ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್‌ ಬನೇಗಾ ಕರೋಡ್‌ಪತಿ’(Kaun Banega Crorepati)ಯ 13ನೇ ಸೀಸನ್ ಆಗಸ್ಟ್ 23 ರಿಂದ ಆರಂಭವಾಗಲಿದೆ. ಕೆಲವು ಬದಲಾವಣೆಗಳೊಂದಿಗೆ ಬಹುನಿರೀಕ್ಷಿತ ಕಾರ್ಯಕ್ರಮ ಮೂಡಿಬರಲಿದೆ ಅಂತಾ ಆಯೋಜಕರು ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

‘ಕೌನ್‌ ಬನೇಗಾ ಕರೋಡ್‌ಪತಿ’ಯ 13ನೇ ಸೀಸನ್ ನಲ್ಲಿ ಮತ್ತೆ ‘ಆಡಿಯನ್ಸ್ ಪೋಲ್’(Audience Poll)ಲೈಫ್‌ಲೈನ್ ಕಮ್ ಬ್ಯಾಕ್ ಆಗಲಿದೆ. ಸ್ಟುಡಿಯೋ ಆಡಿಯನ್ಸ್ ಮರುಸ್ಥಾಪಿಸಿದ ಬಳಿಕ ಪ್ರದರ್ಶನದ ಸಂಪೂರ್ಣ ನೋಟವೇ ಬದಲಾಗಿದೆ. ಇತರ 3 ಲೈಫ್‌ಲೈನ್‌ಗಳಲ್ಲಿ 50:50 (ಇದರಲ್ಲಿ 2 ತಪ್ಪು ಉತ್ತರಗಳು 4 ಆಯ್ಕೆಗಳಿಂದ ಅಳಿಸಲ್ಪಡುತ್ತವೆ), Ask The Expert(ಇದರಲ್ಲಿ ಸ್ಪರ್ಧಿ ಒಬ್ಬ ವಿಶೇಷ ವೃತ್ತಿಪರರಿಂದ ಸಹಾಯ ಪಡೆಯಬಹುದು) ಮತ್ತು Flip The Question(ಇದರಲ್ಲಿ ಸ್ಪರ್ಧಿಯು ಪ್ರಶ್ನೆಯನ್ನು ಸಂಪೂರ್ಣವಾಗಿ ಬದಲಾಯಿಸಲು ಮತ್ತು ಬದಲಿ ಪ್ರಶ್ನೆಗೆ ವಿಷಯವನ್ನು ಆಯ್ಕೆ ಮಾಡಲು ಅವಕಾಶವನ್ನು ಪಡೆಯುತ್ತಾನೆ) ಇರಲಿವೆ.


ಇದನ್ನೂ ಓದಿ: Viral Video: ಸೋದರಸಂಬಂಧಿ ಮದುವೆಯಲ್ಲಿ ಪತಿ ಜೊತೆ ಸಖತ್ ಡ್ಯಾನ್ಸ್ ಮಾಡಿದ ಐಶ್ವರ್ಯ ರೈ..!


ಈ ಬಗ್ಗೆ ಮಾತನಾಡಿರುವ ಅಮಿತಾಬ್ ಬಚ್ಚನ್(Amitabh Bachchan), ‘ಕೌನ್‌ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದ ಜೊತೆಗಿನ ನನ್ನ ಒಡನಾಟವು 21ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಪ್ರದರ್ಶನದಿಂದ ನಾನು ಎಂದಿಗೂ ತೃಪ್ತಿ ಹೊಂದಲಾರೆ. ಬಹುಶಃ ಮೊದಲ ಬಾರಿಗೆ ಕಳೆದ ಸೀಸನ್ ನಲ್ಲಿ ಸ್ಟುಡಿಯೋ ಆಡಿಯನ್ಸ್ ಆಪ್ಶನ್ ಕಾರ್ಯಕ್ರಮದ ಭಾಗವಾಗಿರಲಿಲ್ಲ. ನಾವು ಲೈಫ್‌ಲೈನ್ ಆಪ್ಶನ್ ನಲ್ಲಿ ಒಂದು ಪ್ರಮುಖ ಬದಲಾವಣೆಯನ್ನು ಕಂಡುಕೊಂಡೆವು. ಪ್ರಮುಖವಾಗಿ ನಾನು ಖಂಡಿತವಾಗಿಯೂ ಪ್ರೇಕ್ಷಕರ ಭಾಗವಹಿಸುವಿಕೆ ಮತ್ತು ಅವರ ಕ್ರಿಯಾಶೀಲತೆಯನ್ನು ಮಿಸ್ ಮಾಡಿಕೊಂಡೆ’ ಅಂತಾ ಹೇಳಿದ್ದಾರೆ.


ಇದನ್ನೂ ಓದಿ: Indian Idol 12 Winner: ಪವನ್ ದೀಪ್ ರಾಜನ್ ಮುಡಿಗೆ ಇಂಡಿಯನ್ ಐಡಲ್ 12 ಪ್ರಶಸ್ತಿ


‘ಈ ಸೀಸನ್ ನಲ್ಲಿ ಸ್ಟುಡಿಯೋ ಆಡಿಯನ್ಸ್(Studio Audience) ಹೊಸ ಹುರುಪಿಯೊಂದಿಗೆ ಮರಳಿ ಬಂದಿರುವುದಕ್ಕೆ ನನಗೆ ಸಂತೋಷವಾಗಿದೆ ಮತ್ತು ಇದು ಲೈಫ್‌ಲೈನ್ ಆಡಿಯನ್ಸ್ ಪೋಲ್ ಆಗಿದೆ. ಇದು ನನಗೆ ಪ್ರತಿವರ್ಷವೂ ಎಲ್ಲಾ ಹಂತಗಳ ಸ್ಪರ್ಧಿಗಳಿಂದ ಸುತ್ತುವರಿದಿರುವ ಒಂದು ಉತ್ಕೃಷ್ಟ ಅನುಭವವಾಗಿದೆ. ಈ ಆಟದಲ್ಲಿ ತೊಡಗಿಸಿಕೊಳ್ಳಲು ಮತ್ತು ಆಟವನ್ನು ಸರಿಯಾದ ರೀತಿ ನಿಭಾಯಿಸಲು ನಾನು ಎದುರು ನೋಡುತ್ತಿದ್ದೇನೆ’ ಅಂತಾ ಬಿಗ್ ಬಿ ಹೇಳಿದ್ದಾರೆ. ‘ಕೌನ್‌ ಬನೇಗಾ ಕರೋಡ್‌ಪತಿ’ಯ 13ನೇ ಸೀಸನ್ ಆಗಸ್ಟ್ 23ರಿಂದ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌(Sony Entertainment Television)ನಲ್ಲಿ ಪ್ರಸಾರವಾಗಲಿದೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ