Karataka Dhamanaka : ಮಾರ್ಚ್11 ಮತ್ತು 12ರಂದು ಉತ್ತರ ಕರ್ನಾಟಕದಲ್ಲಿ ಶಿವಣ್ಣ ವಿಜಯ ಯಾತ್ರೆ
Karataka Dhamanaka : ಮಾರ್ಚ್ 8 ರಂದು ತೆರೆ ಕಂಡಿರುವ ಸಿನಿಮಾ `ಕರಟಕ ದಮನಕ` ಈಗಾಗಲೇ ಜನರ ಮನಗೆದ್ದಿದ್ದು ವಿಭಿನ್ನ ರೀತಿಯ ಅಭಿಪ್ರಾಯಗಳು ಕೇಳಿಬರುತ್ತಿವೆ. ಇದೀಗ ಸಿನಿಮಾ ತಂಡ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಲಿದೆ. ಎಲ್ಲೆಲ್ಲಿ ಇಲ್ಲಿದೆ ಮಾಹಿತಿ ತಿಳಿದುಕೊಳ್ಳಿ.
Karataka Dhamanaka team in North Karnataka : ಯೋಗರಾಜ್ ಆಕ್ಷನ್ ಕಟ್ ಹೇಳಿದ ಮೊದಲ ಸಿನಿಮಾ 'ಕರಟಕ ದಮನಕ', ಶಿವಣ್ಣ ಹಾಗೂ ಪ್ರಭದೇವ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ಹಾಗೂ ಪ್ರಭುದೇವಗೆ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿದ ಮೊದಲ ಸಿನಿಮಾ ಇದಾಗಿದ್ದು, ವಿಭಿನ್ನ ಕಾಂಬಿನೇಷನ್ ನಲ್ಲಿ ಸಿನಿಮಾ ಮೂಡಿಬಂದಿದೆ. ದುಬಾರಿ ಸಿನಿಮಾಗಳನ್ನು ನಿರ್ಮಾಣ ಮಾಡುವ ರಾಕ್‌ಲೈನ್ ಪ್ರೊಡಕ್ಷನ್ಸ್ ಅಂತಹ ಈ ಪ್ರಾಜೆಕ್ಟ್‌ಗೆ ಹಣ ಹೂಡಲಾಗಿದೆ.
ವಿಭಿನ್ನ ಸ್ಟಾರ್ ಗಳ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ 'ಕರಟಕ ದಮನಕ' ಫಸ್ಟ್ ಡೇ ಫಸ್ಟ್ ಶೋ ನೋಡಲೇಬೇಕು ಎಂದು ಎಷ್ಟೋ ಜನ ಕಾದು ಕುಳಿತ್ತಿದ್ದರು. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಕಾಂಬಿನೇಷನ್ ಸಿನಿಮಾ 'ಕರಟಕ ದಮನಕ' ಸಿನಿಮಾ ಮೇಲೆ ವೀಕ್ಷಕರಿಗೆ ಎಲ್ಲಿಲ್ಲದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು . ಇದೀಗ ಸಿನಿಮಾ ತೆರೆ ಕಂಡಿದ್ದು, ವಿವಿಧ ರೀತಿಯ ಅಭಿಪ್ರಾಯಗಳು ಕೇಳಿಬಂದಿವೆ.
ಇದನ್ನು ಓದಿ :Koppal : ಮಾರ್ಚ್ 6 ರಿಂದ 9 ರವೆರೆಗೆ ನಡೆದ ತೋಟಗಾರಿಕಾ ಮೇಳದಲ್ಲಿ ದಾಖಲೆಯ ವಹಿವಾಟು
'ಕರಟಕ ದಮನಕ' ಕಥೆಯೇನು? 'ಕರಟಕ ದಮನಕ' ಇದೊಂದು ಕುತಂತ್ರಿ ನರಿಗಳ ಸ್ವಭಾವವನ್ನು ಹೋಲುವ ಕಥೆ. ಶಿವಣ್ಣ ಹಾಗೂ ಪ್ರಭುದೇವ ಇಬ್ಬರೂ ಆ ಕುತಂತ್ರಿ ನರಿಗಳು. ಊರು ತುಂಬಾ ಮೋಸ ಮಾಡುತ್ತಾ? ಕಳ್ಳತನ ಮಾಡುತ್ತಾ ಬದುಕು ಸಾಗಿಸುವ ಕುತಂತ್ರಿಗಳು. ಇನ್ನೊಂದು ಕಡೆ ನೀರಿಗಾಗಿ ಪರದಾಡುತ್ತಿರುವ ಉತ್ತರ ಕರ್ನಾಟಕದ ಒಂದೂರಿನ ಜನರು. ನೀರಿಗಾಗಿ ನಡೆಯುವ ರಾಜಕೀಯ. ನೀರು ಸಿಗದೆ ನಗರಗಳಲ್ಲಿ ಬದುಕು ಕಟ್ಟಿ ಕೊಂಡ ಕೆಲವು ಜನರು. ಏನೇ ಕಷ್ಟ ಬಂದರೂ ಅದೇ ನನ್ನೂರು ಅನ್ನೋ ಮತ್ತೊಂದಿಷ್ಟು ಮಂದಿ. ಇಂತಹ ಊರಿಗೆ ಕರಟಕ ದಮನಕದಂತಹ ಕುತಂತ್ರಿ ನರಿಗಳು ಎಂಟ್ರಿ ಕೊಟ್ಟಾಗ, ಆ ಊರಲ್ಲಿ ಏನಾಗುತ್ತೆ? ಅನ್ನೋದೇ ಈ ಸಿನಿಮಾದ ಕಥೆ
ಶೀಘ್ರದಲ್ಲೇ ವಿಶೇಷ ಉದ್ದೇಶಕ್ಕಾಗಿ ಮುಖಕ್ಕೆ ಅಂಡರ್ವೆಯರ್ ಹಾಕಿಕೊಳ್ಳಲಿದ್ದಾರೆ ನೂರಾರು ಜನ, ಕಾರಣ!
ಇದೀಗ ಸಿನಿಮಾ ತಂಡ ಉತ್ತರ ಕರ್ನಾಟಕಕ್ಕೆ ಭೇಟಿ ನೀಡುತ್ತದೆ ಎನ್ನುವ ಮಾಹಿತಿಯನ್ನು ಯೋಗರಾಜ್ ಭಟ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಈ ಮೂಲಕ ಈ ಭೇಟಿಯನ್ನು ಉತ್ತರ ಕರ್ನಾಟಕದಲ್ಲಿ ಶಿವಣ್ಣ ವಿಜಯ ಯಾತ್ರೆಯನ್ನು ಕರೆದಿದ್ದಾರೆ. ಸಿನಿಮಾ ತಂಡವು ಮಾರ್ಚ್11 ಮತ್ತು 12ರಂದು ಉತ್ತರ ಕರ್ನಾಟಕಕ್ಕೆ ಭೇಟಿ ನೀಡಲಿದೆ. ಮಾರ್ಚ್11 ಸೋಮವಾರದಂದು ಚಿತ್ರದುರ್ಗ, ದಾವಣಗೆರೆ, ಹೊಸಪೇಟೆ ಹಾಗೂ ಬಳ್ಳಾರಿಗೆ ಭೇಟಿ ನೀಡಲಿದ್ದು, ಚಿತ್ರದುರ್ಗ, ದಾವಣಗೆರೆಯಲ್ಲಿ 10ರಿಂದ 12.30 ರವೆರೆಗೆ ಹಾಗೂ ಹೊಸಪೇಟೆ ಹಾಗೂ ಬಳ್ಳಾರಿಯಲ್ಲಿ 3.30 ರಿಂದ 6ಗಂಟೆಯವರೆಗೆ ಇರಲಿದೆ. ಮಾರ್ಚ್12 ಮಂಗಳವಾರದಂದು ಬೆಳಗಾವಿ, ನಿಪ್ಪಾಣಿ, ಹುಬ್ಬಳ್ಳಿ, ಧಾರವಾಡ ಹಾಗೂ ರಾಣಿಬೆನ್ನೂರಿಗೆ ಭೇಟಿ ನೀಡಲಿದ್ದು, ಬೆಳಗಾವಿ, ನಿಪ್ಪಾಣಿ ಯಲ್ಲಿ10 ರಿಂದ 12ರವರೆಗೆ, ಹುಬ್ಬಳ್ಳಿ, ಧಾರವಾಡದಲ್ಲಿ 1.30 ರಿಂದ 4.30ರವರೆಗೆ, ರಾಣಿಬೆನ್ನೂರಿನಲ್ಲಿ 6 ರವರೆಗೆ ಚಿತ್ರ ತಂಡ ಇರಲಿದೆ.
ಈ ಮಾಹಿತಿಯನ್ನು ಯೋಗರಾಜ್ ಭಟ್ ತಿಳಿಸಿದ್ದಾರೆ. ಮತ್ತು ಪೋಸ್ಟರ್ ಒಂದನ್ನು ಇನ್ಸ್ಟಾ ಖಾತೆಯಲ್ಲಿ ಹಾಕಿಕೊಂಡು 'ಭೆಟ್ಟಿ ಆಗಿ ಡೈರೆಕ್ಟ್ ಮಾತಾಡೂಣು' ಎಂದು ಕ್ಯಾಪ್ಷನ್ ಬರೆದು ಕೊಂಡಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ