ನವದೆಹಲಿ : ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಮದುವೆ ಹಬ್ಬ ನಡೆಯುತ್ತಿದೆ. ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ಮದುವೆಯ ನಂತರ ಇದೀಗ ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif)  ಮದುವೆಯದ್ದೇ ಮಾತು. ಇಬ್ಬರೂ ಜೈಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ. ಆದರೆ, ಜೈ ಪುರದಲ್ಲಿ ನಡೆಯುವ ಆದ್ದುರಿ ಸಮಾರಂಭಕ್ಕೂ ಮುನ್ನ ವಿಕ್ಕಿ ಮತ್ತು ಕತ್ರಿನಾ ದಂಪತಿಯಾಗಲಿದ್ದಾರೆ ಎನ್ನುವುದು ಹೊಸ ವಿಷಯ. ಅಂದರೆ ಇಬ್ಬರೂ ರಾಜಸ್ಥಾನಕ್ಕೆ ಹೋಗುವ ಮೊದಲೇ ರಹಸ್ಯವಾಗಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಮುಂಬೈನಲ್ಲಿ ನಡೆಯಲಿದೆ ಕೋರ್ಟ್ ಮ್ಯಾರೇಜ್ :  
ವಿಕ್ಕಿ ಕೌಶಲ್  (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಮುಂದಿನ ವಾರ ಕೋರ್ಟ್ ಮ್ಯಾರೇಜ್ ಆಗಬಹುದು.  ಜೈಪುರದಲ್ಲಿ  ಈ ಜೋಡಿಯ ರಾಯಲ್ ವೆಡ್ಡಿಂಗ್‌ (Katrina Kaif and Vicky Kaushal Wedding) ನೆರವೇರಲಿದೆ. ಇದಕ್ಕೂ ಮೊದಲು ಅಂದರೆ ಜೈಪುರಕ್ಕೆ ತೆರಳುವ ಮೊದಲು, ಮುಂಬೈನಲ್ಲಿ ಇವರಿಬ್ಬರ ಕೋರ್ಟ್ ಮ್ಯಾರೇಜ್ ನೆರವೇರಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಈ ಜೋಡಿ ಮದುವೆಯ ಎಲ್ಲಾ ಸಿದ್ದತೆ ನಡೆಸುತ್ತಿದೆ. 


ಇದನ್ನೂ ಓದಿ : ಡೇಟಿಂಗ್ ವೆಬ್‌ಸೈಟ್‌ನಲ್ಲಿ ಬಾಲಿವುಡ್ ನಟಿ ಲಾರಾ ದತ್ತಾ ಪ್ರೋಪೈಲ್ ..! ನಟಿ ಹೇಳಿದ್ದೇನು ಗೊತ್ತಾ?


ಜೈಪುರದಲ್ಲಿ ಎರಡು ಮದುವೆಗಳು ನಡೆಯಲಿವೆ :
ಮೂಲಗಳ ಪ್ರಕಾರ, ಮುಂಬೈನಲ್ಲಿ (Mumbai) ಮದುವೆಯಾದ ನಂತರ ಜೈಪುರದಲ್ಲಿ ಅದ್ದೂರಿ ವಿವಾಹ ಸಮಾರಂಭ ಆಯೋಜನೆಯಾಗಲಿದೆ.  ಆದರೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ವಿಕ್ಕಿ ಮತ್ತು ಕತ್ರಿನಾ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸುದ್ದಿಯನ್ನು ಖಚಿತಪಡಿಸಿಲ್ಲ. 


 ಸಿದ್ಧವಾಗಿದೆ ಅತಿಥಿಗಳ ಪಟ್ಟಿ :
ಏತನ್ಮಧ್ಯೆ, ವಿಕ್ಕಿ ಮತ್ತು ಕತ್ರಿನಾ ಅವರ ಮ್ಯಾನೇಜರ್‌ಗಳು ಅತಿಥಿಗಳಿಗಾಗಿ ಬೃಹತ್ ಬಾಡಿಗೆ ಕಾರುಗಳನ್ನು ಬುಕ್ ಮಾಡಿದ್ದಾರೆ ಎಂದು ವರದಿಯಾಗಿವೆ. ಕುಟುಂಬ ಸದಸ್ಯರನ್ನು ಹೊರತುಪಡಿಸಿ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಸ್ನೇಹಿತರು ಮತ್ತು ಚಿತ್ರರಂಗದ ಆಪ್ತ ಸ್ನೇಹಿತರನ್ನು ಮದುವೆಗೆ ಆಮಂತ್ರಿಸಲಿದ್ದಾರೆ. ಅವರ ಅತಿಥಿ ಪಟ್ಟಿಯಲ್ಲಿ ವರುಣ್ ಧವನ್, ರೋಹಿತ್ ಶೆಟ್ಟಿ (Rohit Shetty), ಕರಣ್ ಜೋಹರ್ (Karan Johar), ಅಲಿ ಅಬ್ಬಾಸ್ ಜಾಫರ್, ಕಬೀರ್ ಖಾನ್, ಮಿನಿ ಮಾಥುರ್, ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ಮತ್ತು ನತಾಶಾ ದಲಾಲ್ ಸೇರಿದ್ದಾರೆ.  


ಇದನ್ನೂ ಓದಿ :Aamir Khan : ರಾಕಿ ಭಾಯ್ ಬಳಿ ಕ್ಷಮೆ ಕೇಳಿದ ಅಮೀರ್ ಖಾನ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.