Vicky Kaushalಗಿಂತಲೂ ಸಿರಿವಂತೆ Katrina Kaif, ಯಾರ ಬಳಿ ಎಷ್ಟು ಸಂಪತ್ತು?
Vicky Katrina Weding: ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ ವಿವಾಹದ ಸುದ್ದಿಗಳ ಮಧ್ಯೆ ಇದೀಗ ಅವರ ಜೀವನಶೈಲಿಗೆ ಸಂಬಂಧಿಸಿದ ಕೆಲ ಸುದ್ದಿಗಳು ಕೂಡ ತುಂಬಾ ವೈರಲ್ ಆಗುತ್ತಿವೆ. ಇಬ್ಬರ ವಯಸ್ಸು ಮತ್ತು ಗಳಿಕೆಯ ಅಂತರದ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.
ನವದೆಹಲಿ: Vicky Kaushal And Katrina Kaif Wedding - ಬಾಲಿವುಡ್ ತಾರೆಯರಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ (VicKat Wedding). ಈ ಜೋಡಿಗೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ತಮ್ಮ ಸಂಬಂಧದ ಬಗ್ಗೆ ಸದಾ ಮೌನ ವಹಿಸಿದ್ದ ಈ ಉಭಯ ತಾರೆಯರು, ಮದುವೆಯನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಇವರುಗಳು ಜೊತೆಯಾಗಿ ಸಪ್ತಪದಿ ತುಳಿಯುವ ಸುದ್ದಿಗಳ ಜೊತೆಗೆ ಇದೀಗ ಇಬ್ಬರ ವಯಸ್ಸು, ಸಂಪಾದನೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಇಂದು ನಾವು ಇದಕ್ಕೆ ಸಂಬಂಧಿಸಿದ ಕೆಲ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.
ವಿಕ್ಕಿ ಕತ್ರಿನಾ ವಯಸ್ಸಿನ ವ್ಯತ್ಯಾಸ (Katrina Kaif Marriage)
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡಿದೆ. ಇಬ್ಬರ ಜೀವನಶೈಲಿ ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಪ್ರತಿಯೊಬ್ಬರೂ ಇಬ್ಬರ ಜೀವನದ ಬಗ್ಗೆ ತಿಳಿದುಕೊಳ್ಳಲು ಕಾತರರಾಗಿದ್ದಾರೆ. ಹೀಗಾಗಿ ಮೊದಲು ಇಬ್ಬರ ವಯಸ್ಸಿನಿಂದಲೂ ಪ್ರಾರಂಭಿಸೋಣ. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ವಯಸ್ಸಿನಲ್ಲಿ ಐದು ವರ್ಷಗಳ ಅಂತರವಿದೆ. ಕತ್ರಿನಾ ಕೈಫ್ ವಯಸ್ಸು 38 ವರ್ಷವಾದರೆ, ವಿಕ್ಕಿ ವಯಸ್ಸು ಕೇವಲ 33 ವರ್ಷಗಳು.
ವಿಕ್ಕಿ-ಕತ್ರಿನಾ ಬಾಲಿವುಡ್‌ಗೆ ಪದಾರ್ಪಣೆ (Vicky Kaushal Marriage)
ವಿಕ್ಕಿ ಕೌಶಲ್ ಅವರನ್ನು ಮದುವೆಯಾದ ನಂತರ, ಕತ್ರಿನಾ ಕೈಫ್ ಅವರ ಹೆಸರು ಕೂಡ ಅವರ ಪತಿಗಿಂತ ಹಿರಿಯ ತಾರೆಯರ ಪಟ್ಟಿಯಲ್ಲಿ ಸೇರಿಕೊಳ್ಳಲಿದೆ. ವಯಸ್ಸಿನ ಹೊರತಾಗಿ, ಕತ್ರಿನಾ ಅವರ ಸಿನಿಮಾ ವೃತ್ತಿಜೀವನವೂ ವಿಕ್ಕಿಗಿಂತ ದೊಡ್ಡದಾಗಿದೆ. ಕತ್ರಿನಾ 2003 ರಲ್ಲಿ 'ಬೂಮ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಅಂದರೆ ಅವರು ಬಾಲಿವುಡ್‌ನಲ್ಲಿ 18 ವರ್ಷಗಳನ್ನು ಪೂರೈಸಿದ್ದಾರೆ. ಮತ್ತೊಂದೆಡೆ, ವಿಕ್ಕಿ ಕೌಶಲ್ 2012 ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.
ಇದನ್ನೂ ಓದಿ-Arjun Kapoor surprises Malaika Arora: ಸಮುದ್ರತೀರದಲ್ಲಿ ಮಲೈಕಾ ಅರೋರಾ ಜತೆ ಅರ್ಜುನ್ ಕಪೂರ್ ಡೇಟಿಂಗ್!
ಕತ್ರಿನಾ ನಿವ್ವಳ ಮೌಲ್ಯ (Katrina Kaif Net Worth)
ಕತ್ರಿನಾ ಕೈಫ್ ಬಾಲಿವುಡ್ ನ ಟಾಪ್ ನಟಿ. ಸಿನಿಮಾಗಳಲ್ಲಿ ಅವರಿದ್ದರೆ ಯಶಸ್ಸು ಗ್ಯಾರಂಟಿ. ಯಶಸ್ವಿ ಚಲನಚಿತ್ರ ನಟಿಯಾಗಿರುವುದರ ಜೊತೆಗೆ, ಕತ್ರಿನಾ ತನ್ನದೇ ಆದ ಸೌಂದರ್ಯ ಬ್ರಾಂಡ್ ಅನ್ನು ಸಹ ನಡೆಸುತ್ತಾಳೆ, ಅದನ್ನು 'ಕೆ ಬ್ಯೂಟಿ' ಎಂದು ಹೆಸರಿಸಲಾಗಿದೆ. ಅಂದರೆ ಕತ್ರಿನಾ ಕೇವಲ ಚಿತ್ರಗಳಿಂದ ಮಾತ್ರವಲ್ಲದೆ ಇತರ ಸ್ಥಳಗಳಿಂದಲೂ ಹಣ ಗಳಿಕೆ ಮಾಡುತ್ತಾಳೆ. ನಾವು ನಟಿಯ ನಿವ್ವಳ ಮೌಲ್ಯದ ಬಗ್ಗೆ ಹೇಳುವುದಾದರೆ, ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಕತ್ರಿನಾ ಕೈಫ್ ಅವರ ನಿವ್ವಳ ಮೌಲ್ಯ 220 ಕೋಟಿ ರೂ.ಗಳಾಗಿದೆ.
ಇದನ್ನೂ ಓದಿ-Pooja Hegde:ಮಾಲ್ಡೀವ್ಸ್‌ನಲ್ಲಿ ಪೂಜಾ ಹೆಗ್ಡೆ... ಬೀಚ್ ನಲ್ಲಿ ಬೆಡಗಿಯ ಫೋಟೋಶೂಟ್ ಗೆ ಫ್ಯಾನ್ಸ್ ಫಿದಾ!
ವಿಕ್ಕಿ ಕೌಶಲ್ ನಿವ್ವಳ ಮೌಲ್ಯ (Vicky Kaushal Net Worth)
ವಿಕ್ಕಿ ಕೌಶಲ್ ಅವರನ್ನು ಬಾಲಿವುಡ್‌ನ ಅತ್ಯುತ್ತಮ ನಟ ಎಂದು ಪರಿಗಣಿಸಲಾಗಿದೆ. ತಮ್ಮ ಚಿತ್ರರಂಗದಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ವಿಕ್ಕಿ ಕಡಿಮೆ ಸಮಯದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಅಷ್ಟೇ ಅಲ್ಲ ಈ ನಟ ಕಡಿಮೆ ಸಮಯದಲ್ಲಿ ರಾಷ್ಟ್ರ ಪ್ರಶಸ್ತಿಯನ್ನೂ ಕೂಡ ಪಡೆದಿದ್ದಾರೆ. ನಟ 2012 ರಲ್ಲಿ 'ಲವ್ ಶವ್ ತೆ ಚಿಕನ್ ಖುರಾನಾ' ಮೂಲಕ ತಮ್ಮ ಬಾಲಿವುಡ್ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಆದರೆ 2015ರಲ್ಲಿ ತೆರೆಕಂಡ ‘ಮಸಾನ್’ ಚಿತ್ರದಿಂದ ಅವರಿಗೆ ಮನ್ನಣೆ ದೊರೆತಿದೆ. ನಟನ ನಿವ್ವಳ ಮೌಲ್ಯದ ಕುರಿತು ಹೇಳುವುದಾದರೆ, ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ವಿಕ್ಕಿ ಕೌಶಲ್ ಅವರ ನಿವ್ವಳ ಮೌಲ್ಯ 24 ಕೋಟಿ ರೂ.
ಇದನ್ನೂ ಓದಿ-Jacquiline Fernandez ವಿದೇಶ ಯಾತ್ರೆಗೆ ತಡೆ, ಲುಕ್ ಔಟ್ ಸರ್ಕ್ಯೂಲರ್ ಹೊರಡಿಸಿತ್ತು ED
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ