ಕೆಜಿಎಫ್ 1 ರ ಅಭಿಮಾನಿಯಾಗಿದ್ದ ಆ ಹುಡುಗ ಕೆಜಿಎಫ್ 2 ವಿಡಿಯೋ ಎಡಿಟರ್ ಆಗಿದ್ದು ಹೇಗೆ..?

ಸದ್ಯ ಭಾರತೀಯ ಸಿನಿಮಾ ಜಗತ್ತಿನಲ್ಲಿ ಕೆಜಿಎಫ್ 2 ಚಿತ್ರದ್ದೇ ಮಾತು, ಅಷ್ಟರ ಮಟ್ಟಿಗೆ ಈ ಸಿನಿಮಾ ಈಗ ಹವಾ ಮಾಡುತ್ತಿದೆ.ಬಾಲಿವುಡ್ ನಟ ಶಾಹಿದ್ ಕಪೂರ್ ನಟನೆಯ ಜರ್ಸಿ ಸಿನಿಮಾ ಉತ್ತರ ಭಾರತದ ಭಾಗಗಳಲ್ಲಿ ಕೆಜಿಎಫ್ 2 ಚಿತ್ರಕ್ಕೆ ಇರುವ ಹವಾ ನೋಡಿ ಒಂದು ವಾರದವರೆಗೆ ಚಿತ್ರದ ಬಿಡುಗಡೆಯನ್ನು ಮುಂದೂಡಿದೆ.

Written by - Manjunath N | Last Updated : Apr 13, 2022, 05:46 PM IST
  • ಆ ಮೂಲಕ ಕನ್ನಡದ ಚಿತ್ರವೊಂದು ಇದೇ ಮೊದಲ ಬಾರಿಗೆ ಜಾಗತಿಕವಾಗಿ ಸಾಕಷ್ಟು ಸದ್ದು ಮಾಡುವತ್ತ ದಿಟ್ಟ ಹೆಜ್ಜೆಯನ್ನು ಇರಿಸಿದೆ.
  • ಈಗ ಈ ಹುಡುಗನ ಕೌಶಲ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 ಕೆಜಿಎಫ್ 1 ರ ಅಭಿಮಾನಿಯಾಗಿದ್ದ ಆ ಹುಡುಗ ಕೆಜಿಎಫ್ 2 ವಿಡಿಯೋ ಎಡಿಟರ್ ಆಗಿದ್ದು ಹೇಗೆ..?    title=

ಬೆಂಗಳೂರು: ಸದ್ಯ ಭಾರತೀಯ ಸಿನಿಮಾ ಜಗತ್ತಿನಲ್ಲಿ ಕೆಜಿಎಫ್ 2 ಚಿತ್ರದ್ದೇ ಮಾತು, ಅಷ್ಟರ ಮಟ್ಟಿಗೆ ಈ ಸಿನಿಮಾ ಈಗ ಹವಾ ಮಾಡುತ್ತಿದೆ.ಬಾಲಿವುಡ್ ನಟ ಶಾಹಿದ್ ಕಪೂರ್ ನಟನೆಯ ಜರ್ಸಿ ಸಿನಿಮಾ ಉತ್ತರ ಭಾರತದ ಭಾಗಗಳಲ್ಲಿ ಕೆಜಿಎಫ್ 2 ಚಿತ್ರಕ್ಕೆ ಇರುವ ಹವಾ ನೋಡಿ ಒಂದು ವಾರದವರೆಗೆ ಚಿತ್ರದ ಬಿಡುಗಡೆಯನ್ನು ಮುಂದೂಡಿದೆ.

ಇದನ್ನೂ ಓದಿ: ತೂಫಾನ್‌ ಬಳಿಕ ಈಗ ಸುಲ್ತಾನ್‌ ಹವಾ.. ಬಿಡುಗಡೆಯಾದ ಒಂದೇ ಗಂಟೆಯಲ್ಲಿ ದಾಖಲೆ!!

ಅಷ್ಟೇ ಅಲ್ಲದೆ ಕೆಜಿಎಫ್ 2 ಚಿತ್ರಕ್ಕೆ ಸವಾಲಾಗಬಹುದು ಎಂದು ಹೇಳಲಾಗುತ್ತಿದ್ದ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಬಗ್ಗೆ ಕೂಡ ಚಿತ್ರದ ವಿಮರ್ಶೆಗಳು ಸಾಧಾರಣ ಸಿನಿಮಾ ಎಂದು ಹೇಳಿವೆ.ಹಾಗಾಗಿ ಈಗ ನಾಳೆಯಿಂದ ಬಿಡುಗಡೆಯಾಗಲಿರುವ ಕೆಜಿಎಫ್ 2 ಚಿತ್ರದ ಹವಾ ಕೇವಲ ಭಾರತವಷ್ಟೇ ಅಲ್ಲದೆ ಸಾಗರೋತ್ತರ ದೇಶಗಳಲ್ಲಿಯೂ ಮುಂದುವರೆಯಲಿದೆ. ಆ ಮೂಲಕ ಕನ್ನಡದ ಚಿತ್ರವೊಂದು ಇದೇ ಮೊದಲ ಬಾರಿಗೆ ಜಾಗತಿಕವಾಗಿ ಸಾಕಷ್ಟು ಸದ್ದು ಮಾಡುವತ್ತ ದಿಟ್ಟ ಹೆಜ್ಜೆಯನ್ನು ಇರಿಸಿದೆ.

ಇದನ್ನೂ ಓದಿ: ಸೌತ್‌ ಇಂಡಿಯಾದಲ್ಲಿ ಹಿಂದಿ ಚಿತ್ರಗಳ ಹವಾ ಕಡಿಮೆಯಾಗಲು ಇದೇ ಮುಖ್ಯ ಕಾರಣ ಎಂದ ನಟ ಯಶ್‌!

ಈಗ ಚಿತ್ರದ ಕುರಿತಾಗಿ ಹಲವಾರು ಕುತೂಹಲಕರ ಸಂಗತಿಗಳು ಹೊರಬರುತ್ತಿದ್ದು, ಅದರಲ್ಲಿ ಪ್ರಮುಖವಾಗಿ ಕೆಜಿಎಫ್ 1 ಚಿತ್ರದ ಅಭಿಮಾನಿಯಾಗಿದ್ದ ಹುಡುಗನೊಬ್ಬ ಫ್ಯಾನ್ ವಿಡಿಯೋ ಗಳನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದ ಈ ವಿಡಿಯೋಗಳನ್ನು ಗಮನಿಸಿದ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಕೆಜಿಎಫ್ 2 ಚಿತ್ರದ ವಿಡಿಯೋ ಎಡಿಟರ್ ಆಗಿ ನೇಮಕ ಮಾಡಿಕೊಂಡಿದ್ದಾರೆ.ಅಷ್ಟಕ್ಕೂ ಈ ಹುಡುಗನ ವಯಸ್ಸು ಕೇವಲ 19 ವರ್ಷ..!

ಹೌದು. ಕಲಬುರ್ಗಿ ಮೂಲದ ಉಜ್ವಲ್ ಕುಲಕರ್ಣಿ ಎನ್ನುವ ಈ ಹುಡುಗ ಈಗ ಕೆಜಿಎಫ್ 2 ಚಿತ್ರದ ವಿಡಿಯೋ ಎಡಿಟರ್ ಆಗಿ ಕಾರ್ಯ ನಿರ್ವಹಿಸಿರುವ ಕುರಿತಾಗಿ ಸ್ವತಃ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರು ಖಾಸಗಿ ವಾಹಿನಿಗಳಿಗೆ ನೀಡಿರುವ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದಾರೆ.ಈಗ ಈ ಹುಡುಗನ ಕೌಶಲ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News