Jacquiline Fernandez ವಿದೇಶ ಯಾತ್ರೆಗೆ ತಡೆ, ಲುಕ್ ಔಟ್ ಸರ್ಕ್ಯೂಲರ್ ಹೊರಡಿಸಿತ್ತು ED

ED Stopped Jacqueline From Travelling Dubai - ಖ್ಯಾತ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ED ಅಧಿಕಾರಿಗಳು ಮುಂಬೈ ವಿಮಾನದಲ್ಲಿ ತಡೆ ಹಿಡಿದಿದ್ದಾರೆ. ಜಾಕ್ವೆಲಿನ್ ದುಬೈಗೆ ತೆರಳಬೇಕಿತ್ತು.

Written by - Nitin Tabib | Last Updated : Dec 5, 2021, 08:32 PM IST
  • ಜಾಕ್ವೆಲಿನ್ ಫರ್ನಾಂಡಿಸ್ ಳನ್ನು ತಡೆ ಹಿಡಿದ ED ಅಧಿಕಾರಿಗಳು
  • ಜಾಕ್ವೆಲಿನ್ ಮುಂಬೈನಿಂದ ದುಬೈಗೆ ಪ್ರಯಾಣ ಬೆಳೆಸಬೇಕಿತ್ತು.
  • ಲುಕ್ ಔಟ್ ಸರ್ಕ್ಯೂಲರ್ ಜಾರಿಯಾದ ಹಿನ್ನೆಲೆ ಈ ತಡೆ ನೀಡಲಾಗಿದೆ.
Jacquiline Fernandez ವಿದೇಶ ಯಾತ್ರೆಗೆ ತಡೆ, ಲುಕ್ ಔಟ್ ಸರ್ಕ್ಯೂಲರ್ ಹೊರಡಿಸಿತ್ತು ED title=
Money Laundring Case (File Photo)

ನವದೆಹಲಿ: ED Stopped Jacqueline From Travelling Dubai - ಖ್ಯಾತ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಬಗ್ಗೆ ಮಹತ್ವದ ಸುದ್ದಿಯೊಂದು ಪ್ರಕಟಗೊಂಡಿದೆ.  ಮುಂಬೈನ ವಿಮಾನ ನಿಲ್ದಾಣದಲ್ಲಿ (Mumbai Airport) ED (Enforcement Directorate) ಅಧಿಕಾರಿಗಳು ಜಾಕ್ವೆಲಿನ್ ಅವರನ್ನು ತಡೆಹಿಡಿದಿದ್ದಾರೆ. ಲುಕ್ ಔಟ್ ಸುತ್ತೋಲೆ ಹಿನ್ನೆಲೆ  ನಟಿಯನ್ನು ತಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಜಾಕ್ವೆಲಿನ್ ಮುಂಬೈನಿಂದ ದುಬೈಗೆ (Dubai) ಹೋಗುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ಆಕೆಯನ್ನು ತಡೆಹಿಡಿಯಲಾಗಿದೆ. 

ಇದನ್ನೂ ಓದಿ-money laundering case : 200 ಕೋಟಿ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿ ಈ ನಟಿಯರಿಗೆ ಉಡುಗೊರೆ ನೀಡಿದ್ದಾನಂತೆ ಐಶಾರಾಮಿ ಕಾರು

ಅಕ್ಟೋಬರ್ ಕೊನೆಯ ವಾರದಲ್ಲಿ ಜಾಕ್ವೆಲಿನ್ ವಿರುದ್ಧ ಇಡಿ LOC (Look Out Circular) ಹೊರಡಿಸಿತ್ತು ಎಂಬುದು ಇಲ್ಲಿ ಗಮನಾರ್ಹ. 200 ಕೋಟಿ ಸುಲಿಗೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ (Suresh Chandrashekhar) ಅವರನ್ನು ಎರಡು ಬಾರಿ ವಿಚಾರಣೆ ನಡೆಸಲಾಗಿದೆ. ಸುಕೇಶ್ ಜಾಕ್ವೆಲಿನ್ ಗೆ ಕೋಟಿಗಟ್ಟಲೆ ಗಿಫ್ಟ್ ಕೊಟ್ಟಿದ್ದಾರೆ. ಇದರಲ್ಲಿ BMW ಕಾರು, ಅರೇಬಿಯನ್ ಕುದುರೆ, 4 ಬೆಕ್ಕುಗಳು, ಫೋನ್, ಆಭರಣ ಸೇರಿದಂತೆ ಸಾಕಷ್ಟು ಹಣ ಜಾಕ್ವೆಲಿನ್ ಖಾತೆಗೆ ವರ್ಗಾವಣೆಯಾಗಿದೆ.

ಇದನ್ನೂ ಓದಿ-ಸತತ ನಾಲ್ಕನೇ ಬಾರಿಗೆ ಇಡಿ ಸಮನ್ಸ್ ನಿಂದ ತಪ್ಪಿಸಿಕೊಂಡ 'ಗಡಂಗ್ ರಕ್ಕಮ್ಮಾ'

ಸುಕೇಶ್ ಅವರ 200 ಕೋಟಿ ಅಕ್ರಮ ಹಣ ವರ್ಗಾವಣೆ (Money Laundring Case) ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ನಿನ್ನೆಯಷ್ಟೇ ನ್ಯಾಯಾಲಯಕ್ಕೆ 7000 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ. ಜಾಕ್ವೆಲಿನ್ ಮತ್ತು ಸುಖೇಶ್ ಕೂಡ ಕೆಲಕಾಲ ಸಂಬಂಧದಲ್ಲಿದ್ದರು ಎನ್ನಲಾಗಿದೆ. ವಿಶೇಷವೆಂದರೆ ಈ ಪ್ರಕರಣದ ತನಿಖೆ ಮುಗಿಯುವವೆಗೂ ಜಾಕ್ವೆಲಿನ್ ವಿದೇಶಕ್ಕೆ ಹೋಗುವಂತಿಲ್ಲ ಎಂದು ED ಈಗಾಗಲೇ ಸ್ಪಷ್ಟಪಡಿಸಿದೆ.  ಈ ಕಾರಣಕ್ಕಾಗಿ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ.

ಇದನ್ನೂ ಓದಿ-Money Laundering Case : ₹200 ಕೋಟಿ ಹಣ ವರ್ಗಾವಣೆ ಪ್ರಕರಣದಲ್ಲಿ ನೋರಾ ಫತೇಹಿ ಹೆಸರು : ನಟಿ ವಿಚಾರಣೆ ನಡೆಸುತ್ತಿರುವ ED

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News