ಅಪ್ಪು ನೆನಪು : ಪುನೀತ್ ರಾಜ್​ ಕುಮಾರ್ ಅಭಿನಯದ​ 'ದಿ ಬೆಸ್ಟ್'​ ಸಿನಿಮಾಗಳಿವು!

Puneeth Rajkumar Movies : ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ನಟ ಪುನೀತ್ ರಾಜ್​ ಕುಮಾರ್ ಅನೇಕ ಸೂಪರ್​ ಹಿಟ್​​ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಪುನೀತ್ ರಾಜ್​ ಕುಮಾರ್ ಅಭಿನಯದ​ 'ದಿ ಬೆಸ್ಟ್'​ ಸಿನಿಮಾಗಳು ಇಂತಿವೆ.
 

Puneeth Rajkumar Movies : ಕನ್ನಡ ಚಿತ್ರರಂಗದಲ್ಲಿ ಪವರ್​ ಸ್ಟಾರ್​​ ಪುನೀತ್​ ರಾಜ್​ ಕುಮಾರ್​ ಸಿನಿಮಾಗಳೆಂದರೆ ಅವು ಫ್ಯಾಮಿಲಿ ಓರಿಯೆಂಟೆಡ್‌ ಆಗಿರುತ್ತಿದ್ದವು. ಬೆಳ್ಳಿತೆರೆ ಮೇಲೆ ವಿಜೃಂಭಿಸಿದ ಅಪ್ಪು ಈಗ ನೆನಪು ಮಾತ್ರ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ನಟ ಪುನೀತ್ ರಾಜ್​ ಕುಮಾರ್ ಅನೇಕ ಸೂಪರ್​ ಹಿಟ್​​ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿಯಿಸಿದ್ದಾರೆ. ಪುನೀತ್ ರಾಜ್​ ಕುಮಾರ್ ಅಭಿನಯದ​ 'ದಿ ಬೆಸ್ಟ್'​ ಸಿನಿಮಾಗಳು ಇಂತಿವೆ.

1 /9

2009ರಲ್ಲಿ ಸೂಪರ್ ಹಿಟ್ ಕೊಟ್ಟ ಸಿನಿಮಾ ರಾಮ್. ಇದು ಫ್ಯಾಮಿಲಿ ಕಥೆ ಆಧರಿಸಿದ ಚಿತ್ರ. ಪುನೀತ್ ಹಾಗೂ ಪ್ರಿಯಾಮಣಿ ಜೋಡಿ ಬೆಳ್ಳಿತೆರೆ ಮೇಲೆ ಮೋಡಿ ಮಾಡಿತ್ತು.

2 /9

ಪುನೀತ್​ ಸಿನಿಮಾ ಕೆರಿಯರ್​​​ನಲ್ಲಿ ಆಲ್ ಟೈಮ್ ರೆಕಾರ್ಡ್ ಸಿನಿಮಾ ರಾಜಕುಮಾರ. ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುತ್ತದೆ. 

3 /9

ಪವರ್ ಸ್ಟಾರ್ ಪುನೀತ್‌ ರಾಜ್‌ ಕುಮಾರ್ ಮೊದಲ ಬಾರಿಗೆ ಐಪಿಎಸ್ ಅಧಿಕಾರಿಯಾಗಿ ಕಾಣಿಸಿಕೊಂಡ ಸಿನಿಮಾ ಪೃಥ್ವಿ. 

4 /9

ರೇಡಿಯೋ ಜಾಕಿಯಾಗಿ ಅಪ್ಪು ಕಾಣಿಸಿಕೊಂಡಿದ್ದ ಸಿನಿಮಾ ಮಿಲನ. ಪ್ರಕಾಶ್ ನಿರ್ದೇಶನ ಮಾಡಿದ್ದ ಮಿಲನ ಬರೋಬ್ಬರಿ ಒಂದು ವರ್ಷ ಪ್ರದರ್ಶನ ಕಾಣಿತ್ತು. ಪುನೀತ್ ಸಿನಿ ಜರ್ನಿಯಲ್ಲಿ ಮಿಲನ ಸಿನಿಮಾ ಮೆಗಾ ಹಿಟ್ ತಂದು ಕೊಟ್ಟ ಚಿತ್ರ.

5 /9

ಎಸ್​.ನಾರಾಯಣ್ ನಿರ್ದೇಶನದ 2004ರಲ್ಲಿ ತೆರೆ ಕಂಡಿದ್ದ ಮೌರ್ಯ ಸಿನಿಮಾದಲ್ಲಿ ಮಲಯಾಳಂ ಬೆಡಗಿ ಮೀರಾ ಜಾಸ್ಮಿನ್ ಅಪ್ಪು ಜೊತೆ ರೊಮ್ಯಾನ್ಸ್ ಮಾಡಿದ್ದರು. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ 8 ಕೋಟಿ ಕಲೆಕ್ಷನ್ ಮಾಡಿತ್ತಂತೆ.

6 /9

ಜಾಕಿ ಚಿತ್ರದಲ್ಲಿ ನಟ ಪುನೀತ್ ರಾಜ್​ಕುಮಾರ್​​​ ಅಭಿನಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದರು. 

7 /9

2002ರಲ್ಲಿ 'ಅಪ್ಪು' ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

8 /9

ನಿರ್ದೇಶಕ ಮಹೇಶ್ ಬಾಬು ಅವರು ಚೊಚ್ಚಲ ಸಿನಿಮಾ ಆಕಾಶ್ ಪುನೀತ್ ರಾಜ್ ಕುಮಾರ್ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ಕೊಟ್ಟ ಚಿತ್ರ. 

9 /9

2003ರಲ್ಲಿ ಅಣ್ಣಾವ್ರ ಬ್ಯಾನರ್​​ನಲ್ಲಿ ನಿರ್ಮಾಣವಾದ 'ಅಭಿ' ಸಿನಿಮಾದಲ್ಲಿ ಪುನೀತ್ ಹಾಗೂ ರಮ್ಯಾ ಜೋಡಿ ಮೋಡಿ ಮಾಡಿತ್ತು.