ವೇಮಗಲ್ ಜಗನ್ನಾಥ ರಾವ್ ನಿರ್ದೇಶನದಲ್ಲಿ ಮೂಡಿ ಬರಲಿದೆ "ನನ್ನ ಹುಡುಕಿ ಕೊಡಿ"

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಚಿತ್ರದ ನಾಯಕ ಹಾಗೂ ನಿರ್ಮಾಪಕ ಧನ್ವಿತ್ ಅವರ ಹುಟ್ಟುಹಬ್ಬದಂದು ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಚಿತ್ರದ ಮುಹೂರ್ತ ಸಮಾರಂಭದೊಂದಿಗೆ ಧನ್ವಿತ್ ಅವರ ಹುಟ್ಟುಹಬ್ಬದ ಆಚರಣೆ ಹಾಗೂ ನಿರ್ಮಾಣ ಸಂಸ್ಥೆಯ ಉದ್ಘಾಟನೆಯನ್ನು ಕೂಡಾ  ನೆರವೇರಿಸಲಾಗಿದೆ. 

Written by - YASHODHA POOJARI | Last Updated : Aug 25, 2022, 11:48 AM IST
  • ವೇಮಗಲ್ ಜಗನ್ನಾಥ ರಾವ್ ನಿರ್ದೇಶನದಲ್ಲಿ ಬರಲಿದೆ "ನನ್ನ ಹುಡುಕಿ ಕೊಡಿ"
  • ರೇಣುಕಾಂಬ ಥಿಯೇಟರ್ ನಲ್ಲಿ ಚಿತ್ರಕ್ಕೆ ಮುಹೂರ್ತ
  • ನಾಯಕ್ ಧ್ವನಿತ್ ಹುಟ್ಟು ಹಬ್ಬದಂದೇ ಚಿತ್ರಕ್ಕೆ ಚಾಲನೆ
ವೇಮಗಲ್ ಜಗನ್ನಾಥ ರಾವ್  ನಿರ್ದೇಶನದಲ್ಲಿ ಮೂಡಿ ಬರಲಿದೆ "ನನ್ನ ಹುಡುಕಿ ಕೊಡಿ"  title=
Nanna huduki kodi filma team

ಬೆಂಗಳೂರು : ಕನ್ನಡ ಚಿತ್ರರಂಗಕ್ಕೆ  "ತುಳಸಿದಳ" ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಹಿರಿಯ ನಿರ್ದೇಶಕ ವೇಮಗಲ್ ಜಗನ್ನಾಥ ರಾವ್ ನಿರ್ದೇಶನದ "ನನ್ನ ಹುಡುಕಿ ಕೊಡಿ" ಚಿತ್ರದ ಮುಹೂರ್ತ ಸಮಾರಂಭ ರೇಣುಕಾಂಬ ಥಿಯೇಟರ್ ನಲ್ಲಿ ನಡೆಯಿತು. ಮೊದಲ ಸನ್ನಿವೇಶಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಆರಂಭ ಫಲಕ ತೋರಿದರು. ನಿರ್ದೇಶಕ ಮಹೇಶ್ ಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು.
ಕನಕಪುರದ ಧನ್ವಿತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರೊಂದಿಗೆ, ಬಂಡವಾಳವನ್ನು ಹೂಡುತ್ತಿದ್ದಾರೆ.

ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಚಿತ್ರದ ನಾಯಕ ಹಾಗೂ ನಿರ್ಮಾಪಕ ಧನ್ವಿತ್ ಅವರ ಹುಟ್ಟುಹಬ್ಬದಂದು ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಚಿತ್ರದ ಮುಹೂರ್ತ ಸಮಾರಂಭದೊಂದಿಗೆ ಧನ್ವಿತ್ ಅವರ ಹುಟ್ಟುಹಬ್ಬದ ಆಚರಣೆ ಹಾಗೂ ನಿರ್ಮಾಣ ಸಂಸ್ಥೆಯ ಉದ್ಘಾಟನೆಯನ್ನು ಕೂಡಾ  ನೆರವೇರಿಸಲಾಗಿದೆ. 

ಇದನ್ನೂ ಓದಿ : Dolly Dhananjay : ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ ಡಾಲಿ ನಿರ್ಧಾರ!

ಮುಂದಿನ ವಾರದಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ. ಮೀನಾಕ್ಷಿ ಜೈಸ್ವಾಲ್ ಹಾಗೂ ಸಾಯಿ ನಯನ ಈ ಚಿತ್ರದ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಪೋಷಕಪಾತ್ರಗಳಲ್ಲಿ ಕನ್ನಡದ ಪ್ರಸಿದ್ದ ಕಲಾವಿದರು ಅಭಿನಯಿಸಲಿದ್ದಾರೆ ಎಂದು ನಿರ್ದೇಶಕ ವೇಮಗಲ್ ಜಗನ್ನಾಥ ರಾವ್ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. 

ವೇಮಗಲ್ ಜಗನ್ನಾಥ ರಾವ್ ನಿರ್ದೇಶನದ "ಆವರ್ತ" ಚಿತ್ರದಲ್ಲಿ ಒಂದು ಪಾತ್ರ‌ ಮಾಡಿದ್ದೆ‌. ಆದರೆ ಇದೀಗ ನನ್ನ ಹುಡುಕಿ ಕೊಡಿ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಚಿತ್ರದ ನಾಯಕ ಮತ್ತು ನಿರ್ಮಾಪಕ ಧನ್ವಿತ್ ಹೇಳಿದ್ದಾರೆ. ಧನ್ವಿತ್ ಫಿಲಂ ಫ್ಯಾಕ್ಟರಿ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು,  ವಾಸುಕಿ ಭುವನ್ ನಿರ್ಮಾಣಕ್ಕೆ ಜೊತೆಯಾಗಿದ್ದಾರೆ. 

ಇದನ್ನೂ ಓದಿ : ‘ಕೆಜಿಎಫ್-2’ ದಾಖಲೆ ಯಾರೂ ಮುರಿಯಲು ಆಗಲ್ಲ: ಆಮೀರ್ ಖಾನ್ ಸಿನಿಮಾ ಸೋತಿದ್ದು ಎಲ್ಲಿ..?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News