Karthik Mahesh Wife: ನಟ ಕಾರ್ತಿಕ್​ ಮಹೇಶ್ ಬಿಗ್​ ಬಾಸ್​ ಕನ್ನಡ ಸೀಸನ್​ 10 ರ ವಿನ್ನರ್‌ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಸಿನಿಮಾ ಮತ್ತು ಕಿರುತೆರೆ ಎರಡಲ್ಲೂ ಗುರುತಿಸಿಕೊಂಡಿರುವ ಕಾರ್ತಿಕ್‌ ಸದ್ಯ ಸುದ್ದಿಯಲ್ಲಿದ್ದಾರೆ. ಸಿಂಗಲ್​ ಆಗಿರುವ ಕಾರ್ತಿಕ್‌ ಯಾರನ್ನು ಮದುವೆಯಾಗ್ತಾರೆ ಎಂಬ ವಿಚಾರ ತುಂಬಾ ಚರ್ಚೆಯಾಗುತ್ತಿದೆ. ಅವರ ಜೀವನ ಸಂಗಾತಿ ಯಾರಾಗಬಹುದು ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ. ಈ ಬಗ್ಗೆ ಕಾರ್ತಿಕ್​ ಮಹೇಶ್​ ತಾಯಿ ವೀನಾಕ್ಷಿ ಸುಳಿವು ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಕಾರ್ತಿಕ್​ ಮಹೇಶ್​ ಅವರು ‘ನನ್ನಮ್ಮ ಸೂಪರ್​ ಸ್ಟಾರ್​ ಸೀಸನ್​ 3’ ಕಾರ್ಯಕ್ರಮಕ್ಕೆ ತಮ್ಮ ಅಮ್ಮನ ಜೊತೆ ಅತಿಥಿಯಾಗಿ ಬಂದಿದ್ದಾರೆ. ಈ ವೇಳೆ ನಿರೂಪಕಿ ಸುಷ್ಮಾ ರಾವ್​ ಅವರು ಕಾರ್ತಿಕ್‌ ಅಮ್ಮನ ಬಳಿ Yes Or No ಇರುವ ಬೋರ್ಡ್‌ ನೀಡಿ, ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅದರ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಸೋಶಿಯಲ್​ ಮೀಡಿಯಾದಲ್ಲಿ ಶೇರ್‌ ಮಾಡಿದೆ. 


ಇದನ್ನೂ ಓದಿ: NTR ಜತೆ ಅಲ್ಲು ಅರ್ಜುನ್ ಮಗಳ ಸಿನಿಮಾ, 10 ನಿಮಿಷದ ನಟನೆಗೆ ಇಷ್ಟು ಲಕ್ಷ ಸಂಭಾವನೆ!? 


ಕಾರ್ತಿಕ್​ ಹುಡುಗಿಯರ ಹತ್ತಿರ ಇಷ್ಟು ಚೆನ್ನಾಗಿ ಮಾತನಾಡುತ್ತಾರೆ ಎಂಬುದು ನಿಮಗೆ ಬಿಗ್​ ಬಾಸ್​ ಶೋ ಮೂಲಕವೇ ಗೊತ್ತಾಗಿದ್ದಾ ಎಂದು ಸುಷ್ಮಾ ಕೇಳುತ್ತಾರೆ. ಅದಕ್ಕೆ ಮೀನಾಕ್ಷಿ ಅವರು No ಎಂದು ತೋರಿಸಿದ್ದಾರೆ. ಹಾಗೇನೂ ಇಲ್ಲ. ಹೊರಗಡೆಯೂ ಮಾತನಾಡುತ್ತಾನೆ. ಎಲ್ಲರ ಜೊತೆಯೂ ಫ್ರೆಂಡ್ಲಿ ಇರ್ತಾನೆ ಎಂದಿದ್ದಾರೆ. ಬಳಿಕ ಕಾರ್ತಿಕ್‌ ಜೀವನ ಸಂಗಾತಿ ಆಗುವವರು ಬಿಗ್​ ಬಾಸ್​ ಸೀಸನ್​ 10ರಲ್ಲೇ ಇದ್ದಾರೆ. ಹೌದೋ ಅಲ್ಲವೋ ಎಂದು ಕೇಳಿದಾಗ ಎಂದು Yes ಎಂದು ಮೀನಾಕ್ಷಿ ಅವರು ಉತ್ತರಿಸಿದ್ದಾರೆ. ಇದನ್ನು ನೋಡಿ ಖುದ್ದು ಕಾರ್ತಿಕ್‌ ಅವರೇ ಶಾಕ್‌ ಆಗಿದ್ದಾರೆ. 


 



 


ಬಿಗ್‌ ಬಾಸ್‌ ಆರಂಭದಲ್ಲಿ ಕಾರ್ತಿಕ್‌ ಹಾಗೂ ಸಂಗೀತಾ ನಡುವೆ ಉತ್ತಮ ಬಾಂಧವ್ಯ ಮೂಡಿತ್ತು. ಆದರೆ ನಂತರ ಆದ ಜಗಳಗಳಿಂದ ಸಂಬಂಧ ಮುರಿದು ಬಿತ್ತು. ಕಡೆಕಡೆಗೆ ಶತ್ರುಗಳ ರೀತಿ ಕಾರ್ತಿಕ್‌ ಹಾಗೂ ಸಂಗೀತಾ ವರ್ತಿಸಲು ಆರಂಭಿಸಿದ್ದರು. ಬಿಗ್‌ ಬಾಸ್‌ ಮುಗಿಯುವಾಗ ಕಾರ್ತಿಕ್‌ ಸಿಂಗಲ್‌ ಆಗಿದ್ದರು. ಕಾರ್ತಿಕ್​ ಮಹೇಶ್​ ಅವರ ತಾಯಿ ಯಾರನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಉತ್ತರ ನೀಡಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ. 


ಇದನ್ನೂ ಓದಿ: ಕೂರ್ಗ್ ನಲ್ಲಿ "ಶುಭವಿವಾಹ" ಖ್ಯಾತಿಯ ಕಾವ್ಯ ಶಾಸ್ತ್ರಿ : ಫೋಟೋಸ್ ಇಲ್ಲಿವೆ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.