Kantara Record : ಸದ್ಯ ಎಲ್ಲೆಲ್ಲೂ ಕಾಂತಾರದ ಹವಾ ಜೋರಾಗಿದೆ. ರಿಷಬ್‌ ಶೆಟ್ಟಿ ನಟನೆಯ ಜೊತೆ ಮನಮುಟ್ಟುವಂತಹ ದೃಶ್ಯಗಳು ಸಿನಿ ಪ್ರಿಯರ ಹೃದಯ ಗೆದ್ದಿವೆ. ಕೇವಲ ಜನರನ್ನು ರಂಜಿಸಿದ್ದು ಮಾತ್ರವಲ್ಲ, ಗಲ್ಲಾ ಪೆಟ್ಟಿಗೆಯಲ್ಲೂ ಕಾಂತಾರದ್ದೇ ಗಲಾಟೆ. ಇದು ಹೊಸ ಪ್ಯಾನ್-ಇಂಡಿಯಾ ಚಲನಚಿತ್ರವಾಗಿದ್ದು ಭರ್ಜರಿ ಕಲೆ ಹಾಕುತ್ತಿದೆ. ಯಶ್ ಅಭಿನಯದ ಕೆಜಿಎಫ್ ಮತ್ತು ಕೆಜಿಎಫ್ 2 ಎರಡನ್ನೂ ಹಿಂದಿಕ್ಕಿ ಕಾಂತಾರ ಹೊಸ ದಾಖಲೆ ಬರೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಅಪ್ಪು ನೆನಪು : ಪುನೀತ್ ರಾಜ್​ ಕುಮಾರ್ ಅಭಿನಯದ​ 'ದಿ ಬೆಸ್ಟ್'​ ಸಿನಿಮಾಗಳಿವು!


ಹೊಸ ಬಾಕ್ಸ್ ಆಫೀಸ್ ಹೀರೋ ಆಗಿರುವ ಕಾಂತಾರ ಸಿನಿಮಾ ಕೆಜಿಎಫ್ 1 ಮತ್ತು ಕೆಜಿಎಫ್ 2 ಎರಡೂ ಸಿನಿಮಾಗಳ ರೆಕಾರ್ಡ್‌ನ್ನು ಬ್ರೇಕ್‌ ಮಾಡಿದೆ. ಆದರೆ ಅದು ಬಾಕ್ಸ್ ಆಫೀಸ್ ಸಂಗ್ರಹದ ಮೂಲಕ ಅಲ್ಲ. ಆದರೆ ಟಿಕೆಟ್‌ ಮಾರಾಟ ವಿಚಾರದಲ್ಲಿ ಕಾಂತಾರ ಈ ಹೊಸ ದಾಖಲೆ ಬರೆದಿದೆ. ಕರ್ನಾಟಕದಲ್ಲಿ 77 ಲಕ್ಷ ಟಿಕೆಟ್‌ಗಳನ್ನು ಕಾಂತಾರ ಮಾರಾಟ ಮಾಡಿದೆ, ಇದು ಎರಡೂ ಕೆಜಿಎಫ್ ಚಲನಚಿತ್ರಗಳನ್ನು ಹಿಂದಿಕ್ಕಿದೆ. ಕೆಜಿಎಫ್ ಚಾಪ್ಟರ್ 1 ಕರ್ನಾಟಕದಲ್ಲಿ 75 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿತ್ತು, 72 ಲಕ್ಷ ಟಿಕೆಟ್‌ಗಳನ್ನು ಕೆಜಿಎಫ್ ಚಾಪ್ಟರ್ 2 ಮಾರಾಟ ಮಾಡಿದೆ. 


ವರದಿಗಳ ಪ್ರಕಾರ, ರಿಷಬ್ ಶೆಟ್ಟಿ ಅಭಿನಯದ ಚಿತ್ರವು ಕರ್ನಾಟಕದ ಬಾಕ್ಸ್ ಆಫೀಸ್‌ನಲ್ಲಿ ₹115 ಕೋಟಿ ಗಳಿಸಿದೆ ಮತ್ತು ಅಂತಿಮವಾಗಿ ಕೆಜಿಎಫ್ ಮತ್ತು ಕೆಜಿಎಫ್ 2 ಎರಡರ ಕಲೆಕ್ಷನ್‌ ಅನ್ನು ಹಿಂದಿಕ್ಕುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ರಾಜ್ಯದಲ್ಲಿ 1 ಕೋಟಿ ಫುಟ್‌ಫಾಲ್‌ಗಳನ್ನು ದಾಟಿದ ಯಾವುದೇ ಭಾಷೆಯ ಮೊದಲ ಚಿತ್ರ ಕಾಂತಾರ ಆಗಿದೆ.


ಇದನ್ನೂ ಓದಿ : ಶಾರುಖ್ ಖಾನ್ ಮಗಳಿಗೆ ಸೀರೆ ಉಡಿಸಿದ್ದು ಯಾರು...?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.