ವಿದೇಶದಲ್ಲೂ ಅಪ್ಪು 'ಜೇಮ್ಸ್' ಹವಾ..! ಎಷ್ಟು ಥಿಯೇಟರ್‌ ಬುಕ್‌ ಆಗಿದೆ ಗೊತ್ತಾ..?

ಟಿಕೆಟ್‌ಗಳು ಕೂಡ ಸೋಲ್ಡ್‌ ಔಟ್‌ ಆಗಿವೆ. ವಿದೇಶದಲ್ಲಿ ವಾಸವಾಗಿರುವ ಅಪ್ಪು ಅಭಿಮಾನಿಗಳು,  ಅದ್ರಲ್ಲೂ ಕನ್ನಡಿಗರು‌ 'ಜೇಮ್ಸ್' ಚಿತ್ರದ ಫಸ್ಟ್‌ ಡೇ ಫಸ್ಟ್‌ ಶೋ ನೋಡಲು ಕಾಯುತ್ತಿದ್ದಾರೆ.

Written by - Malathesha M | Edited by - Ranjitha R K | Last Updated : Mar 15, 2022, 12:59 PM IST
  • ಮಾರ್ಚ್‌ 17ರಂದು ಅಪ್ಪು ಹುಟ್ಟುಹಬ್ಬಕ್ಕೆ 'ಜೇಮ್ಸ್' ಸಿನಿಮಾ ರಿಲೀಸ್
  • ಹೊರ ದೇಶಗಳಲ್ಲೂ ಈಗಾಗಲೇ ನೂರಾರು ಥಿಯೇಟರ್‌ಗಳು ಬುಕ್‌
  • ಆಸ್ಟ್ರೇಲಿಯಾದಲ್ಲೂ ಮನೆ ಮಾಡಿದ ಸಂಭ್ರಮ
ವಿದೇಶದಲ್ಲೂ ಅಪ್ಪು 'ಜೇಮ್ಸ್' ಹವಾ..! ಎಷ್ಟು ಥಿಯೇಟರ್‌ ಬುಕ್‌ ಆಗಿದೆ ಗೊತ್ತಾ..? title=
ಅಪ್ಪು ಹುಟ್ಟುಹಬ್ಬಕ್ಕೆ 'ಜೇಮ್ಸ್' ಸಿನಿಮಾ ರಿಲೀಸ್

ಬೆಂಗಳೂರು : ವಿದೇಶದಲ್ಲೂ ಕನ್ನಡ ಸಿನಿಮಾಗಳು ಅಬ್ಬರಿಸುವುದು ಮಾಮೂಲು. ಆದರೆ  'ಜೇಮ್ಸ್' (James) ಬೇರೆಯದ್ದೇ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿದೆ. ಅಂದಹಾಗೆ ಮಾರ್ಚ್‌ 17ರಂದು ಅಪ್ಪು ಹುಟ್ಟುಹಬ್ಬಕ್ಕೆ 'ಜೇಮ್ಸ್' ಸಿನಿಮಾ ಬೆಳ್ಳಿ ತೆರೆಯ ಮೇಲೆ ಕಮಾಲ್‌ ಮಾಡಲಿದ್ದು, ಹೊರ ದೇಶಗಳಲ್ಲೂ ಈಗಾಗಲೇ ನೂರಾರು ಥಿಯೇಟರ್‌ಗಳು ಬುಕ್‌ ಆಗಿವೆ (James release date).

ಟಿಕೆಟ್‌ಗಳು ಕೂಡ ಸೋಲ್ಡ್‌ ಔಟ್‌ ಆಗಿವೆ. ವಿದೇಶದಲ್ಲಿ ವಾಸವಾಗಿರುವ ಅಪ್ಪು ಅಭಿಮಾನಿಗಳು (Puneeth Rajkumar fans), ಅದ್ರಲ್ಲೂ ಕನ್ನಡಿಗರು‌ 'ಜೇಮ್ಸ್' ಚಿತ್ರದ ಫಸ್ಟ್‌ ಡೇ ಫಸ್ಟ್‌ ಶೋ ನೋಡಲು ಕಾಯುತ್ತಿದ್ದಾರೆ (James release). ಆಂಗ್ಲರ ನಾಡು ಬ್ರಿಟನ್‌ನಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ 'ಜೇಮ್ಸ್' ಚಿತ್ರ ರಿಲೀಸ್‌ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ : James Pre Release Event : ಅಪ್ಪುನ ಹುಡ್ಕೊಂಡು ಹೋಗ್ತೀನಿ ಎಂದ ರಾಘಣ್ಣ.. ಕಣ್ಣೀರು ಹಾಕಿದ ಶಿವಣ್ಣ!

ಜಗತ್ತಿನಾದ್ಯಂತ ಸಂಚಲನ :
ಯುದ್ಧ ನಡೆಯುತ್ತಿರುವ ಕಾರಣ ಉಕ್ರೇನ್‌-ರಷ್ಯಾ (Russia Ukraine) ಹೊರತುಪಡಿಸಿ ಇಡೀ ಜಗತ್ತಿನಾದ್ಯಂತ 'ಜೇಮ್ಸ್' ಎಂಟ್ರಿ ಪಕ್ಕಾ ಆಗಿದೆ. ಅದರಲ್ಲೂ ಯುರೋಪ್‌ನ ಎಲ್ಲಾ ದೇಶಗಳಲ್ಲೂ 'ಜೇಮ್ಸ್' ಅಬ್ಬರಿಸಲಿದೆ. ಇದರ ಜೊತೆ ಉತ್ತರ ಅಮೆರಿಕ ಹಾಗೂ ದಕ್ಷಿಣ ಅಮೆರಿಕದಲ್ಲೂ ಜೇಮ್ಸ್‌ ಅಬ್ಬರಿಸಿ ಬೊಬ್ಬಿರಿಯೋದು ಪಕ್ಕಾ ಆಗಿದೆ. ಈ ಮೂಲಕ ಕನ್ನಡಿಗರ ಚಿತ್ರವೊಂದು ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಲು ಸಜ್ಜಾಗಿದೆ.

ರೆಕಾರ್ಡ್‌ ಬ್ರೇಕ್..!
ಇನ್ನು ಆಸ್ಟ್ರೇಲಿಯಾದಲ್ಲೂ ಇದೇ ರೀತಿ ಸಂಭ್ರಮ ಮನೆ ಮಾಡಿದ್ದು, 150ಕ್ಕೂ ಹೆಚ್ಚು ಶೋ ಕಣ್ತುಂಬಿಕೊಳ್ಳಲಿದ್ದಾರೆ ಅಪ್ಪು ಅಭಿಮಾನಿಗಳು (Appu Fans). ಜೊತೆಗೆ ಸಿಂಗಪೂರ್‌ನಲ್ಲಿ ಕೂಡ ಹೀಗೆ ಹಬ್ಬದ ವಾತಾವರಣವಿದ್ದು, ಲಕ್ಷ ಲಕ್ಷ ಕನ್ನಡಿಗರು ಸಿಂಗಪೂರ್‌ನಲ್ಲೂ 'ಜೇಮ್ಸ್' ಹಬ್ಬವನ್ನು ಆಚರಿಸಲಿದ್ದಾರೆ. ಇದು ಕನ್ನಡಿಗರ ಪಾಲಿಗೆ ಮರೆಯಲಾಗದ ದಿನವಾಗಿದೆ. ಯಾಕಂದ್ರೆ 'ಜೇಮ್ಸ್' ರೀತಿ ಮುಂದೆ ಯಾವುದೇ ಸಿನಿಮಾ ರಿಲೀಸ್‌ ಆಗೋದು ಡೌಟ್‌ ಅಂತಿದ್ದಾರೆ ಡಾ.ಪುನೀತ್‌ ರಾಜ್‌ಕುಮಾರ್‌ (Puneeth Rajkumar)ಅಭಿಮಾನಿಗಳು.

ಇದನ್ನೂ ಓದಿ : Khadak Halli Hudugaru : ಡಾ. ರಾಜ್‌ ನಿವಾಸದ ಮುಂದೆ ʼಖಡಕ್‌ ಹಳ್ಳಿ ಹುಡುಗರುʼ

ಒಟ್ಟಾರೆ ನಾಡು, ನುಡಿಗಾಗಿ ಸೇವೆ ಸಲ್ಲಿಸಿದ್ದ ದೊಡ್ಮನೆ ಕುಟುಂಬದ ಕುಡಿ ಅಪ್ಪು ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಹಳೇ ದಾಖಲೆಗಳನ್ನ ಪುಡಿ ಪುಡಿ ಮಾಡೋದು ಗ್ಯಾರಂಟಿ. ಅದು ಗಲ್ಲಾ ಪೆಟ್ಟಿಗೆಯಲ್ಲೇ ಆಗಿರಬಹುದು, ಥಿಯೇಟರ್‌ ಗಳ ವಿಚಾರದಲ್ಲೇ ಆಗಿರಬಹುದು. ಎಲ್ಲಾ ಕಡೆಯೂ 'ಜೇಮ್ಸ್'.. 'ಜೇಮ್ಸ್'... ಅನ್ನೋ ಪದವೇ ಮೊಳಗುತ್ತಿದ್ದು, ಚಿತ್ರವನ್ನು ಕಣ್ತುಂಬಿಕೊಳ್ಳಲು ಅಪ್ಪು ಫ್ಯಾನ್ಸ್‌ ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News