ನಟಿಯರಿಗೆ ಮನ್ನಣೆ ಕೊಡೋದು ಕಮ್ಮಿಯಾಗಿಲ್ಲ ಅನ್ನೋ ನೋವು ಈಲ್ಲಿನ ನಟಿಯರಿಗೆ ಹಿಂದಿನಿಂದಲೂ ಕಾಡಿದೆ, ಈಗಲೂ ಕಾಡುತ್ತಿದೆ. ನಮ್ಮಲ್ಲಿರೋ ಅದ್ಭುತ ಪ್ರತಿಭೆಗಳಿಗೆ ಅವಕಾಶ ಕೊಡೋ ಕೆಲಸವನ್ನ ಇನ್ನಾದ್ರೂ ನಮ್ಮ ನಿರ್ಮಾಪಕರು, ನಿರ್ದೇಶಕರು ಮಾಡಿದ್ರೆ ಉತ್ತಮ ಅನ್ನೋದು ಎಲ್ಲರ ಆಶಯವಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.