KCC 2023 : ಇಷ್ಟು ದಿನ ತೆರೆ ಮೇಲೆ ಮಿಂಚುತ್ತಿದ್ದ ಸ್ಯಾಂಡಲ್ ವುಡ್  ತಾರೆಯರು ಇನ್ಮೇಲೆ ಮೈದಾನದಲ್ಲಿ ಬ್ಯಾಟ್ ಹಿಡಿದು ಅಬ್ಬರಿಸಲಿದ್ದಾರೆ. ಕನ್ನಡ ಚಲನಚಿತ್ರ ಕಪ್ ಪಂದ್ಯಾವಳಿಯ 3ನೇ ಆವೃತ್ತಿಯು ಫೆಬ್ರವರಿ 11 ಮತ್ತು 12 ರಂದು ಆರಂಭವಾಗಲಿದ್ದು, 6 ತಂಡಗಳ ನಡುವೆ ನೇರ ಸೆಣಸಾಟ ನಡೆಯಲಿದೆ.


COMMERCIAL BREAK
SCROLL TO CONTINUE READING

ಎರಡು ವರ್ಷಗಳ ಯಶಸ್ಸಿನ ಹಿನ್ನೆಲೆಯಲ್ಲಿ ಮೂರನೇ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಲು ಸಂಘಟಕರು ಮುಂದಾಗಿದ್ದಾರೆ. ಈ ಬಾರಿ ಮೈಸೂರಿನಲ್ಲಿ ಟೂರ್ನಿ ನಡೆಯಲಿದ್ದು, ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪೆಟ್ರಿಯೊಟ್ಸ, ಗಂಗಾ ವಾರಿಯರ್ಸ್, ಹೊಯ್ಸಳ ಈಗಲ್ಸ್ , ಒಡೆಯರ್ ಚಾರ್ಜರ್ಸ್, ಕದಂಬ ಲಯನ್ಸ್  ಸೇರಿದಂತೆ ಒಟ್ಟು ಆರು ತಂಡಗಳು ಮೈದಾನಕ್ಕೀಳಿಯಲಿವೆ.


ನಿರ್ಮಾಪಕ ಕಾರ್ತಿಕ್ ಗೌಡ, ಕೆ. ಪಿ ಶ್ರೀಕಾಂತ್, ನಂದಕಿಶೋರ್, ದಿನಕರ್ ತೂಗುದೀಪ, ಮತ್ತಿತರರು ಟೂರ್ನಿ ಆಯೋಜನೆಯಲ್ಲಿ ಪ್ರಧಾನ ಪಾತ್ರ ವಹಿಸಲಿದ್ದಾರೆ. ಡಾ. ಶಿವರಾಜಕುಮಾರ್, ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಕಾರ್ತಿಕ್ ಜಯರಾಮ್(ಜೆಕೆ), ಡಾರ್ಲಿಂಗ್ ಕೃಷ್ಣ, ಪ್ರದೀಪ್, ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕಾರ್ತಿಕ್ ಗೌಡ, ಕೆ. ಪಿ ಶ್ರೀಕಾಂತ್, ನಂದಕಿಶೋರ್, ದಿನಕರ್ ತೂಗುದೀಪ ಮತ್ತಿತರರು ಪಂದ್ಯಾವಳಿಯ ಆಯೋಜನೆಯಲ್ಲಿ ಪ್ರಧಾನ ಪಾತ್ರ ವಹಿಸಲಿದ್ದಾರೆ.


ವಿಶಿಷ್ಟವಾಗಿ ರಿಪಬ್ಲಿಕ್‌ ಡೇ ವಿಶ್‌ ಮಾಡಿದ ರಿಯಲ್‌ ಸ್ಟಾರ್‌ ಉಪ್ಪಿ..! ಏನ್‌ ತಲೆ ಬಾಸ್‌ ನಿಮ್ಮದು


ತಂಡ ಮತ್ತು ಕ್ಯಾಪ್ಟನ್ ಹೆಸರು:
1) ರಾಷ್ಟ್ರಕೂಟ ಪ್ಯಾಂಥರ್ಸ್- ಕಾರ್ತಿಕ್ ಜಯರಾಮ್
2) ವಿಜಯನಗರ ಪೆಟ್ರಿಯೊಟ್ಸ- ಪ್ರದೀಪ್
3) ಗಂಗಾ ವಾರಿಯರ್ಸ್- ಡಾರ್ಲಿಂಗ್ ಕೃಷ್ಣ 
4) ಕದಂಬ ಲಯನ್ಸ್ - ಗಣೇಶ್
5) ಹೊಯ್ಸಳ ಇಗಲ್ಸ್ - ಕಿಚ್ಚ ಸುದೀಪ್
6) ಒಡೆಯರ್ ಚಾರ್ಜರ್ಸ್ - ಶಿವರಾಜಕುಮಾರ್


ಆಟಗಳ ವಿವರ 
ದಿನ 1

ಪಂದ್ಯ-1 ಗಂಗಾ ವಾರಿಯರ್ಸ್ VS ಹೊಯ್ಸಳ ಈಗಲ್ಸ್
ಪಂದ್ಯ-2 ಹೊಯ್ಸಳ ಈಗಲ್ಸ್ VS ಒಡೆಯರ್ ಚಾರ್ಜರ್ಸ್ ಪಂದ್ಯ-3 ಕದಂಬ ಲಯನ್ಸ್ VS ರಾಷ್ಟ್ರಕೂಟ ಪ್ಯಾಂಥರ್ಸ್


ಇದನ್ನೂ ಓದಿ- Darshan Kranti : ದರ್ಶನ್‌ ʼಕ್ರಾಂತಿʼಗೆ ಶುಭಕೋರಿದ ನಟ ರಾಕ್ಷಸ ಡಾಲಿ..!


ದಿನ-2
ಪಂದ್ಯ-1 ವಿಜಯನಗರ ಪೇಟ್ರಿಯಾಟ್ಸ್ VS ಕದಂಬ ಲಯನ್ಸ್
ಪಂದ್ಯ-2 ಗಂಗಾ ವಾರಿಯರ್ಸ್ VS ಒಡೆಯರ್ ಚಾರ್ಜರ್ಸ್
ಪಂದ್ಯ-3 ರಾಷ್ಟ್ರಕೂಟ ಪ್ಯಾಂಥರ್ಸ್ VS ವಿಜಯನಗರ ದೇಶಪ್ರೇಮಿಗಳು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.