ಕನ್ನಡ ಚಿತ್ರರಂಗದ ಟ್ಯಾಲೆಟೆಂಡ್ ಡೈರೆಕ್ಟರ್, ಲಿರಿಕ್ಸ್ ರೈಟರ್, ಪ್ರೊಡ್ಯೂಸರ್ ಪವನ್ ಒಡೆಯರ್ ಈಗ ಬಾಲಿವುಡ್ ನತ್ತ ಹೆಜ್ಜೆ ಇಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಚಂದನವನದ ಚಿತ್ರರಸಿಕರ ಮಡಿಲಿಗೆ ಗೋವಿಂದಾಯ ನಮಃ, ರಣವಿಕ್ರಮ, ಗೂಗ್ಲಿ, ನಟಸಾರ್ವಭೌಮ, ಸೇರಿದಂತೆ ಹಲವು ಸೂಪರ್ ಹಿಟ್ ಗಳನ್ನು ನೀಡಿರುವ ನಿರ್ದೇಶಕ ಪವನ್ ಒಡೆಯರ್ ನಟನೆಯಲ್ಲಿಯೂ ಛಾಪೂ ಮೂಡಿಸಿದ್ದಾರೆ.ಕಳೆದ 10 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಗೂಗ್ಲಿ ಡೈರೆಕ್ಟರ್ ಈಗ ಡೈರೆಕ್ಟ್ ಆಗಿ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.


ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೊದಲ ಬಾಲಿವುಡ್ ಸಿನಿಮಾಗೆ ನೋಟರಿ ಎಂದು ಟೈಟಲ್ ಇಡಲಾಗಿದ್ದು, ಇದೊಂದು ಕಾಮಿಡಿ ಡ್ರಾಮಾ ಸಿನಿಮಾವಾಗಿದೆ. ಬೆಂಗಾಳಿಯ ಖ್ಯಾತ ಕಲಾವಿದ, ನಿರ್ದೇಶಕ, ಬಿಟೌನ್ ಬ್ಯೂಟೀಸ್ ಗಳಾದ ವಿದ್ಯಾ ಬಾಲನ್, ಅನುಷ್ಕಾ ಶರ್ಮಾ ಹಾಗೂ ರವೀನಾ ಟಂಡನ್ ಜೊತೆ ನಟಿಸಿರುವ.. ಕಹಾನಿ, ಪರಿ ಹಾಗೂ ನೆಟ್ ಪ್ಲಿಕ್ಸ್ ನಲ್ಲಿ ರಿಲೀಸ್ ಆಗಿರುವ ಸೂಪರ್ ಹಿಟ್ ಶೋ ಅರಣ್ಯಕಾದಲ್ಲಿ ನಟಿಸಿರುವ ಪರಂಬ್ರತ ಚಟ್ಟೋಪಾಧ್ಯಾ ನೋಟರಿ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.


ಇದನ್ನೂ ಓದಿ: ಸೌತ್‌ ಇಂಡಿಯಾದಲ್ಲಿ ಹಿಂದಿ ಚಿತ್ರಗಳ ಹವಾ ಕಡಿಮೆಯಾಗಲು ಇದೇ ಮುಖ್ಯ ಕಾರಣ ಎಂದ ನಟ ಯಶ್‌!


ನೋಟರಿ ಸಿನಿಮಾಗೆ ಪವನ್ ಒಡೆಯರ್ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆ ಸಹ ಹೊತ್ತಿದ್ದಾರೆ. ಗುಪ್ತ್, ಮೋಹರಾ, ಶೆರ್ ಷಾ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ಖ್ಯಾತ ನಿರ್ಮಾಪಕ ಶಬೀರ್ ಬಾಕ್ಸ್ ವಾಲ್ ಅವರ ಕಾಶ್ ಎಂಟರ್ ಟೈನ್ ಮೆಂಟ್ ಜೊತೆಗೂಡಿ ಪವನ್ ಒಡೆಯರ್ ತಮ್ಮದೇ ಒಡೆಯರ್ ಮೂವೀಸ್ ಬ್ಯಾನರ್ ನಡಿ ನೋಟರಿ ಚಿತ್ರಕ್ಕೆ ಹಣ ಹಾಕಿದ್ದಾರೆ. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಆಗಸ್ಟ್ ತಿಂಗಳಲ್ಲಿ ಮಧ್ಯಪ್ರದೇಶ ಅಥವಾ ಛತ್ತೀಸ್ ಗಡನಲ್ಲಿ ಶೂಟಿಂಗ್ ಮಾಡಲು ಪ್ಲ್ಯಾನ್ ಹಾಕಿಕೊಂಡಿದ್ದು, ಸದ್ಯದಲ್ಲಿಯೇ ಉಳಿದ ತಾರಾಗಣ ಮತ್ತಿತರ ಅಪ್ ಡೇಟ್ ಗಳನ್ನು ನೀಡಲಿದ್ದಾರೆ.


ಇದನ್ನೂ ಓದಿ: ತೂಫಾನ್‌ ಬಳಿಕ ಈಗ ಸುಲ್ತಾನ್‌ ಹವಾ.. ಬಿಡುಗಡೆಯಾದ ಒಂದೇ ಗಂಟೆಯಲ್ಲಿ ದಾಖಲೆ!!


ಸದ್ಯ ಪವನ್ ಒಡೆಯರ್ ರೆಮೋ ಸಿನಿಮಾ ರಿಲೀಸ್ ಗೆ ಎದುರು ನೋಡ್ತಿದ್ದು, ಮೇ ತಿಂಗಳಲ್ಲಿ ಈ ಚಿತ್ರವನ್ನು ತೆರೆಗೆ ತರುವ ತಯಾರಿಯಲಿದ್ದಾರೆ. ಇದರ ಜೊತೆಗೆ ವಿವಿಧ ದೇಶಗಳಲ್ಲಿ ಪ್ರದರ್ಶನ ಕಂಡು 12 ಪ್ರಶಸ್ತಿಗೆ ಭಜನವಾಗಿರುವ ಡೊಳ್ಳು ಸಿನಿಮಾವನ್ನು ಬಿಗ್ ಸ್ಕ್ರೀನ್ ಗೆ ತರಲಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.