Vicky Katrina Wedding : ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಗೆ ಹೋಗಲ್ಲ ಸಲ್ಮಾನ್ ಖಾನ್! ಯಾಕೆ?

ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮಾಡುವೆ ಸುದ್ದಿ ಜೋರಾಗಿ ಹರಿದಾಡುತ್ತಿದೆ ಮತ್ತು ಈಗ ಅವರಿಬ್ಬರೂ ತಮ್ಮ ಮದುವೆಯ ದಿನಾಂಕವನ್ನು ಘೋಷಿಸುವುದನ್ನ ಅಭಿಮಾನಿಗಳು ಕಾಯುತ್ತಿದ್ದಾರೆ.

Written by - Channabasava A Kashinakunti | Last Updated : Nov 16, 2021, 03:20 PM IST
  • ವಿಕ್ಕಿ-ಕತ್ರಿನಾ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ!
  • ಸಲ್ಮಾನ್ ಖಾನ್ ರೋಕಾ ಸಮಾರಂಭಕ್ಕೆ ಹೋಗಲಿಲ್ಲ!
  • ಕತ್ರಿನಾ ಮದುವೆಗೆ ಸಲ್ಮಾನ್ ಯಾಕೆ ಬರಲ್ಲ?
Vicky Katrina Wedding : ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಗೆ ಹೋಗಲ್ಲ ಸಲ್ಮಾನ್ ಖಾನ್! ಯಾಕೆ? title=

ನವದೆಹಲಿ : ಇಂದಿನಿಂದ ಮದುವೆಯ ಸೀಸನ್ ಆರಂಭವಾಗಿದ್ದು. ಇಲ್ಲಿಯವರೆಗೆ ಅನೇಕ ಸೆಲೆಬ್ರಿಟಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಾಗೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮಾಡುವೆ ಸುದ್ದಿ ಜೋರಾಗಿ ಹರಿದಾಡುತ್ತಿದೆ ಮತ್ತು ಈಗ ಅವರಿಬ್ಬರೂ ತಮ್ಮ ಮದುವೆಯ ದಿನಾಂಕವನ್ನು ಘೋಷಿಸುವುದನ್ನ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ವರ್ಷದ ಡಿಸೆಂಬರ್‌ನಲ್ಲಿ ಈ ಇಬ್ಬರು ಸ್ಟಾರ್ ನಟರು ಏಳು ಸುತ್ತು ಹೆಜ್ಜೆ ಹಾಕಲಿದ್ದಾರೆ. 

ವಿಕ್ಕಿ-ಕತ್ರಿನಾ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ!

ನಮ್ಮ ಪಾಲುದಾರ ವೆಬ್‌ಸೈಟ್ DNA ವರದಿಯ ಪ್ರಕಾರ, ಇಬ್ಬರೂ ರಾಜಸ್ಥಾನದ ಹೋಟೆಲ್ ಸಿಕ್ಸ್ ಸೆನ್ಸ್ ಫೋರ್ಟ್‌ನಲ್ಲಿ ಮದುವೆ(Vicky Katrina Wedding)ಯಾಗಬಹುದು. ಈ ಮದುವೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರೂ ಮಾಧ್ಯಮಗಳ ಪ್ರಕಾರ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಈ ಮದುವೆಗೆ ಹಾಜರಾಗುವುದಿಲ್ಲ. ನಿಸ್ಸಂಶಯವಾಗಿ ಸಲ್ಮಾನ್ ಮದುವೆಗೆ ಏಕೆ ಹೋಗುತ್ತಿಲ್ಲ ಎಂದು ನೀವು ಆಶ್ಚರ್ಯ ಪಡುತ್ತಿರಬೇಕು. ಯಾಕೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ : Nora Fatehi: ನೋರಾ ಫತೇಹಿ ಮೋಹಕ ಶೈಲಿಗೆ ಮನಸೋತ ಫ್ಯಾನ್ಸ್

ಸಲ್ಮಾನ್ ಖಾನ್ ರೋಕಾ ಸಮಾರಂಭಕ್ಕೆ ಹೋಗಲಿಲ್ಲ!

ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ಇತ್ತೀಚೆಗೆ ಚಲನಚಿತ್ರ ನಿರ್ಮಾಪಕ ಕಬೀರ್ ಅವರ ಮನೆಯಲ್ಲಿ ರೋಕಾ ಸಮಾರಂಭವಿತ್ತು, ಅದರಲ್ಲಿ ಸಲ್ಮಾನ್ ಖಾನ್(Salman Khan) ಹೋಗಿರಲಿಲ್ಲ. 'ಟ್ಯೂಬ್‌ಲೈಟ್' ಚಿತ್ರದ ನಂತರ ಸಲ್ಮಾನ್ ಖಾನ್ ಮತ್ತು ಕಬೀರ್ ಖಾನ್ ನಡುವಿನ ಸಂಬಂಧ ಹಳಸಿತ್ತು ಎನ್ನಲಾಗಿದೆ. ಆದರೆ ಕಬೀರ್ ಖಾನ್ ಮದುವೆಗೆ ಬಾರದಿರುವುದಕ್ಕೆ ಕಾರಣ ಇರುವುದಿಲ್ಲ.

ಕತ್ರಿನಾ ಮದುವೆಗೆ ಸಲ್ಮಾನ್ ಯಾಕೆ ಬರಲ್ಲ?

ಸಲ್ಮಾನ್ ಖಾನ್ ಅವರ ಗೆಳತಿ ಕತ್ರಿನಾ ಕೈಫ್(Katrina Kaif) ಡಿಸೆಂಬರ್‌ನಲ್ಲಿ ವಿವಾಹವಾದರೆ, ಸಲ್ಮಾನ್ ಖಾನ್ ಆ ಸಮಯದಲ್ಲಿ 'ಟೈಗರ್ -3' ಚಿತ್ರೀಕರಣದಲ್ಲಿ ಬ್ಯುಸಿಯಾಗಿರುತ್ತಾರೆ. ಸಲ್ಮಾನ್ ಖಾನ್ ಅವರ ಆಪ್ತ ಮೂಲಗಳು, 'ಸಲ್ಮಾನ್ 'ಟೈಗರ್-3' ಮತ್ತು 'ಪಠಾಣ್' ಚಿತ್ರದ ಪ್ರಮುಖ ಭಾಗವನ್ನು ಚಿತ್ರೀಕರಿಸಲಿದ್ದಾರೆ. ಆದರೆ ಶಾರುಖ್ ಖಾನ್ ಖಾನ್ ಅವರು ತಮ್ಮ ವೈಯಕ್ತಿಕ ಜೀವನದಲ್ಲಿನ ಪ್ರಕ್ಷುಬ್ಧತೆಯಿಂದ ಶೂಟಿಂಗ್ ನಿಲ್ಲಿಸಬೇಕಾಯಿತು. ಈಗ ಡಿಸೆಂಬರ್‌ನಲ್ಲಿ ಶೂಟಿಂಗ್ ಆರಂಭಿಸುವಂತೆ ಕೇಳಿಕೊಂಡಿದ್ದಾರೆ. ಹಾಗಾಗಿ ಶೂಟಿಂಗ್ ದಿನಾಂಕಗಳು ಕತ್ರಿನಾ ಕೈಫ್ ಅವರ ಮದುವೆಯೊಂದಿಗೆ ಹೊಂದಾಣಿಕೆ ಆಗದಿರಬಹುದು.

ಇದನ್ನೂ ಓದಿ : Rajkummar Rao And Patralekhaa Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜಕುಮಾರ್ ರಾವ್ - ಪತ್ರಲೇಖಾ, ಇಲ್ಲಿವೆ ಛಾಯಾಚಿತ್ರಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News