ಬಹುನಿರೀಕ್ಷಿತ ಕನ್ನಡ ಕಾಮಿಡಿ ಚಿತ್ರ ಪೆಟ್ರೋಮ್ಯಾಕ್ಸ್ ವೂಟ್ ಸೆಲೆಕ್ಟ್ ನಲ್ಲಿ ಪ್ರಸಾರ
ಏಕಾಂಗಿ ಜೀವನದ ಪ್ರಯೋಗಗಳು ಮತ್ತು ಕ್ಲೇಶಗಳನ್ನು ಬಿಂಬಿಸುವ ಈ ಚಿತ್ರವು ಒಡನಾಟ, ಮಾನವ ಸಂಬಂಧಗಳು ಮತ್ತು ಒಗ್ಗಟ್ಟಿನ ಸಾರವನ್ನು ಪೆಟ್ರೋಮ್ಯಾಕ್ಸ್ ವಿವರಿಸುತ್ತದೆ.
ಬೆಂಗಳೂರು : ವೂಟ್ ಸೆಲೆಕ್ಟ್ ನಲ್ಲಿ ಬಹುನಿರೀಕ್ಷಿತ ಕನ್ನಡ ಕಾಮಿಡಿ ಚಿತ್ರ ಪೆಟ್ರೋಮ್ಯಾಕ್ಸ್ ಆಗಸ್ಟ್ 26 ರಂದು ಪ್ರಸಾರವಾಗಲಿದೆ. ಇದು ವೂಟ್ ಸೆಲೆಕ್ಟ್ ನ ಎಕ್ಸ್ ಕ್ಲೂಸಿವ್ ವರ್ಲ್ಡ್ ಡಿಜಿಟಲ್ ಪ್ರೀಮಿಯರ್ ಆಗಿದ್ದು, ಸ್ಟ್ರೀಮಿಂಗ್ ಆಗಲಿದೆ. ವಿಜಯಪ್ರಸಾದ್ ನಿರ್ದೇಶನದ ಚಿತ್ರವನ್ನು ಸುಧೀರ್ ಕೆಎಂ ಮತ್ತು ರಾಜಶೇಖರ್ ಕೆಜಿ ನಿರ್ಮಾಣ ಮಾಡಿದ್ದಾರೆ. ಸತೀಶ್ ನೀನಾಸಂ, ಹರಿಪ್ರಿಯಾ, ನಾಗಭೂಷಣ್, ಕಾರುಣ್ಯ ರಾಂ, ಅಚ್ಯುತ್ ಕುಮಾರ್, ಸುಮನ್ ರಂಗನಾಥನ್ ಮತ್ತು ಅರುಣ್ ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ಪೆಟ್ರೋಮ್ಯಾಕ್ಸ್ ಸಂಪೂರ್ಣ ವಯಸ್ಕ ಕಾಮೆಡಿ ಶೋ ಆಗಿದ್ದು, ಕುಟುಂಬದ ಮೌಲ್ಯಗಳು ಮತ್ತು ಸಂಬಂಧಗಳ ಮೌಲ್ಯಗಳನ್ನು ಎತ್ತಿಹಿಡಿಯುವ ಅಂಶಗಳನ್ನು ಒಳಗೊಂಡಿದೆ. ಪೆಟ್ರೋಮ್ಯಾಕ್ಸ್ ಚಿತ್ರವು ನಾಲ್ವರು ಅನಾಥರ ಜೀವನದ ಮೇಲೆ ಕೇಂದ್ರೀಕೃತವಾಗಿದೆ. ಏಕಾಂಗಿ ಜೀವನದ ಪ್ರಯೋಗಗಳು ಮತ್ತು ಕ್ಲೇಶಗಳನ್ನು ಬಿಂಬಿಸುವ ಈ ಚಿತ್ರವು ಒಡನಾಟ, ಮಾನವ ಸಂಬಂಧಗಳು ಮತ್ತು ಒಗ್ಗಟ್ಟಿನ ಸಾರವನ್ನು ವಿವರಿಸುತ್ತದೆ.
ಇದನ್ನೂ ಓದಿ : ವೇಮಗಲ್ ಜಗನ್ನಾಥ ರಾವ್ ನಿರ್ದೇಶನದಲ್ಲಿ ಮೂಡಿ ಬರಲಿದೆ "ನನ್ನ ಹುಡುಕಿ ಕೊಡಿ"
ಸತೀಶ್ ನೀನಾಸಂ ಅವರು ಈ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಪೆಟ್ರೋಮ್ಯಾಕ್ಸ್ ಒಂದು ಅನನ್ಯವಾದ ಚಿತ್ರವಾಗಿದ್ದು, ಅತ್ಯಂತ ಸರಳವಾದ ರೀತಿಯಲ್ಲಿ ಕತೆಯನ್ನು ಹೆಣೆದಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ. ವೂಟ್ ಸೆಲೆಕ್ಟ್ ನಲ್ಲಿ ಚಿತ್ರದ ಒಟಿಟಿ ಚೊಚ್ಚಲ ಪ್ರದರ್ಶನವನ್ನು ವೀಕ್ಷಿಸಲು ಉತ್ಸುಕನಾಗಿರುವುದಾಗಿಯೂ ಹೇಳಿದ್ದಾರೆ. ಅಲ್ಲದೆ, ದೇಶಾದ್ಯಂತ ಹೆಚ್ಚಿನ ಪ್ರೇಕ್ಷಕರಿಗೆ ಚಿತ್ರವನ್ನು ತಲುಪಿಸುತ್ತಿರುವುದಕ್ಕಾಗಿ ನಾನು ಕೃತಜ್ಞಟೆ ಸಲ್ಲಿಸಿದ್ದಾರೆ.
ವಾಸ್ತವ ಜೀವನದಲ್ಲಿ ನಡೆಯುತ್ತಿರುವ ಸಾಮಾಜಿಕ ಸಮಸ್ಯೆಗಳ ಸುತ್ತ ಈ ಚಿತ್ರವನ್ನು ಮಾಡಲಾಗಿದೆ. ಇದು ಆಧನಿಕ ಮತ್ತು ಸಾಂಪ್ರದಾಯಿಕ ಜೀವನವು ತಡೆರಹಿತ ರೀತಿಯಲ್ಲಿ ಸಹಬಾಳ್ವೆ ನಡೆಸುವ ಸಾಧ್ಯತೆಯನ್ನು ತೋರಿಸುತ್ತದೆ ಎಂದು ಚಿತ್ರ ನಿರ್ದೇಶಕ ವಿಜಯ ಪ್ರಸಾದ್ ಹೇಳಿದ್ದಾರೆ.
ಇದನ್ನೂ ಓದಿ : Dolly Dhananjay : ಸ್ಯಾಂಡಲ್‌ವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ ಡಾಲಿ ನಿರ್ಧಾರ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.