Arjun Kapoor surprises Malaika Arora: ಸಮುದ್ರತೀರದಲ್ಲಿ ಮಲೈಕಾ ಅರೋರಾ ಜತೆ ಅರ್ಜುನ್ ಕಪೂರ್ ಡೇಟಿಂಗ್!

Arjun Kapoor and Malaika Arora: ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಮಾಲ್ಡೀವ್ಸ್‌ನಲ್ಲಿ ತಮ್ಮ ಕಾಲ ಕಳೆಯುತ್ತಿದ್ದಾರೆ. ಈ ವೇಳೆ ಅರ್ಜುನ್ ತಮ್ಮ ಗೆಳತಿಗೆ ಡೇಟ್ ನೈಟ್‌ನೊಂದಿಗೆ ಸರ್ಪ್ರೈಸ್ ನೀಡಿದ್ದಾರೆ.

Edited by - Zee Kannada News Desk | Last Updated : Dec 7, 2021, 10:30 AM IST
  • ಸಮುದ್ರತೀರದಲ್ಲಿ ಮಲೈಕಾ ಅರೋರಾ ಜತೆ ಅರ್ಜುನ್ ಕಪೂರ್ ಡೇಟಿಂಗ್
  • ಮಾಲ್ಡೀವ್ಸ್‌ನಲ್ಲಿ ತಮ್ಮ ಕಾಲ ಕಳೆಯುತ್ತಿ ಬಾಲಿವುಡ್ ನಟ-ನಟಿ
  • ಗೆಳತಿಗೆ ಡೇಟ್ ನೈಟ್‌ನೊಂದಿಗೆ ಸರ್ಪ್ರೈಸ್ ನೀಡಿದ ಅರ್ಜುನ್ ಕಪೂರ್
Arjun Kapoor surprises Malaika Arora: ಸಮುದ್ರತೀರದಲ್ಲಿ ಮಲೈಕಾ ಅರೋರಾ ಜತೆ ಅರ್ಜುನ್ ಕಪೂರ್ ಡೇಟಿಂಗ್! title=
ಮಲೈಕಾ ಅರೋರಾ ಜತೆ ಅರ್ಜುನ್ ಕಪೂರ್ ಡೇಟಿಂಗ್

ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಮಾಲ್ಡೀವ್ಸ್‌ನಲ್ಲಿ ತಮ್ಮ ಕಾಲ ಕಳೆಯುತ್ತಿದ್ದಾರೆ. ಈ ವೇಳೆ ಅರ್ಜುನ್ ತಮ್ಮ ಗೆಳತಿಗೆ ಡೇಟ್ ನೈಟ್‌ನೊಂದಿಗೆ ಸರ್ಪ್ರೈಸ್ ನೀಡಿದ್ದಾರೆ. ಅವರು ತಮ್ಮ ರೊಮ್ಯಾಂಟಿಕ್ ಡಿನ್ನರ್‌ನ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 

ಗೆಳತಿ ಮಲೈಕಾ ಅರೋರಾ ಜತೆ ಅರ್ಜುನ್ ಕಪೂರ್ ಮಾಲ್ಡೀವ್ಸ್ ರಜೆ ದಿನಗಳನ್ನು ಎನ್ಜಯ್ ಮಾಡುತ್ತಿದ್ದಾರೆ. ಸೋಮವಾರ ಬೀಚ್‌ನಲ್ಲಿ ಅವರ ಡೇಟ್ ನೈಟ್‌ನ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by Arjun Kapoor (@arjunkapoor)

 

ಹಸಿರು ನಿಲುವಂಗಿಯನ್ನು ಧರಿಸಿರುವ ಮಲೈಕಾ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಅರ್ಜುನ್ ಹಂಚಿಕೊಂಡಿದ್ದಾರೆ. ಮರಳಿನ ಮೇಲೆ ಕಾಲ್ಪನಿಕ ದೀಪಗಳಿಂದ ಮಾಡಿದ ಹೃದಯದಿಂದ ಊಟದ ಸ್ಥಳವನ್ನು ಅಲಂಕರಿಸಲಾಗಿತ್ತು. 

ಸಾಮಾಜಿಕ ಮಾಧ್ಯಮ ಬಳಕೆದಾರರು ಇದಕ್ಕೆ ಹಲವು ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಂದಿಷ್ಟು ಜನ ಮದುವೆಯ ಬಗ್ಗೆ ಪ್ರಸ್ನಿಸಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by Arjun Kapoor (@arjunkapoor)

 

ಅರ್ಜುನ್ ಕೊನೆಯದಾಗಿ ಸೈಫ್ ಅಲಿ ಖಾನ್ ಅವರೊಂದಿಗೆ ಭೂತ್ ಪೊಲೀಸ್‌ನಲ್ಲಿ (Bhoot Police) ಕಾಣಿಸಿಕೊಂಡರು. ಅವರು ಮುಂದಿನ ಏಕ್ ವಿಲನ್ ರಿಟರ್ನ್ಸ್  (Ek Villain Returns) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  

ಇದನ್ನೂ ಓದಿ: Tanvi Shah: ಕ್ರಿಕೆಟ್ ಆಂಕರ್ ಆಗಿ ಮಾರ್ಪಟ್ಟ ಈ ಟೆನಿಸ್ ಆಟಗಾರ್ತಿ ಗ್ಲಾಮರ್‌ನಲ್ಲಿ ಮಾಡೆಲ್‌ಗಳನ್ನೇ ಸೋಲಿಸ್ತಾರೆ!

Trending News