ಹಲವು ರೀತಿಯ ವೈಶಿಷ್ಟ್ಯಗಳಿಗೆ ಪದೇ ಪದೇ ಕಾರಣವಾಗುತ್ತಿರುವ ರಂಗಸಮುದ್ರ ಸಿನಿಮಾ ಈಗ ಮತ್ತೊಂದು ವಿಶೇಷವಾದ ರೀತಿಯಲ್ಲಿ ಸಿನಿಮಾ ಪ್ರಮೋಷನ್ ಮಾಡಿದೆ. ದೊಡ್ಡ ದೊಡ್ಡ ಕಾರ್ಯಕ್ರಮ ಮಾಡಿ ಆಡಿಯೋ ಬಿಡುಗಡೆ ಮಾಡುವುದು ಈಗಿನ ಸಿನಿಮಾ ತಂಡಗಳ ಟ್ರೆಂಡ್. ಆದರೆ ಅದನ್ನು ಹೊರತುಪಡಿಸಿ ಹೀಗೂ ಬಿಡುಗಡೆ ಮಾಡಬಹುದು ಎಂದು ಪವಿತ್ರ ಕ್ಷೇತ್ರ ಕಾಶಿಗೆ ಸಿನಿ ತಂಡ ತೆರಳಿ ಸಾಂಗ್ ಗೆ ಹೊಂದಿಕೊಂಡಂತಿರುವ ಒಬ್ಬ ನಾಗಸಾಧು ಬಳಿ ಬಿಡುಗಡೆ ಮಾಡಿಸಿರುವುದು ಈ ಸಿನಿಮಾ ತಂಡದ ಟ್ಯಾಲೆಂಟ್ ಬಗ್ಗೆ ಮೆಚ್ಚುಗೆ ಭಾವ ಮೂಡುತ್ತದೆ. ಅಷ್ಟೇ ಅಲ್ಲದೆ ಇನ್ನು ಸಿನಿಮಾ ಹೇಗಿರಬಹುದು ಎಂಬ ಕುತೂಹಲವೂ ಮೂಡುವಂತೆ ಮಾಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Poonam Pandey : ಪೂನಂ ಅವತಾರ ನೋಡಿ ʼಚಡ್ಡಿ ಹಾಕಿದಿ ಏನಮ್ಮಾʼ ಎಂದ ನೆಟ್ಟಿಗರು..! ವಿಡಿಯೋ ನೋಡಿ


ದೇಶದ ಅದ್ಭುತ ಗಾಯಕ ಕೈಲಾಶ್ ಖೇರ್ ಕನ್ನಡದಿಂದ ಹಿಂದಿಗೆ ಸ್ವತಃ ತಾವೇ ಬರೆದುಕೊಂಡು ಬಹಳ ಇಷ್ಟಪಟ್ಟು ಉತ್ಸಾಹದಿಂದ ಹಾಡಿರುವುದು ಈ ಲಿರಿಕಲ್ ಸಾಂಗ್ ನ ವಿಡಿಯೊದಲ್ಲಿ ಕಾಣಬಹುದಾಗಿದೆ. ಕನ್ನಡ ಸಿನಿರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡಿರುವ ರಂಗಾಯಣ ರಘು ಈ ಹಿಂದೆ ಕಾಮಿಡಿ ನಟನೆಯ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಸಂಪೂರ್ಣವಾಗಿ ಕಾಣಸಿಗುವ ರಂಗಾಯಣ ರಘು ಅವರು ವಿಭಿನ್ನ ಹಾಗೂ ವಿಶಿಷ್ಟ ಪಾತ್ರದಲ್ಲಿ ಸಿನಿರಸಿಕರ ಮುಂದೆ ಬರಲಿದ್ದಾರೆ ಎಂದು ಹೇಳಿದೆ ಚಿತ್ರತಂಡ.   


ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ಸಂಪೂರ್ಣ ಭಂಡಾರವನ್ನೇ ಉಪಯೋಗಿಸಿ ಚಿತ್ರೀಕರಿಸಿದ ಮೊದಲ ಸಾಂಗ್ ಇದಾಗಿದ್ದು, ಸಾಂಗ್ ಅತ್ಯಂತ ಕಲರ್ ಪುಲ್ ಆಗಿ ಮೂಡಿಬಂದಿದೆ.


ನಮ್ಮ ಸಾಂಗ್ ಗೆ ಬೇಕಾದ ಸ್ಥಳ ಹಾಗು ಹೊಂದಿಕೊಳ್ಳುವ ಜನ ಬೇಕಿತ್ತು. ಹಾಗಾಗಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಹುಲಿಜಯಂತಿ ಊರನ್ನು ಆಯ್ಕೆ ಮಾಡಿಕೊಂಡೆವು. ಅಲ್ಲಿನ ಮಾಳಿಂಗರಾಯ ಸ್ವಾಮಿ ಜಾತ್ರೆಗೆ ಸರಿಸುಮಾರು 15 ಲಕ್ಷ ಜನರು ಸೇರುತ್ತಾರೆ. ನಮಗೆ ಅದೇ ಬೇಕಾಗಿದ್ದರಿಂದ 4 ತಿಂಗಳು ಕಾಯ್ದು ಆ ಜನಗಳ ಮಧ್ಯೆ ಕಷ್ಟಪಟ್ಟು ಚಿತ್ರೀಕರಿಸಿದ್ದೇವೆ. ಕಷ್ಟಪಡಲು ಕಾರಣ ಸಿನಿಮಾ ವೀಕ್ಷಕರಿಗೆ ಇಷ್ಟವಾಗಬೇಕು ಎಂಬುದು ನಮ್ಮ ಉದ್ದೇಶ ಮತ್ತು ಆಶಯ ಎನ್ನುತ್ತಾರೆ ನಿರ್ದೇಶಕ ರಾಜಕುಮಾರ್ ಅಸ್ಕಿ ಹಾಗು ಕೋರಿಯೋಗ್ರಫರ್ ಬಿ. ಧನಂಜಯ್.


ಸಿನಿಮಾ ಕಥೆ ಕೇಳಿದ ನಿರ್ಮಾಪಕ ಬಜೆಟ್ ಇಷ್ಟೇ ಎಂದು ನಿರ್ದಿಷ್ಟವಾದ ಮೊತ್ತವೊಂದನ್ನು ಹೇಳಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಚಿತ್ರದ ಮೇಕಿಂಗ್ ಮತ್ತು ಈ ಗೀತೆಯನ್ನು ಗಮನಿಸಿದ ನಿರ್ಮಾಪಕ ನಿರ್ದೇಶಕನಿಗೆ ಹೇಳಿದ್ದಿಷ್ಟೇ. ನಿನ್ನ ಕನಸಿನಂತೆ ಚಿತ್ರೀಕರಿಸು. ಯಾವುದಕ್ಕೂ ಕಾಂಪ್ರಮೈಸ್ ಆಗುವುದು ಬೇಡಾ ಎಂದರಂತೆ. ಕೇವಲ ಈ ಹಾಡೊಂದನ್ನು ಚಿತ್ರೀಕರಿಸಲು ವೆಚ್ಚವಾಗಿರುವುದು ಎಷ್ಟೆಂದರೆ, ಈ ಸಿನಿಮಾದ ಹಿಂದಿನ ಬಜೆಟ್ ನ ಅರ್ಧದಷ್ಟು. ಸಾಂಗ್ ನೋಡಿದ ಮೇಲೆ ಮಾಧ್ಯಮ ಮಿತ್ರರು ಹಾಗು ಪ್ರೇಕ್ಷಕರಿಗೆ ತಿಳಿಯುತ್ತದೆ ಎನ್ನುತ್ತಾರೆ ನಿರ್ದೇಶಕ ರಾಜಕುಮಾರ್ ಅಸ್ಕಿ.


ಇನ್ನು ರೈತ ಕುಟುಂಬದಿಂದ ಬಂದು ರಾಜಕೀಯ/ಸಾಮಾಜಿಕ ಕ್ಷೇತ್ರದಲ್ಲಿ ತನ್ನದೆ ಆದ ಹೆಸರು ಮಾಡಿರುವ ಹೊಯ್ಸಳ ಕೊಣನೂರು ಅವರು ಈ ಚಿತ್ರದ ನಿರ್ಮಾಪಕರು. ಹೊಸಬರನ್ನೆ ಒಳಗೊಂಡಿರುವ ಈ ಚಿತ್ರತಂಡಕ್ಕೆ ಬೆನ್ನೆಲುಬಾಗಿದ್ದಾರೆ.


ರಂಗಸಮುದ್ರ ಚಿತ್ರದಲ್ಲಿ 5 ಹಾಡುಗಳಿದ್ದು ಕೈಲಾಶ್ ಕೇರ್, ಬಾಹುಬಲಿ ಖ್ಯಾತಿಯ ಎಮ್ ಎಮ್ ಕೀರವಾಣಿ, ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ ಹಾಗು ದೇಸಿ ಮೋಹನ್ ಧ್ವನಿಯಾಗಿದ್ದಾರೆ.


ಈ 5 ಗೀತೆಗಳಿಗೂ ಸಾಹಿತ್ಯ ಬರೆದಿರುವ ವಾಗೀಶ್ ಚನ್ನಗಿರಿ ತನ್ನ ಮೊದಲ ಸಾಹಿತ್ಯಕ್ಕೆ ಅತ್ಯುನ್ನತ ಗಾಯಕರು ಧ್ವನಿಗೂಡಿರುವುದು ನನಗೊಂದು ಗರ್ವ ಮತ್ತು ಹೆಮ್ಮೆ ಎನ್ನುತ್ತಾರೆ. ದೇಸಿಮೋಹನ್ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಬಿ ಧನಂಜಯ್ ಕೋರಿಯೋಗ್ರಫಿ, ಆರ್.ಗಿರಿ ಅವರ ಛಾಯಾಗ್ರಾಹಣ, ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ.


ಮುಖ್ಯಭೂಮಿಕೆಯಲ್ಲಿ ರಂಗಾಯಣ ರಘು, ಸಂಪತ್ ರಾಜ್, ಕೆವಿಆರ್, ದಿವ್ಯಾ ಗೌಡ, ಮೋಹನ್ ಜುನೇಜಾ, ಗುರುರಾಜ್ ಹೊಸಕೋಟೆ, ಮಿಮಿಕ್ರಿ ಗೋಪಿ, ಉಗ್ರಂ ಮಂಜು, ಸದಾನಂದ, ಮೂಗ್ ಸುರೇಶ್, ಶಂಕರ್ ದಾಸ್ ಬಳ್ಳಾರಿ, ಮಹೇಂದ್ರ, ಸ್ಕಂದ ತೇಜಸ್ ಇನ್ನೂ ಮುಂತಾದವರಿದ್ದಾರೆ.


ಇದನ್ನೂ ಓದಿ: ಪ್ರಭಾಸ್‌ ಪ್ಯಾನ್‌ ಇಂಡಿಯಾ ಸಿನಿಮಾ ಅನೌನ್ಸ್‌..! ʼಆದಿಪುರಷʼ ಚಿತ್ರ ಏನಾಯ್ತು..?


ರಂಗಸಮುದ್ರ ಹೊಸ ತಂಡವಾದರು ಸ್ಯಾಂಡಲ್ವುಡ್ ನಲ್ಲಿ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಗಾಂಧಿನಗರದಲ್ಲಿ ಕೇಳಿಬರುತ್ತಿರುವ ಗುಸುಗುಸು ಸುದ್ದಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.