Dolly Dhananjay : ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ ಡಾಲಿ ನಿರ್ಧಾರ!

ಈ ಮಾತು ಸುಳ್ಳು ಮಾಡಲು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ ನಟ ಡಾಲಿ ಧನಂಜಯ್‌. ಇದೀಗ ಡಾಲಿ ಕೈಗೊಂಡಿರುವ ಆ ಒಂದು ನಿರ್ಧಾರ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ.

Written by - Malathesha M | Last Updated : Aug 25, 2022, 06:48 PM IST
  • ಒಂದು ಹೆಜ್ಜೆ ಮುಂದಿಟ್ಟಿದ್ದಾರೆ ನಟ ಡಾಲಿ ಧನಂಜಯ್‌
  • ನಟ ಶಿವಣ್ಣ ಕೂಡ ಡಾಲಿ ಧನಂಜಯ್‌ ಪ್ರತಿಭೆಗೆ ಬೆಂಬಲ
  • ಧನಂಜಯ್‌ ತಮ್ಮದೇ ಬ್ಯಾನರ್‌ ಅಡಿಯಲ್ಲಿ ಬ್ಲಾಕ್‌ ಬಸ್ಟರ್‌ ಸಿನಿಮಾ
Dolly Dhananjay : ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ ಡಾಲಿ ನಿರ್ಧಾರ! title=

Dolly Dhananjay : ಕನ್ನಡ ಚಿತ್ರರಂಗಕ್ಕೆ ಹೊಸ ಮುಖಗಳು‌ ವಿನೂತನ ಪ್ರಯೋಗದ ಮೂಲಕ ಎಂಟ್ರಿ ಕೊಟ್ಟರೆ ಸಾಕು ಮೂಗು ಮುರಿಯುವ ಜನ ತುಂಬಿ ತುಳುಕುತ್ತಿದ್ದಾರೆ. ಹೀಗಾಗಿಯೇ ಹೊಸಬರು ಚಂದನವನಕ್ಕೆ ಕಾಲಿಡಲು ಹಿಂದೇಟು ಹಾಕೋದು ಉಂಟು. 'ಇದು ದುಡ್ಡಿನ ದುನಿಯಾ' ಎಂಬ ಆರೋಪ ಆಗಾಗ ಕೇಳಿಬಂದಿದ್ದು ಇದೆ. ಆದರೆ ಈ ಮಾತು ಸುಳ್ಳು ಮಾಡಲು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ ನಟ ಡಾಲಿ ಧನಂಜಯ್‌. ಇದೀಗ ಡಾಲಿ ಕೈಗೊಂಡಿರುವ ಆ ಒಂದು ನಿರ್ಧಾರ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ.

ಡಾಲಿ ಧನಂಜಯ್‌ ಹೆಸರು ಕೇಳಿದ ತಕ್ಷಣ ನಮಗೆ ನೆನಪಾಗುವುದು 'ಟಗರು' ಸಿನಿಮಾ. ಯಾಕಂದ್ರೆ 'ಟಗರು' ಚಿತ್ರಕ್ಕೂ ಮುನ್ನ ಡಾಲಿ ಧನಂಜಯ್‌ ಹಲವು ಸಿನಿಮಾಗಳನ್ನ ಮಾಡಿದ್ದರೂ ಬ್ರೇಕ್‌ ಸಿಕ್ಕಿರಲಿಲ್ಲ. ಆದರೆ ನಟ ಶಿವಣ್ಣ ಜೊತೆ ಡಾಲಿ ಧನಂಜಯ್‌ ಕಾಂಬಿನೇಷನ್‌ 'ಟಗರು' ಸಿನಿಮಾದಲ್ಲಿ ಹಿಟ್‌ ಕೊಟ್ಟಿತ್ತು. 'ಟಗರು' ಬಳಿಕ ಡಾಲಿ ಧನಂಜಯ್‌ ಹಿಂದಿರುಗಿ ನೋಡಿದ್ದಿಲ್ಲ.

ಇದನ್ನೂ ಓದಿ : ‘ಕೆಜಿಎಫ್-2’ ದಾಖಲೆ ಯಾರೂ ಮುರಿಯಲು ಆಗಲ್ಲ: ಆಮೀರ್ ಖಾನ್ ಸಿನಿಮಾ ಸೋತಿದ್ದು ಎಲ್ಲಿ..?

ಡಾಲಿ ಗುಣ..!

ನಟ ಶಿವಣ್ಣ ಕೂಡ ಡಾಲಿ ಧನಂಜಯ್‌ ಪ್ರತಿಭೆಗೆ ಬೆಂಬಲವಾಗಿ ನಿಂತವರು. ಈ ವಿಚಾರವನ್ನು ತುಂಬಾ ಮುಕ್ತವಾಗಿ ಧನಂಜಯ್‌ ಹಲವು ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ಆರಂಭದ ದಿನಗಳಲ್ಲಿ ಧನಂಜಯ್‌ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದು ನಟ ಧನಂಜಯ್‌ಗೆ ದೊಡ್ಡ ಪಾಠ ಕಲಿಸಿತ್ತು, ಸಿನಿಮಾ ಪಯಣದಲ್ಲಿ ತನ್ನ ಜೊತೆಗಾರರನ್ನು ಬೆಳೆಸುವ ಗುಣ ಬೆಳೆಸಿತ್ತು. ಇದೇ ಗುಣ ಮೊಳಕೆಯೊಡೆದು ಮತ್ತಷ್ಟು ಒಳ್ಳೆಯ ಕೆಲಸಗಳಿಗೆ ನಾಂದಿ ಹಾಡಿದೆ.

ಹೊಸಬರಿಗೆ ಬೆಂಬಲ

ಧನಂಜಯ್‌ ತಮ್ಮದೇ ಬ್ಯಾನರ್‌ ಅಡಿಯಲ್ಲಿ ಬ್ಲಾಕ್‌ ಬಸ್ಟರ್‌ ಸಿನಿಮಾಗಳನ್ನು ತೆಗೆದು, ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಇಷ್ಟಕ್ಕೇ ಡಾಲಿ ಧನಂಜಯ್‌ ಹಸಿವು ಕಡಿಮೆಯಾಗಿಲ್ಲ, ತನ್ನಂತೆ ಕಷ್ಟದಿಂದ ಸಿನಿಮಾ ರಂಗಕ್ಕೆ ಬಂದವರ ಬೆಂಬಲಕ್ಕೆ ನಿಂತಿದ್ದಾರೆ ಡಾಲಿ. ಅಂದಹಾಗೆ ಬರ್ತ್‌ ಡೇ ಖುಷಿಯಲ್ಲಿ ಸಂಭ್ರಮದ ವಿಚಾರವನ್ನೂ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಧನಂಜಯ್‌. ಟ್ವೀಟ್‌ ಮೂಲಕ ಹೊಸ ಪ್ರಯತ್ನದ ಬಗ್ಗೆ ಬರೆದುಕೊಂಡಿರುವ ಧನಂಜಯ್, ಡಾಲಿ ಪಿಕ್ಚರ್ಸ್ ವತಿಯಿಂದ ಪ್ರತಿ ವರ್ಷ ಕನಿಷ್ಠ 2 ಸಿನಿಮಾ ನಿರ್ಮಿಸುವ ಭರವಸೆ ನೀಡಿದ್ದಾರೆ. ಪ್ರಮುಖವಾಗಿ 2 ಸಿನಿಮಾಗಳಲ್ಲಿ ಒಂದು ಸಿನಿಮಾ ಹೊಸ ಪ್ರತಿಭೆಗಳಿಗೆ ಮೀಸಲಿಡಲಿದ್ದಾರೆ.

ದೊಡ್ಮನೆ ಆದರ್ಶ

ಹೊಸಬರಿಗೆ ಹಲವು ಅವಕಾಶಗಳನ್ನು ನೀಡುತ್ತಾ ಬಂದಿದ್ದು ಡಾ. ರಾಜ್‌ ಕುಟುಂಬ. ಹಲವು ದಶಕಗಳಿಂದ 'ವಜ್ರೇಶ್ವರಿ ಕಂಬೈನ್ಸ್' ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದರು ಡಾ. ರಾಜ್‌ ಕುಟುಂಬಸ್ಥರು. ಇದೇ ಸಂಸ್ಕೃತಿಯನ್ನು ಕೋಟಿ ಕೋಟಿ ಅಭಿಮಾನಿಗಳ ಆದರ್ಶ, ಕರ್ನಾಟಕ ರತ್ನ ಡಾ. ಪುನೀತ್‌ ರಾಜ್‌ಕುಮಾರ್‌ ಮುಂದುವರಿಸಿಕೊಂಡು ಬಂದಿದ್ದರು. ಇದೀಗ ಇಂತಹದ್ದೇ ಮತ್ತೊಂದು ಪ್ರಯತ್ನಕ್ಕೆ ಡಾಲಿ ಧನಂಜಯ್‌ ಮುಂದಾಗಿದ್ದಾರೆ. ಈ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಮತ್ತೊಂದು ಪ್ರಯೋಗಕ್ಕೆ ನಟ ಡಾಲಿ ಧನಂಜಯ್‌ ಮುಂದಾಗಿದ್ದಾರೆ. ಡಾಲಿ ಧನಂಜಯ್‌ ಪ್ರಯತ್ನಕ್ಕೆ ಅಭಿಮಾನಿಗಳು ಮತ್ತು ಕನ್ನಡ ಸಿನಿಮಾ ಪ್ರೇಮಿಗಳು ಬೆನ್ನುತಟ್ಟಿದ್ದಾರೆ.

ಇದನ್ನೂ ಓದಿ : Vikrant Rona Box Office Collection : ಬಾಕ್ಸ್‌ ಆಫಿಸ್‌ನಲ್ಲಿ 'ವಿಕ್ರಾಂತ್‌ ರೋಣ' ಹೊಸ ಹಿಸ್ಟರಿ..! 

ಒಟ್ಟಾರೆ ಹೇಳುವುದಾದರೆ 'ಇಡೀ ಜಗತ್ತೇ ಒಂದು ಹಳ್ಳಿ' ಎಂಬಂತಹ ಈ ಸನ್ನಿವೇಶದಲ್ಲಿ, ಕನ್ನಡ ಚಿತ್ರರಂಗಕ್ಕೆ ಇಂತಹದ್ದೇ ಮತ್ತಷ್ಟು ಪ್ರಯೋಗಗಳು ಬೇಕಿವೆ. ಯಾಕಂದ್ರೆ ಆಧುನಿಕ ಜಗತ್ತಿನಲ್ಲಿ ಕನ್ನಡ ಸಿನಿಮಾರಂಗ ಮತ್ತಷ್ಟು ಬೆಳೆಯಲು, ಜಗದಗಲ ತನ್ನ ಬೇರುಗಳನ್ನು ಚಾಚಲು ಹೊಸ ಪ್ರತಿಭೆಗಳಿಗೆ ಹಾಗೂ ಪ್ರಯೋಗಗಳಿಗೆ ಅವಕಾಶ ದೊರೆಯಬೇಕಿದೆ. ಹಾಗಿದ್ದರೆ ಮಾತ್ರ ಹೊಸ ತಲೆಮಾರಿನ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯ. ಚಂದನವನದ ಜೀವಂತಿಕೆಯನ್ನು ಹಾಗೇ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಲು ಸಾಧ್ಯ. ಈ ಹಾದಿಯಲ್ಲಿ ವಿನೂತನ ಹೆಜ್ಜೆ ಇಟ್ಟಿರುವ ಡಾಲಿ ಧನಂಜಯ್‌ ತಮ್ಮ ಪ್ರಯತ್ನದಲ್ಲಿ ಯಶಸ್ಸು ಕಾಣಲಿ ಎಂಬುದೇ ಎಲ್ಲರ ಆಶಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News